ಎಐ ಶೃಂಗಸಭೆ ವಿವಾದದ ಬೆನ್ನಲ್ಲೇ ಗಲ್ಗೋಟಿಯಾ ವಿವಿ ಯುವತಿಯ ಕಿಚ್ಚು ಹಚ್ಚಿಸುವ ಡ್ಯಾನ್ಸ್‌ ವಿಡಿಯೋ ವೈರಲ್! | Galgotias University Robot Dog Controversy Sparks Viral Social Media Trolling Kvn

ಎಐ ಶೃಂಗಸಭೆ ವಿವಾದದ ಬೆನ್ನಲ್ಲೇ ಗಲ್ಗೋಟಿಯಾ ವಿವಿ ಯುವತಿಯ ಕಿಚ್ಚು ಹಚ್ಚಿಸುವ ಡ್ಯಾನ್ಸ್‌ ವಿಡಿಯೋ ವೈರಲ್! | Galgotias University Robot Dog Controversy Sparks Viral Social Media Trolling Kvn



ಎಐ ಶೃಂಗಸಭೆ ವಿವಾದದ ಬೆನ್ನಲ್ಲೇ ಗಲ್ಗೋಟಿಯಾ ವಿವಿ ಯುವತಿಯ ಕಿಚ್ಚು ಹಚ್ಚಿಸುವ ಡ್ಯಾನ್ಸ್‌ ವಿಡಿಯೋ ವೈರಲ್! | Galgotias University Robot Dog Controversy Sparks Viral Social Media Trolling Kvn

AI ಸಮ್ಮಿಟ್‌ನಲ್ಲಿ ಗಲ್ಗೋಟಿಯಾಸ್ ವಿಶ್ವವಿದ್ಯಾಲಯವು ಚೀನಾದ ರೋಬೋಡಾಗ್‌ ಅನ್ನು ತಮ್ಮದೆಂದು ಹೇಳಿಕೊಂಡು ವಿವಾದಕ್ಕೆ ಸಿಲುಕಿದೆ. ಸತ್ಯ ಬಯಲಾಗುತ್ತಿದ್ದಂತೆ ಕ್ಷಮೆಯಾಚಿಸಿದರೂ, ಈಗ ವಿಶ್ವವಿದ್ಯಾಲಯವು ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಟ್ರೋಲ್‌ಗೆ ಗುರಿಯಾಗಿದೆ.

ಭಾರತದ AI ಇಂಪ್ಯಾಕ್ಟ್ ಸಮ್ಮಿಟ್ 2026 ರಲ್ಲಿ ಗಲ್ಗೋಟಿಯಾಸ್ ವಿಶ್ವವಿದ್ಯಾಲಯದ ರೋಬೋಡಾಗ್ ವಿವಾದ ಸೃಷ್ಟಿಸಿದ್ದು ಕಳೆದೆರಡ್ಮೂರು ದಿನಗಳಿಂದ ಇಂಟರ್ನೆಟ್‌ನಲ್ಲಿ ಅದರ ಬಗ್ಗೆಯೇ ಚರ್ಚೆಗಳು ನಡೆಯುತ್ತಿವೆ. ದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಸಮಿಟ್‌ನಲ್ಲಿ ಗಲ್ಗೋಟಿಯಾಸ್ ವಿಶ್ವವಿದ್ಯಾಲಯವು ಚೀನಾ ಮೂಲದ Unitree Go2 ಎಂಬ ರೋಬೋಟಿಕ್ ನಾಯಿಯನ್ನು ಪ್ರದರ್ಶಿಸಿತ್ತು. ವಿಶ್ವವಿದ್ಯಾಲಯದ ಪ್ರತಿನಿಧಿ ನೇಹಾ ಸಿಂಗ್ ಎಂಬವರು ಈ ರೋಬೋಟ್ ಅನ್ನು ತಮ್ಮ ಸಂಸ್ಥೆಯಲ್ಲೇ ಅಭಿವೃದ್ಧಿಪಡಿಸಿದ ಸ್ವಂತ ಆವಿಷ್ಕಾರ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಯಿತು.

ಅಧಿಕೃತವಾಗಿ ಕ್ಷಮೆಯಾಚಿಸಿದ ಗಲ್ಗೋಟಿಯಾಸ್ ವಿಶ್ವವಿದ್ಯಾಲಯ

ಸಾಮಾಜಿಕ ಜಾಲತಾಣಗಳಲ್ಲಿ ತಾಂತ್ರಿಕ ತಜ್ಞರು ಇದನ್ನು ಚೀನಾದ ಕಂಪನಿಯ ಉತ್ಪನ್ನವೆಂದು ಗುರುತಿಸಿದ ನಂತರ, ವಿಶ್ವವಿದ್ಯಾಲಯವು ತೀವ್ರ ಟೀಕೆ ಗುರಿಯಾಯ್ತು, ಮತ್ತು ಕೇಂದ್ರ ಸರ್ಕಾರವು ರಾಜಕೀಯ ಒತ್ತಡಕ್ಕೆ ಒಳಗಾಯಿತು. ಅದರ ಬೆನ್ನಲ್ಲೇ ವಿವಿಯ ಸ್ಟಾಲ್‌ಅನ್ನು ಖಾಲಿ ಮಾಡಿಸಲಾಯ್ತು. ವಿವಾದ ತಾರಕಕ್ಕೇರಿದ ನಂತರ ವಿಶ್ವವಿದ್ಯಾಲಯವು ಅಧಿಕೃತವಾಗಿ ಕ್ಷಮೆಯಾಚಿಸಿತು.

ಆ ರೋಬೋಟ್ ಅನ್ನು ಕೇವಲ ಶೈಕ್ಷಣಿಕ ಪ್ರಾತ್ಯಕ್ಷಿಕೆಗಾಗಿ (educational demonstration) ಬಳಸಲಾಗಿದೆಯೇ ಹೊರತು, ಅದನ್ನು ನಾವು ತಯಾರಿಸಿದ್ದೇವೆ ಎಂದು ಹೇಳಿಕೊಳ್ಳುವ ಉದ್ದೇಶವಿರಲಿಲ್ಲ ಎಂದು ತಿಳಿಸಿತು.ಮಾಹಿತಿ ಕೊರತೆಯಿಂದಾಗಿ ವಿಶ್ವವಿದ್ಯಾಲಯದ ಪ್ರತಿನಿಧಿಯು ಅಂತಹ ಹೇಳಿಕೆ ನೀಡಿದ್ದಾರೆ ಎಂದು ಸಂಸ್ಥೆಯು ಸ್ಪಷ್ಟಪಡಿಸಿತು.

ವಿವಿ ಫೆಸ್ಟ್‌ನ ಹಳೆ ವಿಡಿಯೋ ವೈರಲ್

ಈಗ ಅದರ ಬೆನ್ನಲ್ಲೇ ಈಗ ಗಲ್ಗೋಟಿಯಾಸ್ ವಿವಿಯು ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದೆ. ನೆಟಿಜನ್‌ಗಳು ವಿವಿಯನ್ನು ಟ್ರೋಲ್ ಮಾಡುವ ಯಾವುದೇ ಚಾನ್ಸನ್ನು ಮಿಸ್‌ ಮಾಡ್ತಿಲ್ಲ! ಈಗ ಗಲ್ಗೋಟಿಯಾಸ್ ವಿವಿಯ ಫೆಸ್ಟ್‌ನ ವಿಡಿಯೋವೊಂದು ವೈರಲ್ ಆಗಿದೆ. ಆ ವಿಡಿಯೋದಲ್ಲಿ ವಿದ್ಯಾರ್ಥಿನಿಯೊಬ್ಬಳು ತುಂಡುಡುಗೆ ತೊಟ್ಟು ಹಿಂದಿ ಸಿನಿಮಾ ಸಾಂಗ್‌ಗೆ ಡ್ಯಾನ್ಸ್‌ ಮಾಡುತ್ತಿದ್ದಾಳೆ. ವಿವಿಯು ಎಐ ಅಲ್ಲ, ತನ್ನ ಫೆಸ್ಟ್‌ಗೆ ಫೇಮಸ್‌ ಎಂದು ಸೋಶಿಯಲ್ ಮೀಡಿಯಾ ಬಳಕೆದಾರರು ಒಕ್ಕಣೆ ಬರೆದಿದ್ದಾರೆ.



Source link

Leave a Reply

Your email address will not be published. Required fields are marked *