Headlines

ವೈಭವ್ ಸೂರ್ಯವಂಶಿ 10ನೇ ಕ್ಲಾಸ್ ಎಕ್ಸಾಂ ಚಕ್ಕರ್ ಹೊಡೆದ ಬಗ್ಗೆ ಕೊನೆಗೂ ಮೌನ ಮುರಿದ ತಂದೆ! ಅಚ್ಚರಿ ಹೇಳಿಕೆ

ವೈಭವ್ ಸೂರ್ಯವಂಶಿ 10ನೇ ಕ್ಲಾಸ್ ಎಕ್ಸಾಂ ಚಕ್ಕರ್ ಹೊಡೆದ ಬಗ್ಗೆ ಕೊನೆಗೂ ಮೌನ ಮುರಿದ ತಂದೆ! ಅಚ್ಚರಿ ಹೇಳಿಕೆ

ವೈಭವ್ ಸೂರ್ಯವಂಶಿ 10ನೇ ಕ್ಲಾಸ್ ಎಕ್ಸಾಂ ಚಕ್ಕರ್ ಹೊಡೆದ ಬಗ್ಗೆ ಕೊನೆಗೂ ಮೌನ ಮುರಿದ ತಂದೆ! ಅಚ್ಚರಿ ಹೇಳಿಕೆ

ಬೆಂಗಳೂರು: ಭಾರತದ ಪ್ರತಿಭಾನ್ವಿತ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಕೊನೆಯ ಕ್ಷಣದಲ್ಲಿ 10ನೇ ಕ್ಲಾಸ್‌ ಸಿಬಿಎಸ್‌ಇ ವಾರ್ಷಿಕ ಪರೀಕ್ಷೆಯಿಂದ ಹಿಂದೆ ಸರಿದಿದ್ದಾರೆ. ಈ ಬಗ್ಗೆ ಕೊನೆಗೂ ವೈಭವ್ ತಂದೆ ಮೊದಲ ಬಾರಿಗೆ ತುಟಿಬಿಚ್ಚಿದ್ದಾರೆ.

ಇತ್ತೀಚೆಗಷ್ಟೇ ನಡೆದ ಐಸಿಸಿ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಭಾರತ ತಂಡವು ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೈಭವ್ ಸೂರ್ಯವಂಶಿ ಕ್ರಿಕೆಟ್ ಅಭಿಮಾನಿಗಳ ಮನೆಮಾತಾಗಿದ್ದರು.

ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಟ್ರೋಫಿ ಗೆದ್ದು ಭಾರತಕ್ಕೆ ಬಂದಿದ್ದ ವೈಭವ್ ಸೂರ್ಯವಂಶಿ, ಇದೇ ಫೆಬ್ರವರಿ 17ರಿಂದ ಆರಂಭವಾಗುವ ಸಿಬಿಎಸ್‌ಇ ಪರೀಕ್ಷೆ ಬರೆಯಲು ರೆಡಿಯಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಅದಕ್ಕೆ ಸಾಕ್ಷಿಯೆನ್ನುವಂತೆ ವೈಭವ್ ಓದುವ ಶಾಲಾ ಸಿಬ್ಬಂದಿಗಳು ಈಗಾಗಲೇ ಹಾಲ್‌ ಟಿಕೆಟ್ ವೈಭವ್ ಅವರಿಗೆ ತಲುಪಿದೆ ಎಂದು ಹೇಳಿದ್ದರು.

ಇನ್ನು ಇದೆಲ್ಲದರ ನಡುವೆ ವೈಭವ್ ಸೂರ್ಯವಂಶಿ ಸ್ಟಾರ್ ಕ್ರಿಕೆಟಿಗನಾಗಿದ್ದರೂ, ಪರೀಕ್ಷೆ ಬರೆಯುವ ವೇಳೆಯಲ್ಲಿ ಯಾವುದೇ ವಿಶೇಷ ಸೌಲಭ್ಯಗಳು ಅವರಿಗಿರುವುದಿಲ್ಲ ಎಲ್ಲರಂತೆ ಅವರು ಪರೀಕ್ಷೆ ಬರೆಯಬಹುದು ಎಂದು ಪೋದಾರ್ ಇಂಟರ್‌ನ್ಯಾಷನಲ್ ಸ್ಕೂಲ್‌ನ ಪ್ರಿನ್ಸಿಪಾಲ್ ಮಾಹಿತಿ ಹಂಚಿಕೊಂಡಿದ್ದರು.

ಹೀಗಿರುವಾಗಲೇ 10ನೇ ತರಗತಿ ಪರೀಕ್ಷೆ ಬರೆಯಲು ಕೇವಲ ಒಂದು ದಿನ ಬಾಕಿ ಇರುವಾಗ ವೈಭವ್ ಸೂರ್ಯವಂಶಿ 10ನೇ ತರಗತಿ ಪರೀಕ್ಷೆಗೆ ಗೈರು ಹಾಜರಾಗುವುದು ಖಚಿತವಾಗಿತ್ತು. ಇನ್ನು ಫೆಬ್ರವರಿ 17ರಂದು ನಡೆದ ಪರೀಕ್ಷೆಯಲ್ಲಿ ವೈಭವ್ ಪಾಲ್ಗೊಂಡಿಲ್ಲ. ಹೀಗಾಗಿ ನಿಯಮಾನುಸಾರ ಅವರು ಗೈರಾಗಿದ್ದಾರೆ ಎಂದು ದಾಖಲೆಯಲ್ಲಿ ನಮೂದಿಸಲಾಗಿದೆ ಎಂದು ಪ್ರಿನ್ಸಿಪಾಲ್ ಎನ್‌.ಕೆ ಸಿನ್ಹಾ ತಿಳಿಸಿದ್ದರು.

ಇದೀಗ ಈ ವಿಚಾರವಾಗಿ ವೈಭವ್ ತಂದೆ ಸಂಜೀವ್ ಮೌನ ಮುರಿದಿದ್ದು, ‘ನಮ್ಮ ಮಗ ನಾಗ್ಪುರದಲ್ಲಿ ಐಪಿಎಲ್ ತಂಡವಾದ ರಾಜಸ್ಥಾನ ರಾಯಲ್ಸ್ ಆಟಗಾರರ ಜತೆ ಪ್ರಾಕ್ಟೀಸ್ ಮಾಡುತ್ತಿದ್ದಾನೆ. ಈ ವರ್ಷ ವೈಭವ್ ಎಕ್ಸಾಂ ಬರೆಯುವುದರ ಬಗ್ಗೆ ಎಲ್ಲಾ ಕಡೆ ದೊಡ್ಡದಾಗಿ ಬಿಂಬಿಸಲಾಗಿದೆ. ಹೀಗಾಗಿ ಈ ಬಾರಿ ಎಕ್ಸಾಂಗೆ ಗೈರಾಗಿ ಮುಂದಿನ ವರ್ಷ ಪರೀಕ್ಷೆ ಬರೆಯಲು ತೀರ್ಮಾನಿಸಿದ್ದಾನೆ’ ಎಂದು ತಿಳಿಸಿದ್ದಾರೆ.

ವೈಭವ್ ಈ ಬಾರಿ ಎಕ್ಸಾಂ ಬರೆದರೂ ಹೆಚ್ಚು ಏಕಾಗ್ರತೆಯಿಂದ ಇರಲು ಸಾಧ್ಯವಾಗುವುದಿಲ್ಲ. ವೈಭವ್ ಶಾಲೆಗೆ ಹೋಗುವಾಗ ತುಂಬಾ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಆತ ಶಾಲೆಗೆ ಹೋಗುವಾಗ ಎಲ್ಲಾ ವಿಷಯದಲ್ಲೂ 90+ ಸ್ಕೋರ್ ಮಾಡುತ್ತಿದ್ದ. ಆದರೆ ಈಗ ಆತನ ಸದ್ಯದ ಟಾರ್ಗೆಟ್ ಕ್ರಿಕೆಟ್ ಮೇಲಿದೆ. ಮುಂದಿನ ವರ್ಷ ಖಂಡಿತ ಆತ 10ನೇ ತರಗತಿ ಪರೀಕ್ಷೆ ಬರೆಯುತ್ತಾನೆ ಎಂದು ವೈಭವ್ ತಂದೆ ಹೇಳಿದ್ದಾರೆ.

Source link

Leave a Reply

Your email address will not be published. Required fields are marked *