Headlines

ಕಾ.ನಿ.ಪ ಸಂಘದಿ0ದ ಉಚಿತ ಆರೋಗ್ಯ ತಪಾಸಣಾ ಶಿಬಿರ

ತುಮಕೂರು ಕಾ.ನಿ.ಪ ಸಂಘದಿ0ದ ಉಚಿತ ಆರೋಗ್ಯ ತಪಾಸಣಾ ಶಿಬಿರ: ಪತ್ರಕರ್ತರು, ನಾಗರಿಕರಿಗೆ ಔಷಧ ವಿತರಣೆ

ತುಮಕೂರು: ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ರೋಟರಿ ತುಮಕೂರು ಪ್ರೇರಣ ಟೀಮ್ ಈಶ್ವರ ಮಲ್ಪೆ, ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದೊಂದಿಗೆ ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿ ಪತ್ರಿಕಾ ಭವನದಲ್ಲಿ ಎರಡು ದಿನಗಳ ಕಾಲ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಕಿವಿಯ ಶ್ರವಣ ತಪಾಸಣೆ ಮತ್ತು ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣೆ ಮತ್ತು ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಇವರ ವತಿಯಿಂದ ಉಚಿತ ಹೃದಯ ರೋಗ, ನರರೋಗ ಮೂತ್ರಪಿಂಡದ ಕಲ್ಲು ಹಾಗೂ ಕ್ಯಾನ್ಸರ್ ತಪಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಶ್ರವಣ ತಪಸಣಾ ಶಿಬಿರದಲ್ಲಿ ಸುಮಾರು ೭೦ಕ್ಕೂ ಹೆಚ್ಚು ಜನರು ನೋಂದಯಿಸಿ ೪೦ ಜನರು ರಿಯಾಯಿತಿ ದರದಲ್ಲಿ ಶ್ರವಣ ಉಪಕರಣಗಳನ್ನು ಪಡೆದುಕೊಂಡರು, ಸಪ್ತಗಿರಿ ಆಸ್ಪತ್ರೆ ವತಿಯಿಂದ ಉಚಿತ ಬಿಪಿ /ಶುಗರ್, ಇಸಿಜಿ, ಎಕೋ, ಸ್ಕ್ಯಾನಿಂಗ್ ಸೇರಿದಂತೆ ಇತರೆ ಕಾಯಿಲೆಗಳ ಪರೀಕ್ಷೆ ತಪಾಸಣೆ ನಡೆಸಿ ಔಷಧಗಳನ್ನ ವಿತರಣೆ ಮಾಡಲಾಯಿತು.

ಈ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ತುಮಕೂರು ರೋಟರಿ ಪ್ರೇರಣಾ ಜಿಲ್ಲಾಧ್ಯಕ್ಷ ಉಮಾ ಮಹೇಶ್ ಎ ಕಾರ್ಯನಿರತ ಪತ್ರಕರ್ತರ ಸಂಘ ಕೇವಲ ಸುದ್ದಿಗಷ್ಟೇ ಸೀಮಿತವಾಗದೆ ಪತ್ರಕರ್ತರ ಆರೋಗ್ಯ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪತ್ರಕರ್ತರಿಗಷ್ಟೇ ಅಲ್ಲದೆ ಸಮಾಜದ ನಾಗರಿಕರಿಗೆ ಉಚಿತ ಆರೋಗ್ಯ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಲು ದಾರಿ ಮಾಡಿಕೊಟ್ಟಿದ್ದಾರೆ ಇಂತಹ ಉತ್ತಮ ಆರೋಗ್ಯ ಶಿಬಿರಗಳನ್ನು ಹೆಚ್ಚು ಹೆಚ್ಚು ಆಯೋಜನೆ ಮಾಡಬೇಕು ಎಂದು ತಿಳಿಸಿದರು..

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚೀ.ನಿ ಪುರುಷೋತ್ತಮ್ ಅವರು ಮಾತನಾಡಿ ಸಮಾಜದಲ್ಲಿ ಇತ್ತೀಚೆಗೆ ಹೃದಯ ಸಂಬAಧಿತ ಕಾಯಿಲೆಗಳು ಸೇರಿದಂತೆ ಇತರೆ ಕಾಯಿಲೆಗಳು ಹೆಚ್ಚಾಗುತ್ತಿದ್ದು ಸದಾಕಾಲ ಒತ್ತಡದಲ್ಲಿರುವ ನಮ್ಮ ಪತ್ರಕರ್ತ ಬಾಂಧವರಿಗೆ ಅವರ ಆರೋಗ್ಯ ಕಾಳಜಿಯನ್ನ ಗಮನದಲ್ಲಿಟ್ಟುಕೊಂಡು ಜಿಲ್ಲಾ ಸಂಘ ಸಪ್ತಗಿರಿ ಆಸ್ಪತ್ರೆ ಬೆಂಗಳೂರು, ರೋಟರಿ ಪ್ರೇರಣಾ, ತುಮಕೂರು ಈಶ್ವರ್ ಮಲ್ಪೆ ಟೀಮ್ ಇವರ ಸಹಕಾರದೊಂದಿಗೆ ವಿವಿಧ ಕಾಯಿಲೆಗಳ ತಪಾಸಣೆ ಮತ್ತು ಪರೀಕ್ಷೆ ಹಾಗೂ ರಿಯಾಯಿತಿ ದರದಲ್ಲಿ ಕೆಲವು ಉಪಕರಣಗಳ ವಿತರಣಾ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ಪತ್ರಕರ್ತರು ಇದರ ಸದುಪಯೋಗವನ್ನು ಪಡೆದು ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಮುನ್ನಡೆಯಬೇಕಾಗಿದೆ ಎಂದು ತಿಳಿಸಿದರು.

ಈಶ್ವರ್ ಮಲ್ಪೆ ತಂಡದ ಸಂಚಾಲಕ ಲವ ಬಂಗೇರ ಅವರು ಮಾತನಾಡುತ್ತ ಮನುಷ್ಯನ ದೇಹದಲ್ಲಿ ಪಂಚೇAದ್ರಿಯಗಳು ಬಹು ಮುಖ್ಯವಾಗಿದ್ದು ಇಂದು ಮನುಷ್ಯ ಕಣ್ಣಿಗೆ ನೀಡುವ ಮಹತ್ವವನ್ನ ಕಿವಿಗೆ ನೀಡುತ್ತಿಲ್ಲ ಈ ಕಾರಣದಿಂದಾಗಿ ನಮ್ಮ ಸಮಾಜದಲ್ಲಿ ಕಿವುಡುತನ ಹೆಚ್ಚುತ್ತಿದೆ ಈ ನಿಟ್ಟಿನಲ್ಲಿ ಈಶ್ವರ್ ಮಲ್ಪೆ ಇವರ ತಂಡದ ವತಿಯಿಂದ ರಾಜ್ಯದಾದ್ಯಂತ ಸುಮಾರು ೧೪ ಹೆಚ್ಚು ಕಡೆಗಳಲ್ಲಿ ಉಚಿತ ಶ್ರವಣ ತಪಾಸಣೆ ಮತ್ತು ರಿಯಾಯಿತಿ ದರದಲ್ಲಿ ಶ್ರವಣ ಉಪಕರಣಗಳನ್ನು ವಿತರಣೆ ಮಾಡುತ್ತ ಬಂದಿದೆ ತುಮಕೂರಿನ ಕಾರ್ಯನಿರತ ಪತ್ರಕರ್ತರ ಸಂಘವು ಕೂಡಾ ನಮಗೆ ತಪಾಸಣೆ ನಡೆಸಲು ಸಹಕರ ನೀಡಿದ್ದಾರೆ ಸಮಾಜದ ಓರೆ ಕೋರೆಗಳನ್ನು ತಿದ್ದುವ ಪತ್ರಕರ್ತರು ತಮ್ಮ ಶ್ರವಣಗಳನ್ನು ಅತ್ಯುತ್ತಮವಾಗಿ ಇಟ್ಟು ಕೊಳ್ಳಬೇಕಾಗಿರುವುದರಿಂದ ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಂಡಿದ್ದಾರೆ ಎಂದು ಭಾವಿಸಿದ್ದೇನೆ ಎಂದು ತಿಳಿಸಿದರು.

ಕಾ.ನಿ. ಪ.ದ ಕಾರ್ಯದರ್ಶಿ ಟಿ.ಇ. ರಘುರಾಮ್ ಅವರು ಮಾತನಾಡಿ ಸಂಘದ ವತಿಯಿಂದ ಕಚೇರಿಯಲ್ಲಿ ಎರಡು ದಿನಗಳ ಕಾಲ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಂಡಿದ್ದು ಇದರಲ್ಲಿ ಪತಕರ್ತರಷ್ಟೇ ಅಲ್ಲದೆ ನಾಗರಿಕರು ಕೂಡ ಇದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ ಆದರೆ ಕೆಲ ಪತ್ರಕರ್ತರು ಇದರಿಂದ ದೂರ ಉಳಿದಿರುವುದು ನಮಗೆ ಬೇಸರವನ್ನುಂಟು ಮಾಡಿದೆ ಇದರ ಸದುಪಯೋಗ ಪತ್ರಕರ್ತರು ಪಡೆದುಕೊಳ್ಳಬೇಕೆಂಬುದು ಸಂಘದ ಉದ್ದೇಶವಾಗಿದ್ದು ಮುಂಬರುವ ದಿನಗಳಲ್ಲಿ ಇಂತಹ ಉಚಿತ ಆರೋಗ್ಯ ಶಿಬಿರಗಳನ್ನು ಆ ಯೋಜನೆ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ನುರಿತ ವೈದ್ಯರ ತಂಡ ಪತ್ರಿಕಾ ಭವನದಲ್ಲಿ ವಿವಿಧ ತಪಾಸಣೆ, ಪರೀಕ್ಷೆಗಳನ್ನು ನಡೆಸಿ ಸೂಕ್ತ ಪರಿಹಾರ ಹಾಗೂ ಔಷಧಿಗಳನ್ನ ವಿತರಣೆ ಮಾಡಿತು ಈಶ್ವರ್ ಮಲ್ಪೆ ತಂಡದ ನುರಿತ ವೈದ್ಯರು, ಸಂಘದ ನಿರ್ದೇಶಕರುಗಳು, ಜಿಲ್ಲೆಯ ಹಿರಿಯ ಪತ್ರಕರ್ತರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *