Video: ತಿಂದು ಬಿಸಾಡಿದ್ದ ತಟ್ಟೆಗಳಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ

Video: ತಿಂದು ಬಿಸಾಡಿದ್ದ ತಟ್ಟೆಗಳಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ


ನವದೆಹಲಿ, ಫೆಬ್ರವರಿ 20: ಯುಪಿಎಸ್‌ಸಿ ಆಕಾಂಕ್ಷಿಯೊಬ್ಬರು ತಿಂದು ಬಿಸಾಡಿದ್ದ ತಟ್ಟೆಗಳಲ್ಲಿದ್ದ ಪದಾರ್ಥಗಳನ್ನು ಒಟ್ಟು ಮಾಡುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಅವರು ಬುಲಂದ್ ಶೆಹರ್ನ ವಿದ್ಯಾರ್ಥಿ ಅಶುತೋಷ್. ಈ ವಿಡಿಯೋವನ್ನು ಮೊಬೈಲ್ ಅಂಗಡಿಯ ಮಾಲೀಕ ಉಪಲಕ್ಷ್ ಮಾಡಿದ್ದು, ಆ ಸಮಯದಲ್ಲಿ ಈ ವ್ಯಕ್ತಿಗೆ ಹುಚ್ಚರಾಗಿರಬೇಕು, ಸೂಟು ಬೂಟು ಧರಿಸಿ ವಿದ್ಯಾವಂತನಂತೆ ಕಾಣುತ್ತಿದ್ದಾರೆ, ಯಾಕೆ ತಿಂದು ಬಿಸಾಡಿದ ತಟ್ಟೆಗಳನ್ನು ಮುಟ್ಟುತ್ತಿದ್ದಾರೆ, ಅದರಲ್ಲಿರುವ ವಸ್ತುಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ತುಂಬಾ ತಲೆ ಕೆಡಿಸಿಕೊಂಡಿದ್ದಾರೆ.

ಆದರೆ ಅಶುತೋಶ್ ಆಲೋಚನೆ ಎಲ್ಲರನ್ನು ನಿಬ್ಬೆರಗಾಗಿಸಿತ್ತು, ಎಲ್ಲೂ ಪ್ರಚಾರ ಮಾಡದೆ, ಸಾಮಾಜಿಕ ಕಾರ್ಯದಲ್ಲಿ ಅವರು ತಾವು ತೊಡಗಿಸಿಕೊಂಡಿದ್ದಾರೆ ಎಂಬುದು ಅರಿವಾಗಿತ್ತು. ಆ ತಟ್ಟೆಯಲ್ಲಿ ಬಿಟ್ಟಿದ್ದ ಆಹಾರ ಬೀದಿ ನಾಯಿಗಳು ಹಾಗೂ ಬೀದಿ ಬದಿ ಇರುವ ಹಸುಗಳಿಗೆ ಕೊಡಲು ಅವರು ಹೋಗುತ್ತಿದ್ದರು. ವ್ಯರ್ಥ ಮಾಡುವುದು ಸುಲಭ, ಆದರೆ ನಿಜವಾದ ಮಾನವೀಯತೆ ತ್ಯಾಜ್ಯವನ್ನು ಜೀವಸೆಲೆಯಾಗಿ ಮರುಬಳಕೆ ಮಾಡುತ್ತದೆ ಎಂದು ‘ದಿ ಬೆಟರ್ ಇಂಡಿಯಾ’ ಎಂಬ ಎಕ್ಸ್ ಅಕೌಂಟ್‌ನಿಂದ ಈ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋವನ್ನು ನಾರ್ತ್ ಕ್ಯಾಂಪಸ್ ಬಾಯ್ಸ್ ಎನ್ನುವ ಇನ್ಸ್ಟಾಗ್ರಾಮ್ ಅಕೌಂಟ್ ಅನ್ನು ಪಡೆಯಲಾಗಿದೆ ಎಂದು ಬರೆಯಲಾಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *