ಬೆಂಗಳೂರಿನಲ್ಲಿ ಕೊನೆಗೂ ಕಸ ಸಮಸ್ಯೆಗೆ ಸಿಕ್ತು ಮುಕ್ತಿ: ಬಗೆರಿದಿದ್ಹೇಗೆ?

ಬೆಂಗಳೂರಿನಲ್ಲಿ ಕೊನೆಗೂ ಕಸ ಸಮಸ್ಯೆಗೆ ಸಿಕ್ತು ಮುಕ್ತಿ: ಬಗೆರಿದಿದ್ಹೇಗೆ?


ಬೆಂಗಳೂರು, ಫೆಬ್ರವರಿ 19: ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ಕಸದ (ಕಸ) ಸಮಸ್ಯೆ ಇನ್ನೂ ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಬೆಳ್ಳಳ್ಳಿ ಕ್ವಾರಿಯಲ್ಲಿ ಕಸದ ವಿಲೇವಾರಿಯಲ್ಲಿ ಸಾಲು ಕಟ್ಟಿ ನಿಂತಿರುವಂತಹ ಕಸದ ಲಾರಿಗಳು. ಈ ಬಗ್ಗೆ ನಿನ್ನೆ TV9 ಸುದ್ದಿ ಬಿತ್ತರಿಸಿತ್ತು. ಇದರ ಬೆನ್ನಲ್ಲೇ ಸಮಸ್ಯೆ ಬಗೆ ಹರಿಸಿದ್ದಾರೆ. ಜೊತೆಗೆ 90 ಕೋಟಿ ರೂ ಅನುದಾನ ಬಿಡುಗಡೆ ಮಾಡುವ ಭರವಸೆ ಇದೆ. ಹೀಗಾಗಿ ಎಂದಿನಂತೆ ಲಾರಿಗಳು ಕಸ ವಿಲೇವಾರಿಗೆ ಮುಂದಾಗಿವೆ.

ಬೆಂಗಳೂರಿನ ಕಸ ವಿಲೇವಾರಿ ಮಾಡುವ ಬೆಳ್ಳಳ್ಳಿ ಬಳಿಯ ಕ್ವಾರಿಗೆ ಕಸ ಡಂಪ್ ಮಾಡದಂತೆ ಬೆಳ್ಳಳ್ಳಿ ಗ್ರಾಮಸ್ಥರು ನಿರ್ಬಂಧಿಸಿದ್ದರು. ಕಸದ ಕ್ವಾರಿಗೆ ಸಂಪರ್ಕಿಸುವ ರಸ್ತೆಗೆ ಅಡ್ಡಲಾಗಿ ಟ್ರ್ಯಾಕ್ಟರ್ ನಿಲ್ಲಿಸಿ ಯಾವುದೇ ಕಸದ ಲಾರಿ ಡ್ಯಾಂಪಿಂಗ್ ಯಾರ್ಡ್‌ಗೆ ಪ್ರವೇಶಿಸದಂತೆ ತಡೆದಿದ್ದರು. ಇನ್ನು ಸರಿ ಸುಮಾರು 100ಕ್ಕೂ ಹೆಚ್ಚು ಕಸದ ಲಾರಿಗಳು ಈ ರಸ್ತೆಯಲ್ಲಿ ಸಾಲುಗಟ್ಟಿ ನಿಲ್ಲುತ್ತಿದ್ದವು. ಈ ಬಗ್ಗೆ ಟಿವಿ9 ಸುದ್ದಿ ಬಿತ್ತರಿಸಿದ ಬೆನ್ನಲ್ಲೇ ಅಧಿಕಾರಿಗಳ ಸಮಸ್ಯೆ ಬಗ್ಗೆ ಗಮನ ಹರಿಸಿ ಜನರನ್ನು ಮನವೊಲಿಸುವ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬಂದ್ ಆಗುತ್ತಾ ಕಸ ಸಂಗ್ರಹಣೆ? ಡಂಪಿಂಗ್‌ ಯಾರ್ಡ್‌ಗಳಲ್ಲಿ ಕಸದ ಲಾರಿಗಳಿಗೆ ದಿಗ್ಬಂಧನ

ಬೆಳ್ಳಳ್ಳಿ ಡಂಪಿಂಗ್ ಯಾರ್ಡ್‌ಗೆ ಕಸ ಡಂಪ್ ಮಾಡುವುದರಿಂದ ಅಲ್ಲಿನ ಗ್ರಾಮಸ್ಥರ ಆರೋಗ್ಯದ ಸಮಸ್ಯೆ ಸೇರಿದಂತೆ ಸಾಕಷ್ಟು ತೊಂದರೆಯಾಗುತ್ತಿದೆ. ಜೊತೆಗೆ ಸರಿಯಾದ ರಸ್ತೆ ಸಹ ಇಲ್ಲ, ಹೀಗಾಗಿ ಈ ಹಿಂದೆ ಸರಿಸುಮಾರು 7-8 ತಿಂಗಳ ಹಿಂದೆ ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ ಗ್ರಾಮ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಲಾಗುವುದು ಎಂಬ ಭರವಸೆಯನ್ನ ಸಾರ್ವಜನಿಕ ಬಿಬಿಎಂಪಿ ಅಧಿಕಾರಿಗಳು ನೀಡಿದ್ದರು. ನಿನ್ನೆ ಕಸದ ಕ್ವಾರಿಗೆ ಸಂಪರ್ಕಿಸುವ ರಸ್ತೆ ತಡೆದ ಬೆನ್ನಲ್ಲೇ ಘನ ತ್ಯಾಜ್ಯ ನಿರ್ವಹಣಾ ಘಟಕದ ಸಿಇಓ ಕರಿ ಗೌಡ 90 ಕೋಟಿ ರೂ ಅನುದಾನ ಬಿಡುಗಡೆ ಮಾಡುವ ಭರವಸೆ ಇದೆ. ಇದರ ಬೆನ್ನಲ್ಲೇ ಸ್ಥಳೀಯರು ಪ್ರತಿಭಟನೆಯನ್ನು ಕೈ ಬಿಟ್ಟಿದ್ದಾರೆ.

ರಾಜಕೀಯ ಗುದ್ದಾಟ

ಇನ್ನು ಬೆಂಗಳೂರಿನಲ್ಲಿ ಕಸದ ಡಂಪಿಂಗ್ ಸಮಸ್ಯೆ ಉದ್ಭವವಾಗುತ್ತಿದ್ದಂತೆಯೇ ಕಸದ ವಿಚಾರವಾಗಿ ರಾಜಕೀಯ ಜೋರಾಗಿತ್ತು. ಬಿಜೆಪಿ ನಾಯಕರು ಕಾಂಗ್ರೆಸ್ ಮೇಲೆ ಆಕ್ರೋಶ ಹೊರಹಾಕಿದರು, ಬೆಂಗಳೂರಿನ ಕಸವನ್ನು ಎತ್ತುವ ಯೋಗ್ಯತೆಯೂ ಇವರಿಗಿಲ್ಲ. ಇನ್ನೆರಡು ದಿನ ಕಳೆದರೆ ಗಾರ್ಬೇಜ್ ಸಿಟಿ ಆಗಲಿದೆ. ಗುತ್ತಗೆದಾರರಿಗೂ ಹಣ ಬಿಡುಗಡೆ ಮಾಡಿಲ್ಲ ಎಂದು ಟೀಕಿಸಿದ್ದಾರೆ. ಸದ್ಯ ಇದಕ್ಕೆಲ್ಲಾ ಇದೀಗ ತೆರೆಬಿಡ್ಲು.

ಒಟ್ಟಿನಲ್ಲಿ ದೊಡ್ಡಬಳ್ಳಾಪುರದಲ್ಲಿ ಕಸ ವಿಲೇವಾರಿ ಮಾಡೋದಕ್ಕೆ ಸ್ಥಳೀಯ ಜನರು ವಿರೋಧಿಸಿದ್ದರು. ಮತ್ತೊಂದು ಕಡೆ ಬೆಳ್ಳಿ ಕಸ ವಿಲೇವಾರಿ ಘಟಕದ ಗ್ರಾಮಸ್ಥರು ಪ್ರತಿಭಟನೆಗೆ ಮಣಿದ ಜಿಬಿಎ ಹಣ ಬಿಡುಗಡೆಗೆ ಮುಂದಾಗಿದ್ದು, ಇದೀಗ ಕಸದ ಸಮಸ್ಯೆಗೆ ಮುಕ್ತಿ ಸಿಕ್ಕಂತಾಗಿದೆ.

ವರದಿ: ಅರುಣ್ ಕುಮಾರ್ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *