ಸೀತಾರಾಮ್, ಮಾರ್ನಮಿ, ಸುಬ್ಬರಾವ್.. ಈ ವಾರವೂ ಪ್ರೇಕ್ಷಕರಿಗೆ ಹಲವು ಆಯ್ಕೆ

ಸೀತಾರಾಮ್, ಮಾರ್ನಮಿ, ಸುಬ್ಬರಾವ್.. ಈ ವಾರವೂ ಪ್ರೇಕ್ಷಕರಿಗೆ ಹಲವು ಆಯ್ಕೆ


ಕನ್ನಡ ಸಿನಿಮಾಗಳು ಸಾಲು ಸಾಲಾಗಿ ತೆರೆ ಕಾಣುತ್ತಿವೆ. ಬೇರೆ ಬೇರೆ ಚಿತ್ರತಂಡಗಳು ಹೊಸ ಹೊಸ ಕಥೆಗಳನ್ನು ಜನರ ಎದುರು ತರುತ್ತಿವೆ. ‘ಟಾಕ್ಸಿಕ್’, ‘ಕೇಡಿ’ ರೀತಿಯ ದೊಡ್ಡ ಸಿನಿಮಾಗಳು ರಿಲೀಸ್ ಆಗುವ ಮೊದಲೇ ಹಲವು ಸಣ್ಣ ಸಿನಿಮಾಗಳು ಒಟ್ಟೊಟ್ಟಿಗೆ ಬರುತ್ತಿವೆ. ಈ ವಾರ (ಫೆಬ್ರವರಿ 20) ಕೂಡ ಒಂದಷ್ಟು ಸಿನಿಮಾಗಳು (ಕನ್ನಡ ಸಿನಿಮಾ) ತೆರೆ ಕಾಣುತ್ತಿವೆ. ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’, ‘ಸರಳ ಸುಬ್ಬರಾವ್’, ‘ಮಾರ್ನಮಿ’ (ಮಾರ್ನಮಿ) ಮುಂತಾದ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಆ ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ.

ಸೆಂಡ್ ಕೇಸ್ ಆಫ್ ಸೀತಾರಾಮ್: ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಇಷ್ಟಪಡುವವರಿಗೆ ಈ ಸಿನಿಮಾ ಅತ್ಯುತ್ತಮವಾಗಿ ಆಯ್ಕೆಯಾಗಿದೆ. ಮರ್ಡರ್ ಮಿಸ್ಟರಿ ಕಹಾನಿ ಈ ಸಿನಿಮಾದಲ್ಲಿ ಇದೆ. ವಿಜಯ್ ರಾಘವೇಂದ್ರ, ಗೋಪಾಲಕೃಷ್ಣ ದೇಶಪಾಂಡೆವರು ಮುಂತಾದವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ದೇವಿ ಪ್ರಸಾದ್ ಶೆಟ್ಟಿ ಅವರು ನಿರ್ದೇಶಿಸಿದ್ದಾರೆ.

ಮಾರ್ನಮಿ: ರಿತ್ವಿಕ್ ಮಠದ್, ಚೈತ್ರಾ ಆಚಾರ್, ಪ್ರಕಾಶ್ ತುಮಿನಾಡು, ಸೋನು ಗೌಡ ಮುಂತಾದ ಕಲಾವಿದರು ‘ಮಾರ್ನಮಿ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ರಿಶಿತ್ ಶೆಟ್ಟಿ ಅವರ ನಿರ್ದೇಶನ ಈ ಸಿನಿಮಾಗಿದೆ. ಚರಣ್ ರಾಜ್ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಕರಾವಳಿ ಭಾಗದ ಕಥೆಯನ್ನು ಈ ಸಿನಿಮಾದಲ್ಲಿ ಆಯ್ಕೆ ಮಾಡಿಲ್ಲ.

ಸರಳ ಸುಬ್ಬರಾವ್: ತ್ರಿವೇಣಿ ಅವರ ಕಾದಂಬರಿ ಆಧಾರಿತ ‘ಸರಳ ಸುಬ್ಬರಾವ್’ ಸಿನಿಮಾ ನಿರ್ಮಾಣವಾಗಿದೆ. ಮಂಜು ಸ್ವರಾಜ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಕೃಷ್ಣ ಅಜಯ್ ರಾವ್, ರಂಗಾಯಣ ರಘು, ವೀಣಾ ಸುಂದರ್ ಮುಂತಾದವರು ಈ ಚಿತ್ರದ ಪಾತ್ರವರ್ಗದಲ್ಲಿ ಇದ್ದಾರೆ. ಅಜನೀಶ್ ಬಿ. ಲೋಕನಾಥ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ಫೆಬ್ರವರಿ 20ಕ್ಕೆ ‘ಮಾರ್ನಮಿ’ ನೋಡಲು ಬನ್ನಿ

ಸೂರಿಯಣ್ಣ: ಸಲಗ ಸಿನಿಮಾ ಖ್ಯಾತಿಯ ಸೂರಿಯಣ್ಣ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಅವರೇ ನಿರ್ದೇಶನ ಕೂಡ ಮಾಡಿದ್ದಾರೆ. ಸಖತ್ ಮಾಸ್ ಆಗಿ ಈ ಸಿನಿಮಾ ಮೂಡಿಬಂದಿದೆ. ಭೂಗತ ಲೋಕದ ಕಥೆ ಇರುವ ಈ ಸಿನಿಮಾದಲ್ಲಿ ಸೂರಿಯಣ್ಣ ಜೊತೆ ಕಾಕ್ರೋಜ್ ಸುಧಿ, ರವಿ ಕಾಳೆ, ಹರೀಶ್ ರಾಯ ಮುಂತಾದವರು ಕೂಡ ನಟಿಸಿದ್ದಾರೆ.

ಈ ಎಲ್ಲ ಸಿನಿಮಾಗಳ ಜೊತೆಗೆ ‘ಆಲ್ಫಾ ಮೆನ್ ಲವ್ ವೆಂಜನ್ಸ್’ ಚಿತ್ರ ಬರುತ್ತಿದೆ. ಈ ಸಿನಿಮಾದಲ್ಲಿ ಹೇಮಂತ್ ಕುಮಾರ್, ಬಾಲು ನಾಗೇಂದ್ರ, ಕಾರ್ತಿಕ್ ಮಹೇಶ್, ಅಚ್ಯುತ್ ಕುಮಾರ್ ನಟಿಸಿದ್ದಾರೆ. ಹಾರರ್ ಕಥಾಹಂದರ ಇರುವ ‘ಫೆಬ್ರವರಿ 30’ ಸಿನಿಮಾ ಕೂಡ ಈ ವಾರವೇ ಬಿಡುಗಡೆ ಆಗುತ್ತಿದೆ. ಸಿಂಟೋ ಜೇಕಬ್, ಸಂಹಿತಾ ವಿನ್ಯಾ ನಟನೆಯ ‘ಮಿಕ್ಸಿಂಗ್ ಪ್ರೀತಿ’ ಸಿನಿಮಾ ಕೂಡ ಈ ವಾರ ರಿಲೀಸ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *