
1986ರಲ್ಲಿ ಬಿಡುಗಡೆಯಾಗಿದ್ದ ಕಮಲ ಹಾಸನ್, ರೇವತಿ ಅಭಿನಯದ ತಮಿಳು ಚಿತ್ರ ‘ಪುನ್ನಕೈ ಮನ್ನನ್’ (Punnagai Mannan). ಈ ಚಿತ್ರದಲ್ಲಿ, ನಾಯಕರಾದ ಕಮಲ್ ಮತ್ತು ರೇಖಾ ಲವ್ ಮಾಡಿದರೂ, ಅದಕ್ಕೆ ಮನೆಯವರ ಬೆಂಬಲ ಸಿಗದೇ ಪರ್ವತದಿಂದ ಹಾರಿ ಆತ್ಮ*ಹತ್ಯೆಗೆ ಪ್ರಯತ್ನಿಸುತ್ತಾರೆ. ನಾಯಕ ಕಮಲ್ ಮರದ ಕೊಂಬೆಯಲ್ಲಿ ಸಿಲುಕಿಕೊಂಡು ಬದುಕುಳಿದರೆ, ರೇಖಾ ಸಾಯುತ್ತಾಳೆ! ಆದರೆ ಇದೇ ಸಿನಿಮಾದ ಕಥೆ ನಿಜ ಜೀವನದಲ್ಲಿಯೂ ನಡೆದದ್ದು ಕಾಲಿವುಡ್ನ ಅತ್ಯಂತ ಸುಂದರ ನಟಿ ಎಂದೇ ಖ್ಯಾತಿ ಪಡೆದಿದ್ದ, ಕೇವಲ 22ರ ಹರೆಯದಲ್ಲಿಯೇ ಸೂಪರ್ಹಿಟ್ ಚಿತ್ರಗಳನ್ನು ನೀಡಿದ್ದ ನಟಿ ಪ್ರತ್ಯುಷಾ ಅವರದ್ದು!