‘ಅಮೃತಧಾರೆ’ ಧಾರಾವಾಹಿಯಲ್ಲಿ, ಮಲ್ಲಿಯ ಪ್ರಿಯಕರನ ಹಿನ್ನೆಲೆ ತಿಳಿಯಲು ಹೊರಟ ಗೌತಮ್ ಮತ್ತು ಭೂಮಿಕಾಗೆ ಅಚ್ಚರಿ ಕಾದಿದೆ. ಮಲ್ಲಿಯ ಪ್ರಿಯಕರ ಸುನಿಲ್, ಗೌತಮ್‌ನ ದೊಡ್ಡ ಅಭಿಮಾನಿಯಾಗಿದ್ದು, ಈ ಬೆಳವಣಿಗೆಯು ಜೈದೇವ್ ವಿರುದ್ಧ ಗೌತಮ್‌ನ ಆಟಕ್ಕೆ ಸಹಕಾರಿಯಾಗುವ ಸಾಧ್ಯತೆಯಿದೆ.
ಅಮೃತಧಾರೆ ಸೀರಿಯಲ್ (Amruthadhaare Serial)ನಲ್ಲಿ ಸದ್ಯ ಮಲ್ಲಿಯ ಮದುವೆಯ ಬಗ್ಗೆ ಗೌತಮ್ ಮತ್ತು ಭೂಮಿಕಾ ತಲೆ ಕೆಡಿಸಿಕೊಂಡಿದ್ದಾರೆ. ತನ್ನ ಜಾಸೂಸಿಕೆ ಮಾಡಲು ಬಂದಿದ್ದಾಳೆ ಎಂದು ಮಲ್ಲಿ ಇದಾಗಲೇ ಭೂಮಿಕಾ ಮೇಲೆ ಕೋಪ ಮಾಡಿಕೊಂಡಿದ್ದಳು.

ಮಲ್ಲಿಯ ಲವರ್ ಬಗ್ಗೆ ಭೂಮಿಕಾಳಿಂದ ತಿಳಿದ ಗೌತಮ್, ಮಲ್ಲಿಯ ಲೈಫ್ನಲ್ಲಿ ಮತ್ತೊಮ್ಮೆ ಕೆಟ್ಟದ್ದಾಗಬಾರದು ಎನ್ನುವ ಭೂಮಿಕಾಳ ಭಾವನೆಗೆ ಬೆಲೆ ಕೊಟ್ಟು ಆತನ ಹಿನ್ನೆಲೆ ತಿಳಿದುಕೊಳ್ಳಲು ಹೊರಟಿದ್ದಾನೆ.

ಅವನು ಇದಕ್ಕಾಗಿ ಆನಂದ್ ಸಹಾಯ ಬೇಡಿದಾಗ, ಆ ಹುಡುಗ ತನ್ನ ಕಂಪೆನಿಯಲ್ಲಿಯೇ ಕೆಲಸ ಮಾಡುವುದು ಎಂದು ತಿಳಿದು ಆನಂದ್ಗೆ ಖುಷಿಯಾಗಿದೆ.

ಅಷ್ಟರಲ್ಲಿಯೇ ಸುನಿಲ್ ಆನಂದ್ನನ್ನು ನೋಡಿ ಖುಷಿಪಟ್ಟಿದ್ದಾನೆ. ಆಗ ಆನಂದ್ ನಾನು ನಿನಗೆ ಗೊತ್ತಾ ಎಂದಾಗ, ಗೌತಮ್ ಸರ್ನ ಅಭಿಮಾನಿ ನಾನು. ಅವರ ಹೆಸರು ಬಂದಾಗಲೆಲ್ಲಾ ನಿಮ್ಮ ಹೆಸರು ಬರುತ್ತೆ. ಅವರನ್ನು ಒಮ್ಮೆ ನೋಡುವ ಆಸೆ ಎಂದಿದ್ದಾನೆ.

ಗೌತಮ್ ಅಲ್ಲಿಯೇ ಇದ್ದ ಕಾರಣ, ಆನಂದ್ ಗೌತಮ್ನನ್ನು ತೋರಿಸಿದಾಗ, ಸುನಿಲ್ ಓಡಿಹೋಗಿ ಗೌತಮ್ ಕಾಲಿಗೆ ಬಿದ್ದಿದ್ದಾನೆ. ನಾನು ನಿಮ್ಮ ಅಭಿಮಾನಿ. ನಿಮ್ಮಂತೆಯೇ ದೊಡ್ಡ ವ್ಯಕ್ತಿ ಆಗಬೇಕು ಎನ್ನುವುದೇ ನನ್ನ ಆಸೆ ಎಂದಿದ್ದಾನೆ.

ಒಟ್ಟಿನಲ್ಲಿ ಸೀರಿಯಲ್ಗೆ ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಸುನಿಲ್ ಬಗ್ಗೆ ತಿಳಿದುಕೊಳ್ಳಲು ಇನ್ನು ಗೌತಮ್ಗೆ ಹೆಚ್ಚು ದಿನ ಬೇಕಾಗಲ್ಲ. ಸುನಿಲ್ನನ್ನೇ ಮುಂದಿಟ್ಟುಕೊಂಡು ಆತನಿಗೆ ಜೈದೇವ್ನನ್ನು ಆಟವಾಡಿಸಲು ಇನ್ನಷ್ಟು ಸುಲಭ ಆಗಬಹುದು.

Source link
Amruthadhaare Big Twist: ಅವನೇ ಇವನು- ಗೌತಮ್ಗೆ ಬಿಗ್ ಸರ್ಪ್ರೈಸ್ ಕೊಟ್ಟ ಮಲ್ಲಿ ಲವರ್ ಸುನಿ!