ಬೆಂಗಳೂರಿನ ಐಟಿಎಫ್‌ ಮಹಿಳಾ ಟೆನಿಸ್ ಪಂದ್ಯದ ವೇಳೆ ಜೇನುಹುಳಗಳ ದಾಳಿ!

ಬೆಂಗಳೂರಿನ ಐಟಿಎಫ್‌ ಮಹಿಳಾ ಟೆನಿಸ್ ಪಂದ್ಯದ ವೇಳೆ ಜೇನುಹುಳಗಳ ದಾಳಿ!

ಬೆಂಗಳೂರಿನ ಐಟಿಎಫ್‌ ಮಹಿಳಾ ಟೆನಿಸ್ ಪಂದ್ಯದ ವೇಳೆ ಜೇನುಹುಳಗಳ ದಾಳಿ!

Bee Attack Disrupts ITF Women’s Open Tennis in Bengaluru ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ನಡೆಯುತ್ತಿದ್ದ ಐಟಿಎಫ್ ಮಹಿಳಾ ಓಪನ್ ಟೆನ್ನಿಸ್ ಪಂದ್ಯದ ವೇಳೆ ಜೇನು ಹುಳುಗಳ ಹಿಂಡು ದಾಳಿ ಮಾಡಿದೆ. ಈ ಘಟನೆಯಿಂದ ಆಟಗಾರರು ಮತ್ತು ಪ್ರೇಕ್ಷಕರು ಆತಂಕಕ್ಕೊಳಗಾದರು.

ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ನಡೆಯುತ್ತಿದ್ದ ಐಟಿಎಫ್ (ITF) ಮಹಿಳಾ ಓಪನ್ ಟೆನ್ನಿಸ್ ಪಂದ್ಯಾವಳಿಯ ವೇಳೆ ಜೇನು ಹುಳುಗಳ ಹಿಂಡು ದಿಢೀರ್ ದಾಳಿ ಮಾಡಿದ್ದು, ಕ್ರೀಡಾಂಗಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಗುರುವಾರ ನಡೆದ 2026ರ ಐಟಿಎಫ್ ಟೂರ್ನಿಯ ಮಹತ್ವದ ಪಂದ್ಯವೊಂದರ ನಡುವೆ ಈ ಘಟನೆ ಸಂಭವಿಸಿದೆ. ಮೈದಾನದ ಆವರಣದಲ್ಲಿದ್ದ ಜೇನುಗೂಡಿನಿಂದ ಸಾವಿರಾರು ಜೇನು ನೊಣಗಳು ಒಮ್ಮೆಗೆ ಹೊರಬಂದು ಆಟಗಾರರು ಮತ್ತು ಪ್ರೇಕ್ಷಕರ ಮೇಲೆ ದಾಳಿ ನಡೆಸಿದವು.

ಇದರಿಂದ ಗಾಬರಿಗೊಂಡ ಆಟಗಾರರು ರಾಕೆಟ್ ಬದಿಗಿಟ್ಟು ಮೈದಾನದ ಮಧ್ಯದಲ್ಲೇ ಮಲಗಿದರೆ, ಪ್ರೇಕ್ಷಕರು ಸ್ಟೇಡಿಯಂನಿಂದ ಹೊರಗೆ ಎದ್ದು ಬಿದ್ದು ಓಡಿದರು.

ಘಟನೆಯಿಂದಾಗಿ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಭದ್ರತಾ ಸಿಬ್ಬಂದಿ ಮತ್ತು ಮೈದಾನದ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ಎಲ್ಲರನ್ನೂ ಸುರಕ್ಷಿತವಾಗಿ ಹೊರಗೆ ಕರೆತಂದರು.

ಕಬ್ಬನ್ ಪಾರ್ಕ್‌ನ ಹಸಿರು ಪರಿಸರದಲ್ಲಿ ಜೇನುಗೂಡುಗಳು ಸಹಜವಾಗಿದ್ದರೂ, ಪಂದ್ಯದ ವೇಳೆ ಈ ರೀತಿ ದಾಳಿ ನಡೆದಿರುವುದು ಆತಂಕ ಮೂಡಿಸಿದೆ. ಅದೃಷ್ಟವಶಾತ್ ಯಾವುದೇ ಗಂಭೀರ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಪರಿಸ್ಥಿತಿ ತಿಳಿಯಾದ ಬಳಿಕ ಪಂದ್ಯಾವಳಿಯನ್ನು ಮುಂದುವರಿಸಲು ಆಯೋಜಕರು ತೀರ್ಮಾನಿಸಿದ್ದಾರೆ.

Source link

Leave a Reply

Your email address will not be published. Required fields are marked *