ಗ್ರೌಂಡ್ನಲ್ಲಿ ತಮ್ಮ ಆಟದಿಂದ ಅದ್ಭುತಗಳನ್ನು ಸೃಷ್ಟಿಸುವ ಕ್ರಿಕೆಟಿಗರು, ನಿಜ ಜೀವನದಲ್ಲಿಯೂ ಅಷ್ಟೇ ಜಾಲಿಯಾಗಿರುತ್ತಾರೆ. ಮೇಲಿನ ಫೋಟೋದಲ್ಲಿರುವ ಈ ಸ್ಟಾರ್ ಆಟಗಾರ ಕೂಡಾ ಅಂಥವರಲ್ಲೇ ಒಬ್ಬರು. ಅಂದಹಾಗೆ, ಈ ಆಟಗಾರ ಯಾರೆಂದು ಗುರುತಿಸಿದ್ರಾ?

ಮೇಲಿನ ಫೋಟೋದಲ್ಲಿರುವುದು ಬೇರಾರೂ ಅಲ್ಲ, ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ. ತನ್ನ ಗೆಳತಿ ಮಹೀಕಾ ಶರ್ಮಾ ಅವರ ಹುಟ್ಟುಹಬ್ಬದ ಪ್ರಯುಕ್ತ ಇನ್ಸ್ಟಾಗ್ರಾಮ್ನಲ್ಲಿ ಈ ಪೋಸ್ಟ್ ಮಾಡಿದ್ದಾರೆ. ಇಬ್ಬರೂ ಒಟ್ಟಿಗೆ ಇರುವ ಸುಂದರ ಫೋಟೋ ಹಂಚಿಕೊಂಡು, ‘ಹ್ಯಾಪಿ ಬರ್ತ್ಡೇ ಮೈ ಪ್ರಿನ್ಸಸ್’ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಶುಭಾಶಯಗಳ ಸುರಿಮಳೆಗೈದಿದ್ದಾರೆ.

ಹಾರ್ದಿಕ್ ತನ್ನ ಈ ಸಂಬಂಧವನ್ನು 2025ರ ಕೊನೆಯಲ್ಲಿ ಅಧಿಕೃತವಾಗಿ ಘೋಷಿಸಿದರು. ಮಾಜಿ ಪತ್ನಿ ನತಾಶಾ ಅವರೊಂದಿಗೆ 2024ರ ಜುಲೈನಲ್ಲಿ ನಡೆದ ವಿಚ್ಛೇದನದ ಒಂದು ವರ್ಷದ ನಂತರ ಈ ವಿಷಯವನ್ನು ಬಹಿರಂಗಪಡಿಸಿದರು. ಅಂದಿನಿಂದ, ಹಾರ್ದಿಕ್ ಮತ್ತು ಮಹೀಕಾ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಮಹಿೇಕಾ, ಹಾರ್ದಿಕ್ ಅವರ ಮಗ ಅಗಸ್ತ್ಯನೊಂದಿಗೂ ಸಮಯ ಕಳೆದಿದ್ದು, ಇದು ಅವರ ನಡುವಿನ ಬಾಂಧವ್ಯವನ್ನು ತೋರಿಸುತ್ತದೆ.

ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ ಸಮಯದಲ್ಲಿ ಜಿಯೋಸ್ಟಾರ್ಗೆ ನೀಡಿದ ಸಂದರ್ಶನದಲ್ಲಿ ಹಾರ್ದಿಕ್ ತಮ್ಮ ಮನದ ಮಾತುಗಳನ್ನು ಹಂಚಿಕೊಂಡರು. ತಾನು ಬ್ಯಾಟರ್ ಆಗಿ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಇನ್ನೂ ಬಳಸಿಕೊಂಡಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ‘ಕಳೆದ ಐಪಿಎಲ್ ನಂತರ, ನನ್ನ ಸಂಪೂರ್ಣ ಸಾಮರ್ಥ್ಯದಿಂದ ಆಡಲು ನಿರ್ಧರಿಸಿದೆ. ಇಲ್ಲಿಯವರೆಗೆ ನನ್ನ ಬ್ಯಾಟಿಂಗ್ ಸಾಮರ್ಥ್ಯದ ಶೇ. 40ರಷ್ಟನ್ನು ಮಾತ್ರ ಬಳಸಿದ್ದೇನೆ’ ಎಂದು ಹೇಳಿದರು. ತನ್ನ ಆಟದ ಅತ್ಯುತ್ತಮ ಪ್ರದರ್ಶನ ನೀಡಲು ಸ್ವಲ್ಪ ಸಮಯ ಬೇಕಾಯಿತು ಎಂದು ಹೇಳಿದ್ದಾರೆ.

2026ರ ವ್ಯಾಲೆಂಟೈನ್ಸ್ ಡೇ ದಿನದಂದು ಹಾರ್ದಿಕ್ ತನ್ನ ಕತ್ತಿನ ಹಿಂಭಾಗದಲ್ಲಿ ಟ್ಯಾಟೂ ಹಾಕಿಸಿಕೊಂಡರು. ಅದರಲ್ಲಿ ‘M’ ಅಕ್ಷರ ಮತ್ತು ಎರಡು ಚಿರತೆಗಳಿವೆ. ಆ ಎರಡು ಚಿರತೆಗಳು ಅವರ ಬಲವಾದ ಬಂಧವನ್ನು ಸಂಕೇತಿಸುತ್ತವೆ. ಒಂಟಿಯಾಗಿದ್ದಾಗ ಶಕ್ತಿಶಾಲಿ, ಒಟ್ಟಿಗೆ ಸೇರಿದರೆ ಅಜೇಯ ಎಂಬ ಭಾವನೆಯನ್ನು ಇದು ತೋರಿಸುತ್ತದೆ.

ಈ ಟ್ಯಾಟೂವನ್ನು ವಿನ್ಯಾಸಗೊಳಿಸಿದ ಕಲಾವಿದ ಸನ್ನಿ ಭಾನುಶಾಲಿ, ‘ಮೊದಲು ಹಾರ್ದಿಕ್ ಕೇವಲ ಒಂದು ಅಕ್ಷರವನ್ನು ಅಂದುಕೊಂಡಿದ್ದರು. ಆದರೆ ಮಾತನಾಡಿದ ನಂತರ, ಅವರ ಸಂಬಂಧ ಎಷ್ಟು ಆಳವಾಗಿದೆ ಎಂದು ಅರ್ಥವಾಯಿತು. ಒಬ್ಬರ ಬಲವನ್ನು ಇನ್ನೊಬ್ಬರು ಹೆಚ್ಚಿಸುವ ಪಾಲುದಾರರು ಅವರು. ಅದಕ್ಕಾಗಿಯೇ ಚಿರತೆಯ ಸಂಕೇತ ಸರಿ ಎನಿಸಿತು’ ಎಂದು ವಿವರಿಸಿದರು.

ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ನಡೆದ 2026ರ ಟಿ20 ವಿಶ್ವಕಪ್ ಗ್ರೂಪ್ ಹಂತದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಮತ್ತೊಂದು ಸಾಧನೆ ಮಾಡಿದರು. ಈ ಪಂದ್ಯದಲ್ಲಿ 21 ಎಸೆತಗಳಲ್ಲಿ 30 ರನ್ ಗಳಿಸಿದ ಹಾರ್ದಿಕ್, ಟಿ20 ಕ್ರಿಕೆಟ್ನಲ್ಲಿ 6,000 ರನ್ ಪೂರೈಸುವುದರ ಜೊತೆಗೆ 200 ವಿಕೆಟ್ ಪಡೆದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆ ಬರೆದರು.

Source link
ಸ್ವಿಮ್ಮಿಂಗ್ ಪೂಲ್ನಲ್ಲಿ ಗರ್ಲ್ಫ್ರೆಂಡ್ ಜೊತೆ ಎಂಜಾಯ್ ಮಾಡ್ತಿರೋ ಈ ಕ್ರಿಕೆಟಿಗ ಯಾರು ಗೊತ್ತಾಯ್ತಾ?