Headlines

ಬರ್ತಡೇ ಬಳಿಕ ದೊಡ್ಡ ಡಿಮ್ಯಾಂಡ್​ ಇಟ್ಟ ಕಾಟೇರ.! ದರ್ಶನ್​ ಇಟ್ಟಿರೋ ಬೇಡಿಕೆಗೆ ಸಿಗುತ್ತ ಪ್ರತಿಫಲ? | Will Darshan Walk Out Of Jail Soon Actor Demands Fast Track Trial After Birthday Behind Bars

ಬರ್ತಡೇ ಬಳಿಕ ದೊಡ್ಡ ಡಿಮ್ಯಾಂಡ್​ ಇಟ್ಟ ಕಾಟೇರ.! ದರ್ಶನ್​ ಇಟ್ಟಿರೋ ಬೇಡಿಕೆಗೆ ಸಿಗುತ್ತ ಪ್ರತಿಫಲ? | Will Darshan Walk Out Of Jail Soon Actor Demands Fast Track Trial After Birthday Behind Bars


ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್, ಪ್ರಕರಣದ ವಿಚಾರಣೆಯನ್ನು ಶೀಘ್ರವಾಗಿ ಮುಗಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಪ್ರಾಸಿಕ್ಯೂಷನ್ ಉದ್ದೇಶಪೂರ್ವಕವಾಗಿ ವಿಚಾರಣೆಯನ್ನು ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ, ದೈನಂದಿನ ವಿಚಾರಣೆ ನಡೆಸಲು ಕೋರಿದ್ದಾರೆ.  

ನಟ ದರ್ಶನ್‌ಗೆ ರೈಟ್​​​ ಟೈಮ್ ಬರ್ತಾ ಇದೆಯಾ? ಜೈಲಿನಲ್ಲೇ ಹುಟ್ಟುಹಬ್ಬ ಮಾಡಿಕೊಂಡ ದಾಸ ಇನ್ನೆರಡು ತಿಂಗಳಲ್ಲಿ ಹೊರ ಬರುತ್ತಾರಾ? ಇಂಥದ್ದೊಂದು ಚರ್ಚೆ ಚಾಲ್ತಿಯಲ್ಲಿ ಇರುವಾಗ್ಲೆ ದಚ್ಚು ಮಾಡಿರೋ ದೊಡ್ಡ ಡಿಮ್ಯಾಂಡ್​ ಒಂದು ಈಗ ರಿವಿಲ್ ಆಗಿದೆ. ಆ ಡಿಮ್ಯಾಂಡ್ ಏನು ಅಂತ ಕೇಳಿದ್ರೆ ಈ ಕಾಟೇರ ಆದಷ್ಟು ಬೇಗ ಜೈಲಿನಿಂದ ಹೊರಗೆ ಬಂದ್ರು ಆಶ್ಚರ್ಯವಿಲ್ಲ ಅನ್ನಿಸುತ್ತೆ? ಹಾಗಾದ್ರೆ ಕೊ*ಲೆ ಆರೋಪಿ ದರ್ಶನ್ ಇಟ್ಟ ಬೇಡಿಕೆ ಏನು? ನೋಡೋಣ ಬನ್ನಿ.

ನಟ ದರ್ಶನ್‌ಗೆ ಜೈಲು ಸಹವಾಸ ಸಾಕಾಗಿದೆ. ಇನ್ನೊಂದು ಜನ್ಮ ಅಂತ ಇದ್ರೆ ಜೈಲನ್ನ ಕಣ್ಣೆತ್ತಿಯೋ ನೋಡೋಲ್ಲಪ್ಪಾ ಅಂತ ಅದೆಷ್ಟು ಭಾರಿ ಮನಸ್ಸಲ್ಲಂದುಕೊಂಡಿದ್ದಾರೆ ಏನೋ ದರ್ಶನ್. ಒಂದು ಬಾರಿ ಹೆಂಡತಿಗೆ ಹೊಡೆದ ಆರೋಪ, ಮತ್ತೊಂದ ಭಾರಿ ಕೊ*ಲೆ ಆರೋಪದ ಮೇಲೆ ಎರಡೆರಡು ಬಾರಿ ಜೈಲು ಸೇರಿದ್ದಾರೆ ದಾಸ. ಆದ್ರೆ ಇದೇ ಮೊದಲ ಬಾರಿಗೆ ತನ್ನ ಅಭಿಮಾನಿಗಳು, ಆತ್ಮೀಯರು, ಪತ್ನಿ ಮಗ ಕುಟುಂಬವನ್ನ ಬಿಟ್ಟು ದರ್ಶನ್ ಜೈಲಿನಲ್ಲೇ ಬರ್ತ್ಡೇ ದಿನ ಕಳೆದಿದ್ದಾರೆ.

ಈ ವರ್ಷ ದರ್ಶನ್‌ಗೆ ಬರ್ತ್​ಡೇ ಮಾಡಿದ ಖುಷಿ ಕಿಂಚಿತ್ತೂ ಇಲ್ಲ. ಖುಷಿ ಪಡೋಕೆ ಸಾಧ್ಯನೂ ಇಲ್ಲ ಬಿಡಿ. ಅಂತಹ ಸ್ಥಿತಿಯಲ್ಲಿ ದರ್ಶನ್ ಇದ್ದಾರೆ. ಹೀಗಾಗೆ ಪತ್ನಿ ವಿಜಯಲಕ್ಷ್ಮಿ , ಮಗ ವಿನೂಶ್, ತಮ್ಮ ದಿನಕರ್ ತೂಗುದೀಪ್​ ಹಾಗು ನಿರ್ಮಾಪಕಿ ಶೈಲಜಾ ನಾಗ್​, ಸಂಗೀತ ನಿರ್ದೇಶಕ ಹರಿಕೃಷ್ಣ ಜೈಲಿಗೆ ಹೋಗಿ ದರ್ಶನ್‌ಗೆ ಸಮಾಧಾನ ಹೇಳಿ ಬಂದಿದ್ದಾರೆ.

ನ್ಯಾಯಾಲಯ ಮುಂದೆ ದರ್ಶನ್ ಹೊಸ ಬೇಡಿಕೆ..!

ಸಿನಿಮಾ ರಂಗದಲ್ಲಿ ಸ್ಟಾರ್​​ ನಟ ನಟಿಯರು, ನಿರ್ಮಾಪಕ ನಿರ್ದೇಶಕರ ಬಳಿ ಬೇಡಿಕೆ ಇಡೋದು ಕಾಮನ್. ಕಥೆ ವಿಷಯಕ್ಕೆ, ಸಂಭಾವನೆ ವಿಚಾರಕ್ಕೆ ಡಿಮ್ಯಾಂಡ್ ಮಾಡೋದು ಇದ್ದಿದ್ದೇ. ಇದನ್ನೆಲ್ಲಾ ದರ್ಶನ್ ತನ್ನ ಸಿನಿ ಕರಿಯರ್​​ನಲ್ಲಿ ಹತ್ತು ಹಲವು ಬಾರಿ ಮಾಡಿರ್ತಾರೆ. ಆದ್ರೆ ಈಗ ವಿಷ್ಯ ಅದಲ್ಲ. ಆದಷ್ಟು ಬೇಗ ರೇಣುಕಾಸ್ವಾಮಿ ಕೊ*ಲೆ ಕೇಸ್​ನ ಟ್ರಯಲ್ ಮುಗಿಸಲು ಡಿಮ್ಯಾಂಡ್ ಮಾಡುತ್ತಿದ್ದಾರೆ ದಾಸ.

ನಟ ದರ್ಶನ್​​ ತನ್ನ ಹುಟ್ಟುಹಬ್ಬದ ಬಳಿಕ ಒಂದು ತೀರ್ಮಾನಕ್ಕೆ ಬಂದತಿದೆ. ಏನಾಗುತ್ತೋ ಆಗ್ಲಿ ಬೇಗಾ ಆಗ್ಲಿ ಅನ್ನೋ ಹಂತಕ್ಕೆ ಬಂದಿದ್ದಾರೆ. ಹೀಗಾಗಿ ನಟ ದರ್ಶನ್ ಕೊ*ಲೆ ಪ್ರಕರಣದ ವಿಚಾರಣೆಯನ್ನ ಬೇಗ ಮುಗಿಸಿ ಅಂತ ಕೋರ್ಟ್​​ಗೆ ಮನವಿ ಮಾಡಿದ್ದಾರೆ. ಆರೋಪಿಗಳನ್ನ ಜೈಲಿನಲ್ಲಿ ಇಟ್ಟು, ಸಾಕ್ಷಿಗಳನ್ನ ಕೋರ್ಟ್ ಕರೆಸದೇ ಪ್ರಾಸಿಕ್ಯೂಷನ್ ಉದ್ದೇಶಪೂರ್ವಕವಾಗಿ ಟ್ರಯಲ್ ವಿಳಂಬ ಮಾಡುತ್ತಿದೆ. ಪ್ರತಿದಿನ ಟ್ರಯಲ್ ನಡೆಸಲು ಪ್ರಾಸಿಕ್ಯೂಷನ್ ಗೆ ಸೂಚನೆ ಕೊಡಬೇಕು. ವಿಚಾರಣೆಗೆ ನಾವು ಸಿದ್ದರಿದ್ದೇವೆ ಎಂದು ದರ್ಶನ್ ಪರ ವಕೀಲ ಸುನಿಲ್ ರಿಂದ ಸೆಷನ್ಸ್ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಆಗಿದೆ.

ಈ ಹಿಂದೆ ನಟ ದರ್ಶನ್ ಹಾಸಿಗೆ ದಿಂಬಿಗಾಗಿ ಕೋರ್ಟ್​ ಮುಂದೆ ಕೇಳಿ ಕೇಳಿ ಸುಸ್ತಾಗಿದ್ರು. ಕೊನೆಗೆ ಹಲವು ತಿಂಗಳುಗಳ ಬಳಿಕ ಆದು ಪ್ರಾಪ್ತಿಯಾಯ್ತು. ಟಿವಿಯೂ ದರ್ಶನ್​​​ ಗೆ ಸಿಕ್ತು. ಈಗ ಹುಟ್ಟುಹಬ್ಬದ ಬಳಿಕ ಆದಷ್ಟು ಬೇಗ ವಿಚಾರಣೆ ಮುಗಿದು ಒಂದು ತೀರ್ಮಾನಕ್ಕೆ ಬಂದು ಬಿಡಬೇಕು ಅಂತ ಕಾಟೇರ ನಿರ್ಧರಿಸಿದ್ದಾರೆ. ಹೀಗಾಗಿ ಪ್ರತಿ ದಿನ ಟ್ರಯಲ್ ನಡೆಸೋಕೆ ಬೇಡಿಕೆ ಇಟ್ಟಿದ್ದಾರೆ.

ಪವಿತ್ರಾ ಬೇಡಿಕೆಯನ್ನ ರಿಜೆಕ್ಟ್ ಮಾಡಿರೋ ಕೋರ್ಟ್!

ಇನ್ನು ದರ್ಶನ್ ಗೆಳತಿ ಪವಿತ್ರಾ ಗೌಡ ಕೂಡ ನ್ಯಾಯಾಲಯಕ್ಕೆ ಆಗಾಗ ಅರ್ಜಿ ಸಲ್ಲಿಸ್ತಾನೆ ಇದ್ದಾರೆ. ಮೊನ್ನೆಯೂ ಕೂಡ ನನಗೆ ಜಾಮೀನು ಮಂಜೂರು ಮಾಡಿ. ಯಾಕಂದ್ರೆ ನನ್ನ ಮಗಳು 10ನೇ ತರಗತಿ ಓದುತ್ತಿದ್ದಾಳೆ. ಅವಳು ಸಿಂಗಲ್ ಪೇರೆಂಟ್​​ ಅಂತ ಕೇಳಿದ್ರು. ಆದ್ರೆ ಕೋರ್ಟ್​ ಹಿಂದೆ ಮುಂದೆ ಯೋಚ್ನೆ ಮಾಡದೇ ಪವಿತ್ರಾ ಅರ್ಜಿಯನ್ನ ರಿಜೆಕ್ಟ್ ಮಾಡಿದೆ. ಈಗ ದಾಸ ಕೇಳಿರೋ ಬೇಡಿಕೆ ಈಡೇರುತ್ತಾ ನೋಡಬೇಕಿದೆ.

ವಿಜಯ್ ಪಟೆದಾರ್, ಏಷ್ಯಾನೆಟ್ ಸುವರ್ಣ ನ್ಯೂಸ್



Source link

Leave a Reply

Your email address will not be published. Required fields are marked *