Bigg Boss ಗಿಲ್ಲಿ ನಟನ ಮದ್ವೆಗೆ ಹೂವಿನ ಬೊಕ್ಕೆ ಬ್ಯಾನ್​! ಗಿಫ್ಟ್​ ಏನ್​ ಕೊಡ್ಬೇಕು? ಹುಡುಗಿ ಯಾರು? ರಿವೀಲ್​

Bigg Boss ಗಿಲ್ಲಿ ನಟನ ಮದ್ವೆಗೆ ಹೂವಿನ ಬೊಕ್ಕೆ ಬ್ಯಾನ್​! ಗಿಫ್ಟ್​ ಏನ್​ ಕೊಡ್ಬೇಕು? ಹುಡುಗಿ ಯಾರು? ರಿವೀಲ್​

Bigg Boss ಗಿಲ್ಲಿ ನಟನ ಮದ್ವೆಗೆ ಹೂವಿನ ಬೊಕ್ಕೆ ಬ್ಯಾನ್​! ಗಿಫ್ಟ್​ ಏನ್​ ಕೊಡ್ಬೇಕು? ಹುಡುಗಿ ಯಾರು? ರಿವೀಲ್​

ಬಿಗ್​ಬಾಸ್​ ಗೆದ್ದ ನಂತರ ಸಖತ್ ಬ್ಯುಸಿಯಾಗಿರುವ ಗಿಲ್ಲಿ ನಟನಿಗೆ ಎಲ್ಲೆಡೆ ಮದುವೆಯದ್ದೇ ಪ್ರಶ್ನೆ ಎದುರಾಗುತ್ತಿದೆ. ಮದುವೆ ಬಗ್ಗೆ ಮಾತನಾಡಿರುವ ಅವರು, ಮದುವೆಯ ದಿನ ನೀಡುವ ಉಡುಗೊರೆ ಬಗ್ಗೆಯೂ ಹೇಳಿದ್ದಾರೆ. ಬೊಕೆ ಬೇಡ, ಮುಯ್ಯಿ ಕೊಡಿ ಸಾಕು ಎಂದಿದ್ದಾರೆ.

ಗಿಲ್ಲಿ ನಟ ಬಿಗ್​ಬಾಸ್​ ವಿನ್​ (Bigg Boss 12 winner) ಆದ ಬಳಿಕ ಸಕತ್​ ಬಿಜಿಯಾಗಿದ್ದಾರೆ. ಅವರಿಗೆ ಈಗ ಡಿಮಾಂಡ್​ ಹೆಚ್ಚಾಗಿದ್ದು, ಒಂದು ನಿಮಿಷವೂ ಪುರುಸೊತ್ತು ಇಲ್ಲದಂತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಇದೇ ವೇಳೆ ಮಾಧ್ಯಮಗಳಿಂದಲೂ ಅವರಿಗೆ ಸಕತ್​ ಬೇಡಿಕೆ ಇದೆ. ಆದರೆ ಎಲ್ಲಿಯೇ ಹೋದರೂ ಮೊದಲು ಅವರಿಗೆ ಕೇಳಿಬರುವ ಮಾತು ಮದುವೆಯ ಬಗ್ಗೆ. ಅದರಲ್ಲಿಯೂ ಬಿಗ್​ಬಾಸ್​ (Bigg Boss Kananda) ಕಾವ್ಯಾ ಶೈವ ಅವರ ಜೊತೆಗಿನ ಸ್ನೇಹದ ಬಗ್ಗೆ ಪರೋಕ್ಷವಾಗಿ ಅವರಿಗೆ ಕೇಳಲಾಗುತ್ತದೆ.

ಇದೀಗ ಮತ್ತೊಮ್ಮೆ ಅವರಿಗೆ ಇದೇ ಪ್ರಶ್ನೆ ಎದುರಾಗಿದೆ. ಬಿಗ್​ಬಾಸ್​ನಿಂದ ಖ್ಯಾತಿ ಬಂದಿತು, ಸಾಕಷ್ಟು ಅವಕಾಶಗಳೂ ಹುಡುಕಿ ಬರುತ್ತಿವೆ. ಹಾಗಿದ್ದರೆ ಮದುವೆ ಯಾವಾಗ ಎನ್ನುವ ಪ್ರಶ್ನೆ ಅವರಿಗೆ ಎದುರಾಗಿದೆ.

ಅದಕ್ಕೆ ಗಿಲ್ಲಿ ನಟ, ಇನ್ನೂ ನಾಲ್ಕೈದು ವರ್ಷ ಆದ್ಮೇಲೆ ಈ ಬಗ್ಗೆ ಯೋಚನೆ ಮಾಡುತ್ತೇನೆ. ಮದುವೆ ಫಿಕ್ಸ್​ ಆದಾಗ ಎಲ್ಲರನ್ನೂ ಆಹ್ವಾನಿಸುತ್ತೇನೆ. ಆಗ ಹೂವಿನ ಬೊಕೆ ಎಲ್ಲಾ ತರೋದು ಬೇಡ,ಮುಯ್ಯಿ ಕೊಡಿ, ದುಡ್ಡಾದ್ರೂ ಆಗತ್ತೆ, ಮುಂದೆ ಉಪಯೋಗಕಕ್ಕೆ ಆಗುತ್ತದೆ ಎಂದಿದ್ದಾರೆ.

ಇದೇ ವೇಳೆ ಮದುವೆಯಾಗುವ ಹುಡುಗಿಯ ಬಗ್ಗೆ ಪ್ರಶ್ನಿಸಿದಾಗ, ಅವರು ಸ್ವಲ್ಪ ಅಸಮಾಧಾನ ಹೊರಹಾಕಿದಂತೆ ಕಂಡರು. ಇನ್ನೂ ಹುಡುಗಿ ಫಿಕ್ಸ್​ ಆಗಿಲ್ಲ. ಅವಳ ಮುಖ, ಗುಣ ಎಲ್ಲವೂ ಚೆನ್ನಾಗಿ ಇರಬೇಕು. ಫಿಕ್ಸ್ ಆದ ಮೇಲೆ ನಾನೇ ಹೇಳ್ತೇನೆ ಎಂದಿದ್ದಾರೆ.

ಲವ್​ ಮ್ಯಾರೇಜಾ,ಅರೇಂಜ್ಡ್​ ಮ್ಯಾರೇಜಾ ಎನ್ನೋ ಪ್ರಶ್ನೆಗೆ, ಈಗಲೇ ಏನೂ ಅಂತ ಹೇಳಲು ಆಗಲ್ಲ. ಲವ್ವೇ ಆಗ್ಲೀ ಏನೇ ಆಗ್ಲಿ ಎಲ್ಲರ ಒಪ್ಪಿಗೆ ತಗೊಂಡೇ ಮದುವೆಯಾಗುವೆ ಎಂದು ಹೇಳಿದ್ದಾರೆ ಗಿಲ್ಲಿ ನಟ. ಯಾವ ಕಡೆಯ ಹುಡುಗಿ ಬೇಕು ಎಂದು ಕಾವ್ಯಾ ಅವರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಪ್ರಶ್ನೆ ಕೇಳಿದಾಗಲೂ ಗಿಲ್ಲಿ ಸ್ವಲ್ಪ ಗರಂ ಆದಂತೆ ಕಂಡುಬಂದರು. ಆ ಕಡೆ, ಈ ಕಡೆ ಅಂತೇನಿಲ್ಲ. ಒಳ್ಳೆ ಹುಡುಗಿ ಆದರೆ ಆಯ್ತು ಎಂದಿದ್ದಾರೆ.

Source link

Leave a Reply

Your email address will not be published. Required fields are marked *