
ಸರಿಯಾದ ಹೆಸರು ಆಯ್ಕೆ ಮಾಡಿ. ಆಕರ್ಷಕ ಪ್ಯಾಕೇಜಿಂಗ್, FSSAI ನೋಂದಣಿ, ಸ್ಪಷ್ಟವಾದ ಲೇಬಲಿಂಗ್ ಇರಲಿ. ‘ಆರೋಗ್ಯಕರ + ತ್ವರಿತ’ ಅನ್ನೋ ಸ್ಪಷ್ಟ ಸಂದೇಶ ಗ್ರಾಹಕರಿಗೆ ತಲುಪುವಂತೆ ನೋಡಿಕೊಳ್ಳಿ. ಬ್ರ್ಯಾಂಡ್ ಮೇಲೆ ನಂಬಿಕೆ ಹೆಚ್ಚಾದರೆ, ಮಾರಾಟ ತಾನಾಗಿಯೇ ಹೆಚ್ಚುತ್ತದೆ.
ಮಾರಾಟ ಹೆಚ್ಚಿಸಲು ಈ ತಂತ್ರಗಳನ್ನು ಬಳಸಿ
ಪಲಕ್ ತಮ್ಮ ಉತ್ಪನ್ನಗಳನ್ನು ವೆಬ್‌ಸೈಟ್, ಸೂಪರ್‌ಮಾರ್ಕೆಟ್‌ಗಳು, ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾರಾಟ ಮಾಡುತ್ತಿದ್ದಾರೆ. ಫುಡ್ ಎಕ್ಸಿಬಿಷನ್, ಫುಡ್ ಫೆಸ್ಟಿವಲ್‌ಗಳಲ್ಲಿ ಭಾಗವಹಿಸಿ ಗ್ರಾಹಕರನ್ನು ನೇರವಾಗಿ ಭೇಟಿಯಾಗುತ್ತಿದ್ದಾರೆ. ಇದಕ್ಕಾಗಿ ನೀವು ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ಶುರು ಮಾಡಿ. ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮೂಲಕ ಡೆಮೋ ವಿಡಿಯೋಗಳನ್ನು ಹಾಕಿ. ಆನ್‌ಲೈನ್ ಮಾರುಕಟ್ಟೆಗಳಲ್ಲಿ ಲಿಸ್ಟ್ ಮಾಡಿ. ಸ್ಥಳೀಯ ಕಿರಾಣಿ ಅಂಗಡಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಿ.
ಹೆಲ್ತ್ ಕ್ಲಬ್, ಜಿಮ್‌ಗಳಲ್ಲಿ ಪ್ರಚಾರ ಮಾಡಿ. ಆರಂಭದಲ್ಲಿ ಲಾಭ ಕಡಿಮೆ ಇದ್ದರೂ, ದೀರ್ಘಾವಧಿಯಲ್ಲಿ ಆದಾಯ ವೇಗವಾಗಿ ಹೆಚ್ಚುತ್ತದೆ. ಬಿಸಿನೆಸ್‌ನಲ್ಲಿ ಯಶಸ್ಸು ಗಳಿಸಲು ಉತ್ಪನ್ನದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬೇಡಿ, ಮಾರುಕಟ್ಟೆ ಟ್ರೆಂಡ್‌ಗಳನ್ನು ಗಮನಿಸಿ, ನಿರಂತರವಾಗಿ ಹೊಸ ಉತ್ಪನ್ನಗಳನ್ನು ತನ್ನಿ, ಗ್ರಾಹಕರ ನಂಬಿಕೆ ಗಳಿಸಿ, ಮತ್ತು ಸಣ್ಣ ತಂಡದೊಂದಿಗೆ ಪ್ರಾರಂಭಿಸಿ ಕ್ರಮೇಣ ವಿಸ್ತರಿಸಿ.
ಇದನ್ನೂ ಓದಿ: ಕರ್ನಾಟಕದಲ್ಲಿ ಸದ್ಯ ಇದೇ ಹೊಸ ಬ್ಯುಸಿನೆಸ್ ಟ್ರೆಂಡ್; ಈ ಮಾರ್ಕೆಟಿಂಗ್ ಬಗ್ಗೆನೇ ಊರೆಲ್ಲಾ ಮಾತುಕತೆ