
ತುಮಕೂರು:ಸಾಮಾಜಿಕ ಮಾಧ್ಯಮವು ಸಮಾಜದ ಮೇಲೆ ಬೀರುವ ಪ್ರಭಾವ ಸಂಕೀರ್ಣವಾಗಿದ್ದು,ಇದು ಸಂವಹನದಲ್ಲಿ ಕ್ರಾಂತಿಯನ್ನು0ಟು ಮಾಡಿದೆ. ತ್ವರಿತ ಜಾಗತಿಕ ಸಂಪರ್ಕವನ್ನು ಒದಗಿಸುತ್ತದೆ. ಮಾಹಿತಿ ಹಂಚಿಕೆಯನ್ನು ಸುಗಮಗೊಳಿಸುತ್ತದೆ. ಆದಾಗ್ಯೂ, ಇದು ಗೌಪ್ಯತೆ ಕಾಳಜಿಗಳು, ಸೈಬರ್ ಅಪರಾಧಗಳು ಮತ್ತು ತಪ್ಪು ಮಾಹಿತಿಯ ಹರಡುವಿಕೆಯಂತಹ ಸವಾಲುಗಳನ್ನು ಸಹ ತಂದೊಡ್ಡುತ್ತದೆ. ಆದ್ದರಿಂದ ಈ ಮಾಧ್ಯಮದ ಬಳಕೆಯಲ್ಲಿ ಎಚ್ಚರಿಕೆ ವಹಿಸುವುದ ಅಗತ್ಯ ಎಂದು ಭಾರತ ಸರ್ಕಾರದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಬೆಂಗಳೂರು ಕೇಂದ್ರದ ಸಾಮಾಜಿಕ ಜಾಲತಾಣ ಮಾಧ್ಯಮದ ಮುಖ್ಯ ಕಾರ್ಯನಿರ್ವಾಹಕರಾದ ಪಿ.ಪ್ರಭಾಕರ್ ಅವರು ಅಭಿಪ್ರಾಯಪಟ್ಟರು.
ನಗರದ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಇಂದು (ಸೋಮವಾರ) ಆಯೋಜಿಸಲಾದ ವಾರದ ಸರಣಿ ಉಪನ್ಯಾಸ ಮಾಲೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ‘ಅಭಿವೃದ್ದಿಯಲ್ಲಿ ಸಂವಹನದ ಪಾತ್ರ’ ವಿಷಯ ಕುರಿತು ವೆಬಿನಾರ್ ಮೂಲಕ ಮಾತನಾಡಿದ ಅವರು, ಸಾಮಾಜಿಕ ಮಾಧ್ಯಮವು ಆಧುನಿಕ ಸಮಾಜದಲ್ಲಿ ಆಳವಾಗಿ ಬೇರೂರಿದೆ. ಸಂವಹನ, ಸಂಪರ್ಕ, ಮಾಹಿತಿ ಪ್ರಸರಣ, ಗೌಪ್ಯತೆ ಮತ್ತು ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ. ಸಮಾಜದ ಮೇಲೆ ಸಕಾರಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂದರು.
ಸAವಹನ, ಮಾಹಿತಿ ಹಂಚಿಕೆ, ಜ್ಞಾನ ಮತ್ತು ಕೌಶಲ್ಯಗಳ ಕಲಿಕೆ, ಸಾಮಾಜಿಕ ಜಾಗೃತಿ ಮತ್ತು ಕ್ರಿಯಾಶೀಲತೆ, ಆರ್ಥಿಕ ಅವಕಾಶಗಳು ಮುಕ್ತ ವೇದಿಕೆಯನ್ನು ಕಲ್ಪಿಸಿ ಕೊಡುವ ಸಾಮಾಜಿಕ ಜಾಲತಾಣ, ತಪ್ಪು ಮಾಹಿತಿಯ ಹರಡುವಿಕೆ, ಮಾನಸಿಕ ಆರೋಗ್ಯ ಮತ್ತು ಗೌಪ್ಯತಾ ಸಮಸ್ಯೆಗಳಂತಹ ಸವಾಲುಗಳನ್ನು ಸಹ ಉಂಟುಮಾಡುತ್ತದೆ. ಸೈಬರ್ ಬೆದರಿಸುವಿಕೆ ಮತ್ತು ಆನ್‌ಲೈನ್ ಕಿರುಕುಳ ಇಂದಿನ ಬಹುದೊಡ್ಡ ಪಿಡುಗಾಗಿದೆ ಎಂದು ಪಿ.ಪ್ರಭಾಕರ್ ವಿವರಿಸಿದರು.
ಸಾಮಾಜಿಕ ಮಾಧ್ಯಮಗಳು, ಸೋಶಿಯಲ್ ಆಪ್‌ಗಳು, ಮತ್ತು ಡಿಜಿಟಲ್ ಮಾರ್ಕೆಟಿಂಗ್‌ನ ಅನುಕೂಲ-ಅನಾನುಕೂಲಗಳು ಹಾಗೂ ಪರಿಣಾಮಗಳ ಬಗ್ಗೆ ಆಳವಾದ ಒಳನೋಟವನ್ನು ನೀಡಿದ ಅವರು, ಮಾಧ್ಯಮ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಯಾವರೀತಿ ತೊಡಗಿಕೊಳ್ಳಬೇಕು, ಮುಂಜಾಗ್ಬತ ಅಂಶಗಳೇನು ಎಂಬುದನ್ನು ಪ್ರಾತ್ಯಕ್ಷತೆ ಮೂಲಕ ಮನವರಿಕೆ ಮಾಡಿಕೊಟ್ಟರು.

ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಬಿ.ಟಿ.ಮುದ್ದೇಶ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಮೇಲೆ ಸಾಮಾಜಿಕ ಮಾಧ್ಯಮದ ಪ್ರಭಾವವು ಸಂಪರ್ಕ, ಮಾಹಿತಿ ಹಂಚಿಕೆ ಮತ್ತು ಸಾಮಾಜಿಕ ಬದಲಾವಣೆಗೆ ಹಲವಾರು ಅವಕಾಶಗಳನ್ನು ನೀಡುತ್ತದೆಯಾದರೂ ತಪ್ಪು ಮಾಹಿತಿಯ ಹರಡುವಿಕೆಗೆ ಸಂಬAಧಿಸಿದ ಗಮನಾರ್ಹ ಸವಾಲುಗಳನ್ನು ಸಹ ಒದಗಿಸುತ್ತದೆ. ಜವಾಬ್ದಾರಿಯುತ ಸಾಮಾಜಿಕ ಮಾಧ್ಯಮ ಬಳಕೆಗೆ ಡಿಜಿಟಲ್ ಸಾಕ್ಷರತೆಯನ್ನು ಉತ್ತೇಜಿಸುವುದು ಇಂದಿನ ಅಗತ್ಯವಾಗಿದೆ ಎಂದರು.
ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಬಿ ಟಿ ಮುದ್ದೇಶ್, ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಶ್ವೇತಾ ಎಂ. ಪಿ, ಶ್ರೀ ಕಿರಣ್ ಸಿ.ಎನ್., ರೇಡಿಯೋ ಸಿದ್ಧಾರ್ಥದ ಗೌತಮ್.ವಿ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು. ವಿದ್ಯಾರ್ಥಿಗಳಾದ ಮಹಮದ್ ಬೇಗ್ ಅವರು ವೆಬಿನಾರ್‌ನ ನಿರ್ವಹಣೆ ಮಾಡಿದರು. ಈ ಉಪನ್ಯಾಸ ಮಾಲಿಕೆಯಲ್ಲಿ ಆಫ್‌ಲೈನ್ ಮತ್ತು ಆನ್‌ಲೈನ್ ಮೂಲಕ ಭಾಗವಹಿಸಿದ್ದ ಮಾಧ್ಯಮ ವಿದ್ಯಾರ್ಥಿಗಳೊಂದಿಗೆ ಸಾಮಾಜಿಕ ಜಾಲತಾಣದ ಬಳಕೆ ಕುರಿತು ಸಂವಾದ ನಡೆಸಲಾಯಿತು.