ಹುಬ್ಬಳ್ಳಿ, (ಫೆಬ್ರವರಿ 19): ಛೋಟಾ ಮುಂಬೈ ಹುಬ್ಬಳ್ಳಿಯಲ್ಲಿ (ಹುಬ್ಬಳ್ಳಿ) ಬೀದಿ ಕಾಮಣ್ಣರ ಹಾವಳಿ ಹೆಚ್ಚಿದೆ. ಸ್ಕೂಟಿಯಲ್ಲಿ ಹೋಗ್ತಿದ್ದ ಯುವತಿಯರಿಗೆ ಇಬ್ಬರು ಬೀದಿ ಕಾಮಣ್ಣರು ಪ್ಲೈಯಿಂಗ್ ಕಿಸ್ ಕೊಟ್ಟಿದ್ದಾರೆ. ಈ ದೃಶ್ಯವನ್ನು ಯುವತಿಯರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಬಳಿಕ ದುರುಳರ ಅಸಭ್ಯ ವರ್ತನೆಯನ್ನು ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ.ಸದ್ಯ ಈ ವಿಡಿಯೋವನ್ನು ಗಮನಿಸಿದ ಹುಬ್ಬಳ್ಳಿ ಗೋಕುಲ ಠಾಣೆ ಪೊಲೀಸರು, ಯುವತಿಯರು ಯಾವುದೇ ದೂರು ನೀಡದಿದ್ದರೂ ಸಹ ಸ್ವಯಂ ಪ್ರೇರಿತ ದೂರು ದಾಖಲಾಗಿದೆ. ಬಳಿಕ ಸ್ಕೂಟಿಯಲ್ಲಿನ ಪ್ಲಾಟ್ ಅನ್ನು ಪರಿಶೀಲಿಸಿದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿ ನಗರದ ಸುರೇಶ ಅವರನ್ನು ಬಂಧಿಸಿದ್ದು, ಈ ಬಗ್ಗೆ ಹುಬ್ಬಳ್ಳಿ ಸಿಟಿ ಸ್ಪೆಷಲ್ ಬ್ರ್ಯಾಚ್ ಪಿಎಸ್ ಐ ರೂಪಾ ತಲೇವಾಡ ಅವರ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಪ್ಲೈಯಿಂಗ್ ಕಿಸ್ ನೀಡಿ ಅಸಭ್ಯವಾಗಿ ವರ್ತಿಸುವವರನ್ನು ಬಂಧಿಸಲಾಗಿದೆ. ಈ ರೀತಿ ಮಹಿಳೆಯರು, ಮಕ್ಕಳ ಜೊತೆ ವರ್ತಿಸಿದ್ರೆ ಅವರ ವಿರುದ್ಧ ಕಠೀಣ ಕ್ರಮ ಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.