Headlines

ರಕ್ಷಿತ್​ ಶೆಟ್ಟಿ ಚಾಕ್ಲೇಟ್​ ತಿನ್ನೋ ಮಗುವಲ್ಲ: Rashmika Mandanna ಮದ್ವೆಗೆ ಪ್ರಮೋದ್​ ಶೆಟ್ಟಿ ರಿಯಾಕ್ಷನ್​!

ರಕ್ಷಿತ್​ ಶೆಟ್ಟಿ ಚಾಕ್ಲೇಟ್​ ತಿನ್ನೋ ಮಗುವಲ್ಲ: Rashmika Mandanna ಮದ್ವೆಗೆ ಪ್ರಮೋದ್​ ಶೆಟ್ಟಿ ರಿಯಾಕ್ಷನ್​!

ರಕ್ಷಿತ್​ ಶೆಟ್ಟಿ ಚಾಕ್ಲೇಟ್​ ತಿನ್ನೋ ಮಗುವಲ್ಲ: Rashmika Mandanna ಮದ್ವೆಗೆ ಪ್ರಮೋದ್​ ಶೆಟ್ಟಿ ರಿಯಾಕ್ಷನ್​!

ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಅವರ ಮದುವೆ ಸುದ್ದಿ ಚರ್ಚೆಯಲ್ಲಿರುವಾಗಲೇ, ರಕ್ಷಿತ್ ಶೆಟ್ಟಿ ಜೊತೆಗಿನ ಅವರ ಹಿಂದಿನ ನಿಶ್ಚಿತಾರ್ಥದ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಮಾತನಾಡಿದ ನಟ ಪ್ರಮೋದ್ ಶೆಟ್ಟಿ ಹೇಳಿದ್ದೇನು?

ನ್ಯಾಷನಲ್​ ಕ್ರಷ್​ ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಮದುವೆಗೆ (Rashmika Mandanna and Vijay Devarakonda marriage) ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಮದುವೆ ಅಂತೆ ಅಂತೆ ಎನ್ನುತ್ತಲೇ ಇದೀಗ ನಿಜವಾಗಿದೆ. ರಾಜಸ್ಥಾನದಲ್ಲಿ ಮದುವೆಗೆ ರೆಡಿಯಾಗಿದೆ ಈ ಜೋಡಿ.

ಇದರ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಮತ್ತು ಸ್ಯಾಂಡಲ್​ವುಡ್​ ನಟ ರಕ್ಷಿತ್​ ಶೆಟ್ಟಿ (Rakshit Shetty engagement) ಅವರ ಎಂಗೇಜ್​ಮೆಂಟ್​ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಕೆಲ ವರ್ಷಗಳ ಹಿಂದೆ ರಶ್ಮಿಕಾ ಮತ್ತು ರಕ್ಷಿತ್​ ಶೆಟ್ಟಿ ಎಂಗೇಜ್​ಮೆಂಟ್ ಮಾಡಿಕೊಂಡಿದ್ದರು. ಈ ಬಗ್ಗೆ ಅವರು ಸೋಷಿಯಲ್​ ಮೀಡಿಯಾದಲ್ಲಿಯೂ ವಿಷಯ ತಿಳಿಸಿದ್ದರು.

ಆದರೆ, ಯಾವುದೋ ಕಾರಣದಿಂದ ಈ ಮದುವೆ ಮುರಿದುಬಿತ್ತು. ಇದಾಗಿ ಕೆಲವು ವರ್ಷವಾಗಿದ್ದರೂ ಸೆಲೆಬ್ರಿಟಿಯಾಗಿರುವ ಕಾರಣ, ಇವರ ಎಂಗೇಜ್​ಮೆಂಟ್​ ಸುದ್ದಿ ಸದ್ದು ಮಾಡುತ್ತಲೇ ಇದ್ದು, ಇದೀಗ ರಶ್ಮಿಕಾ ಮದುವೆ ಹಿನ್ನೆಲೆಯಲ್ಲಿ ಮತ್ತೊಮ್ಮೆ ವಿಷಯ ಚರ್ಚೆಗೆ ಬಂದಿದೆ.

ಈ ಬಗ್ಗೆ ನಟ ಪ್ರಮೋದ್ ಶೆಟ್ಟಿ ಅವರನ್ನು ಮಾಧ್ಯಮಗಳು ಮಾತನಾಡಿದ್ದಾರೆ. ಶೇಷ 2016 ಫಿಲ್ಮ್‌ ಪ್ರಮೋಷನ್​ಗೆ ನಟ ಪ್ರಮೋದ್ ಶೆಟ್ಟಿ ದಾವಣಗೆರೆಗೆ ಹೋಗಿದ್ದಾಗ ಈ ಪ್ರಶ್ನೆ ಅವರಿಗೆ ಎದುರಾಗಿತ್ತು. ರಶ್ಮಿಕಾ ಮಂದಣ್ಣ ಅವರ ಮದುವೆಗೆ ಹೋಗ್ತೀರಾ ಎನ್ನುವ ಪ್ರಶ್ನೆ ಕೇಳಿದಾಗ, ಮದುವೆಯ ಆಮಂತ್ರಣ ಪತ್ರಿಕೆ ಬಂದಿಲ್ಲ. ಬಂದ್ರೆ ಹೋಗ್ತೇನೆ. ಬರೋದಿಲ್ಲ ಎನ್ನುವುದು ನನಗೂ ಗೊತ್ತು, ಅದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅದರಲ್ಲಿ ಹೊಸತೇನಿದೆ ಎಂದು ನಟ ಪ್ರಶ್ನಿಸಿದ್ದಾರೆ.

ಕೊನೆಗೆ, ರಕ್ಷಿತ್​ ಶೆಟ್ಟಿಯ ಬಗ್ಗೆ ಪ್ರಶ್ನಿಸಿದಾಗ, ಅವನೇನು ಚಾಕ್ಲೆಟ್​ ತಿನ್ನೋ ಚಿಕ್ಕ ಮಗುವಲ್ಲ. ಅವನು ಈ ಬಗ್ಗೆ ಎಲ್ಲಾ ತಲೆ ಕೆಡಿಸಿಕೊಳ್ಳುವುದಿಲ್ಲ. ಫೀನಿಕ್ಸ್‌ನಂತೆ ಮೇಲೆ ಬರ್ತಾನೆ, ನೋಡ್ತಾ ಇರಿ ಎಂದಿದ್ದಾರೆ.

ರಕ್ಷಿತ್​ ಶೆಟ್ಟಿ ಕೆಲವು ದಿನಗಳಿಂದ ಕಾಣಿಸ್ತಾ ಇಲ್ವಲ್ಲಾ ಎನ್ನುವ ಪ್ರಶ್ನೆ ಪ್ರಮೋದ್​ ಶೆಟ್ಟಿ (Pramod Shetty) ಅವರಿಗೆ ಎದುರಾದಾಗ ಇತ್ತೀಚೆಗಷ್ಟೇ ಹೇಳಿಕೆ ಕೊಟ್ಟಿದ್ದಾನಲ್ವಾ? ಅವನು ಎಲ್ಲೂ ಹೋಗಿಲ್ಲ. ಅವನು ಸಿನಿಮಾ ಬರೆಯೋದೇ ಹಾಗೆ. ಸ್ವಲ್ಪ ಕಳೆದೋಗ್ತಾನೆ. ವಾಪಸ್ ಬಂದು ಆರಾಮಾಗೆ ಸಿನಿಮಾ ಮಾಡ್ತಾನೆ. ಅವ್ನಿಗೆ ನಮ್ಮಷ್ಟೆಲ್ಲ ಅರ್ಜೆಂಟ್ ಇಲ್ಲ’ ಎಂದು ಹೇಳಿದರು.

Source link

Leave a Reply

Your email address will not be published. Required fields are marked *