
ಕಾನ್ಪುರ ಕ್ರಿಕೆಟ್ ಪಂದ್ಯ ನಡುವೆ ಜೇನುನೊಣ ದಾಳಿ, ಏಕಾಏಕಿ ಜೇನುನೊಣ ದಾಳಿ ನಡೆಸಿದೆ. ಆಟಗಾರರು, ಅಂಪೈರ್ ಸೇರಿದಂತೆ ದಿಕ್ಕಾಪಾಲಾಗಿ ಓಡಿದ್ದಾರೆ. ಆದರೆ ತೀವ್ರ ದಾಳಿಯಿಂದ ಅಂಪೈರ್ ಮೃತಪಟ್ಟರೆ, ಕ್ರಿಕೆಟಿಗರು ಪರಿಸ್ಥಿತಿ ಗಂಭೀರವಾಗಿದೆ.
ಕಾನ್ಪುರ (ಫೆ.19) ಕೆಡಿಎಂಎ ಲೀಗ್ ಟೂರ್ನಿಯಲ್ಲಿ ದುರಂತ ನಡೆದಿದೆ. ಕಾನ್ಪುರದ ಉನ್ನಾವೋದ ಸಪ್ರು ಮೈದಾನದಲ್ಲಿ ವೈಎಂಸಿಸಿ ಹಾಗೂ ಪ್ಯಾರಾಮೌಂಟ್ ನಡುವಿನ ಪಂದ್ಯದ ವೇಳೆ ಜೇನುನೊಣ ದಾಳಿ ನಡೆಸಿದೆ. ಪಂದ್ಯ ರೋಚಕ ಘಟ್ಟದಲ್ಲಿರುವಾಗ ಏಕಾಏಕಿ ಬಂದ ಜೋನುನೊಣ ಗುಂಪು ದಾಳಿ ಮಾಡಿದೆ. ಈ ದಾಳಿಯಲ್ಲಿ ಕಾನ್ಪುರ ಕ್ರಿಕೆಟ್ ಅಸೋಶಿಯೇಶನ್ ಅಂಪೈರ್ ಮಾಣಿಕ್ ಗುಪ್ತಾ ಮೃತಪಟ್ಟಿದ್ದಾರೆ. ಇತ್ತ ಹಲವು ಕ್ರಿಕೆಟಿಗರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ.
ಅಂಪೈರ್ ಮುತ್ತಿಕೊಂಡ ಜೋನುನೊಣ
ಲೀಗ್ ಟೂರ್ನಿಯಲ್ಲಿ ಆಟಗಾರರು, ಅಂಪೈರ್ ಎಲ್ಲರೂ ಜರ್ಸಿಯಲ್ಲಿದ್ದರು. ಎರಡು ತಂಡದ ಆಟಗಾರರು ನೀಲಿ ಹಾಗೂ ಕಡು ನೀಲಿ ಜರ್ಸಿ ಧರಿಸಿದ್ದರು. ಇತ್ತ ಅಂಪೈರ್ ಸಹಜವಾಗಿ ಬಿಳಿ ಡ್ರೆಸ್‌ನಲ್ಲಿದ್ದರು. ಸಪ್ರು ಮೈದಾನದತ್ತ ಬಂದ ಜೋನುನೊಣ ಏಕಾಏಕಿ ಮೈದಾನದಲ್ಲಿದ್ದ ಆಟಗಾರರ ಮೇಲೆ ದಾಳಿ ನಡೆಸಿದೆ. ಬಿಳಿ ಬಣ್ಣದ ವಸ್ತ್ರದಲ್ಲಿದ್ದ ಇಬ್ಬರು ಅಂಪೈರ್ ಮುತ್ತಿಕೊಂಡಿದೆ. ಮಾಣಿಕ್ ಗುಪ್ತಾ ಹಾಗೂ ಜಗದೀಶ್ ಶರ್ಮಾ ಇಬ್ಬರು ಅಂಪೈರ್ ಮೇಲೆ ಜೋನುನೊಣ ಮುತ್ತಿಕೊಂಡಿದೆ. ಇತ್ತ ಆಟಗಾರರತ್ತವೂ ಜೋನುನೊಣ ದಾಳಿ ನಡೆಸಿದೆ.
ಅಂಪೈರ್ ಮುತ್ತಿಕೊಂಡ ಬೆನ್ನಲ್ಲೇ ಆಟದಾರರು ಇಬ್ಬರು ಅಂಪೈರ್‌ಗಳನ್ನು ಬ್ಯಾಟ್ ಬೀಸುತ್ತಾ ಪೆವಿಲಿಯನ್‌ಗೆ ಕರೆತರುವ ಪ್ರಯತ್ನ ಮಾಡಿದ್ದಾರೆ. ಆದರೆ ಇದರ ನಡುವೆ ಜೋನುನೊಣ ಭಾರಿ ಸಂಖ್ಯೆದಲ್ಲಿ ದಾಳಿ ಮಾಡಿದೆ. ಈ ಪೈಕಿ 65 ವರ್ಷದ ಮಾಣಿಕ್ ಗುಪ್ತಾ ಜೋನುನೊಣ ದಾಳಿಯಿಂದ ಮೃತಪಟ್ಟಿದ್ದಾರೆ. ಮತ್ತೊರ್ವ ಅಂಪೈರ್ ಜಗದೀಶ್ ಶರ್ಮಾ ತೀವ್ರವಾಗಿ ಗಾಯಗೊಂಡಿದ್ದಾರೆ.
ಅಂಪೈರ್ ಹಾಗೂ ಗಾಯಗೊಂಡ ಕ್ರಿಟಿಗರನ್ನು ತಕ್ಷಣವೇ ಉನ್ನಾವೋದ ಶುಕಲಗಂಜ್ ಬಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಂಪೈರ್ ಮಾಣಿಕ್ ಗುಪ್ತಾ ಪರಿಸ್ಥಿತಿ ಗಂಭೀರವಾಗಿತ್ತು. ಹೀಗಾಗಿ ಕಾನ್ಪುರದ ಲಾಲಾ ಲಜಪತ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಅಲ್ಲಿಂದ ಲಕ್ಷ್ಮಿಪತ್ ಸಿಂಘಾನಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಅಷ್ಟೊತ್ತಿಗೆ ಮಾಣಿಕ್ ಗುಪ್ತಾ ಮೃತಪಟ್ಟಿದ್ದಾರೆ. 30 ವರ್ಷಗಳಿಂದ ಕಾನ್ಪುರ ಕ್ರಿಕೆಟ್ ಅಸೋಯೇಶನ್ ಅಡಿಯಲ್ಲಿ ಮಾಣಿಕ್ ಗುಪ್ತಾ ಅಂಪೈರಿಂಗ್ ಮಾಡುತ್ತಿದ್ದರು. ರಣಜಿ ಸೇರಿದಂತೆ ಹಲವು ದೇಶಿ ಪಂದ್ಯಗಳಿಗೆ ಮಾಣಿಕ್ ಗುಪ್ತಾ ಅಂಪೈರಿಂಗ್ ಮಾಡಿದ್ದಾರೆ.
10 ನಿಮಿಷದ ದಾಳಿಯಲ್ಲಿ ದುರಂತ
ಜೋನುನೊಣದ ಏಕಾಏಕಿ ದಾಳಿಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. 10 ನಿಮಿಷದ ದಾಳಿಯಲ್ಲಿ ದುರಂತವೇ ನಡೆದು ಹೋಗಿದೆ. ಕ್ರಿಕೆಟಿಗರ ಮೇಲೂ ಜೋನುನೊಣ ದಾಳಿ ನಡೆಸಿದೆ. ಅಂಪೈರ್ ಜಗದೀಶ್ ಶರ್ಮಾ ಸೇರಿದಂತೆ ಕೆಲ ಕ್ರಿಕೆಟಿಗರು ಕಾನ್ಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.