Headlines

ವಾರಾಂತ್ಯಕ್ಕೆ ಜೀ5ನಲ್ಲಿ ನೋಡಿ ‘ರಾಕ್ಷಸ’; ಉತ್ತರ ಕರ್ನಾಟಕದ ಕಥೆಯಲ್ಲಿ ಕ್ರೈಮ್​ ಥ್ರಿಲ್ಲರ್ ಸರಣಿ

ವಾರಾಂತ್ಯಕ್ಕೆ ಜೀ5ನಲ್ಲಿ ನೋಡಿ ‘ರಾಕ್ಷಸ’; ಉತ್ತರ ಕರ್ನಾಟಕದ ಕಥೆಯಲ್ಲಿ ಕ್ರೈಮ್​ ಥ್ರಿಲ್ಲರ್ ಸರಣಿ


ಒಟಿಟಿ ವ್ಯಾಪ್ತಿ ತುಂಬಾನೇ ಹಿರಿದಾಗಿದೆ. ಸಾಕಷ್ಟು ಸಿನಿಮಾಗಳು, ಸರಣಿಗಳು ರಿಲೀಸ್ ಆಗುತ್ತಿವೆ. ಪರಭಾಷೆಗೆ ಹೋಲಿಕೆ ಮಾಡಿದರೆ ಕನ್ನಡದಲ್ಲಿ ಸರಣಿಗಳ ಸಂಖ್ಯೆ ಕಡಿಮೆ. ಆದರೆ, ಜೀ5 ಹಲವು ವೆಬ್ ಸೀರಿಸ್‌ಗಳನ್ನು ಕನ್ನಡಿಗರ ಮಡಿಲಿಗೆ ಹಾಕುತ್ತಾ ಇದೆ. ಈಗ ಉತ್ತರ ಕರ್ನಾಟಕ ಭಾಷೆಯಲ್ಲಿ ಸಿದ್ಧವಾದ ವೆಬ್ ಸೀರಿಸ್ ನ ವೀಕ್ಷಕರ ಮುಂದಿಡುತ್ತಿದೆ. ವೀಕೆಂಡ್‌ನಲ್ಲಿ ಈ ಸರಣಿಯ ವೀಕ್ಷಣೆಗೆ ಒಂದೊಳ್ಳೆಯ ಆಯ್ಕೆ ಆಗಲಿದೆ. ಇದಕ್ಕಾಗಿ ವೀಕ್ಷಕರು ಕಾದಿದ್ದಾರೆ.

ವಿಜಯ್ ರಾಘವೇಂದ್ರ ಅವರು ಬಾಲ ಕಲಾವಿದನಾಗಿ, ಹೀರೋ ಆಗಿ ಮಿಂಚಿದ್ದಾರೆ. ಅವರ ವೃತ್ತಿ ಜೀವನದಲ್ಲಿ ಈವರೆಗೆ ಯಾವುದೇ ವೆಬ್ ಸರಣಿ ಮಾಡಿಲ್ಲ. ‘ರಾಕ್ಷಸ’ ಅವರ ಮೊದಲ ವೆಬ್ ಸರಣಿಯಾಗಿದೆ. ಮಲಪ್ರಭಾ ನದಿ ತೀರದ ನಿಗೂಢ ಮೊಸಳೆ ದಾಳಿ ಸುತ್ತ ಕಥೆಯನ್ನು ಹೆಣೆಯಲಾಗಿದೆ. ಈ ಸರಣಿ ಸಾಕಷ್ಟು ಥ್ರಿಲ್ ನೀಡುವ ನಿರೀಕ್ಷೆ ಇದೆ.

ಈ ವೆಬ್ ಸರಣಿಯನ್ನು ತರುಣ್ ಸುಧೀರ್ ನಿರ್ದೇಶನ ಮಾಡಿದ್ದಾರೆ. ಅವರು ಉತ್ತರ ಕರ್ನಾಟಕ ಭಾಷೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಟ್ರೇಲರ್ ನೋಡಿದವರಿಗೆ ವಿಜಯ್ ರಾಘವೇಂದ್ರ ಹಾಗೂ ಮಯೂರಿ ಪಾತ್ರಕ್ಕೆ ಸರಿಯಾದ ಆಯ್ಕೆ ಎಂದು ಅನಿಸಿದೆ.

ಜೀ5 ಬಿಸ್ನೆಸ್ ಹೆಡ್ ದೀಪಕ್ ದೀಪಕ್ ಶ್ರೀರಾಮುಲು ಈ ಸರಣಿಯ ಬಗ್ಗೆ ಮಾಹಿತಿ ನೀಡಿದ್ದಾರೆ, ‘ವೆಬ್ ಸರಣಿ ಜರ್ನಿ ಶುರುವಾಗಿದೆ, ಶೃತಿ ನಾಯ್ಡು ಪ್ರೊಡಕ್ಷನ್, ಪಿಆರ್ ಕೆ, ಕೆಆರ್‌ಜಿ ಹಾಗೂ ತರುಣ್ ಸುಧೀರ್ ಅವರು ಸಾಥ್ ನೀಡಿದ್ದಾರೆ. ನಾವು ಕೇಳಿದಾಗ ಸಿರೀಸ್ ಮಾಡಲು ಮುಂದೆ ಬಂದರು. ಈ ಸರಣಿಯಲ್ಲಿ 22 ರಿಂದ 25 ನಿಮಿಷದ ಏಳು ಎಪಿಸೋಡ್ ಇರಲಿವೆ.

ಇದನ್ನೂ ಓದಿ: ಈ ವಾರವೂ ಒಟಿಟಿಗೆ ಬಂದಿವೆ ಹಿಟ್ ಸಿನಿಮಾಗಳು: ಪಟ್ಟಿ ಇಲ್ಲಿದೆ

ನಿರ್ಮಾಪಕ ತರುಣ್ ಸುಧೀರ್ ಮಾತನಾಡಿ, ’89 ಪಾತ್ರಗಳು ಈ ಸಿರೀಸ್ ನಲ್ಲಿ ಇವೆ. ಅವರೆಲ್ಲವೂ ಉತ್ತರ ಕರ್ನಾಟಕ ಭಾಗದವರು. ಉತ್ತರ ಕರ್ನಾಟಕದ ಶೈಲಿಯಲ್ಲೇ ಸರಣಿ ಇದೆ ಎಂಬುದೇ ವಿಶೇಷ’ ಎಂದರು. ರಾಕ್ಷಸ, ಉತ್ತರ ಕರ್ನಾಟಕದ ಗ್ರಾಮೀಣ ಭಾಗದ ಮೊದಲ ವೆಬ್ ಸಿರೀಸ್. ಸೈಕಲಾಜಿಕಲ್ ಕ್ರೈಂ ಥ್ರಿಲ್ಲರ್ ಜಾನರ್ ಒಳಗೊಂಡಿರುವ ಸರಣಿಯಲ್ಲಿ ವಿಜಯ ರಾಘವೇಂದ್ರ,ಮಯೂರಿ, ಅವಿನಾಶ್, ಮಾಳವಿಕ, ಅಪ್ಪಣ್ಣ ಮತ್ತು ಅಭಿಜಿತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಕ್ಷಸ ವೆಬ್ ಸೀರಿಸ್‌ಗೆ ಸುಹಾನ್ ಪ್ರಸಾದ್ ಮತ್ತು ಅಪೂರ್ವ ಕಥೆ ಒದಗಿಸಿದ್ದಾರೆ. ಹಾಗೇ ಸುಹಾನ್ ಪ್ರಸಾದ್ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *