ಕೆಲವು ದಿನ ಧಾರಾವಾಹಿಯಿಂದ ದೂರ ಉಳಿಯಲಿದ್ದಾರೆ ‘ನಾ ನಿನ್ನ ಬಿಡಲಾರೆ’ ನಟಿ ನೀತಾ ಅಶೋಕ್

ಕೆಲವು ದಿನ ಧಾರಾವಾಹಿಯಿಂದ ದೂರ ಉಳಿಯಲಿದ್ದಾರೆ ‘ನಾ ನಿನ್ನ ಬಿಡಲಾರೆ’ ನಟಿ ನೀತಾ ಅಶೋಕ್


ಜೀ ಕನ್ನಡದಲ್ಲಿ ‘ನಾ ನಿನ್ನ ಬಿಡಲಾರೆ’ ಧಾರಾವಾಹಿ ರಾತ್ರಿ 9.30ಕ್ಕೆ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿ ವೀಕ್ಷಕರನ್ನು ಸೆಳೆದಿದೆ. ಈ ಧಾರಾವಾಹಿ ಸಾಮಾನ್ಯ ಅತ್ತೆ ಸೊಸೆಯ ಜಗಳದಂತೆ ಖಂಡಿತಾ ಹೇಳಬಹುದು. ಏಕೆಂದರೆ, ಇದು ಹಾರರ್ ಥೀಮ್ ನಲ್ಲಿ ಮೂಡಿ ಬಂದಿದೆ. ಈ ಧಾರಾವಾಹಿ ವೀಕ್ಷಕರ ಮನ ಗೆದ್ದಿದೆ. ಈಗ ಧಾರಾವಾಹಿಯ ಮುಖ್ಯ ಪಾತ್ರಧಾರಿ ನೀತಾ ಅಶೋಕ್ ವಿಚಾರದಲ್ಲಿ ಬೇಸರದ ಘಟನೆ ನಡೆದಿದೆ.

ನೀತಾ ಅವರು ಅಂಬಿಕಾ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಅಂಬಿಕಾ ಪಾತ್ರಧಾರಾವಾಹಿಯಲ್ಲಿ ಸತ್ತು ಹೋಗಿದೆ. ಆದರೆ, ಆಕೆ ಆತ್ಮವಾಗಿ ಕಾಣಿಸಿಕೊಂಡಿದ್ದಾಳೆ. ನಿಜ ಹೇಳಬೇಕು ಎಂದರೆ ಅವಳು ದೆವ್ವ. ಆದರೆ, ಕೆಟ್ಟ ದೆವ್ವ ಅಲ್ಲ ಒಳ್ಳೆಯ ದೆವ್ವ. ಈ ಪಾತ್ರ ಮಾಡುತ್ತಿರುವ ನೀತಾ ಅವರು ಶೂಟಿಂಗ್ ಸಮಯದಲ್ಲಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ನೀತಾ ನೀಡಿರುವ ಮಾಹಿತಿ ಪ್ರಕಾರ, ಶೂಟ್ ವೇಳೆ ಅವ ಕಾಲು ಟ್ವಿಸ್ಟ್ ಆಗಿತ್ತಂತೆ. ನಂತರ ಅದು ಫ್ರ್ಯಾಕ್ಚರ್ ಆಗಿ ಬದಲಾಯಿತು. ಈಗ ಅವರು ಸರ್ಜರಿ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ಬಂತು. ಈಗ ಸರ್ಜರಿ ಯಶಸ್ವಿಯಾಗಿದೆ. ಅಪೋಲೋ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿದೆ. ಅವರ ಅಭಿಮಾನಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗಕ್ಕೆ ಧನ್ಯವಾದ ಹೇಳಿದ್ದಾರೆ. ‘ನನ್ನನ್ನು ಕೆಲವು ಸಮಯ ಮಿಸ್ ಮಾಡಿಕೊಳ್ಳಿ’ ಎಂದು ನೀತಾ ಹೇಳಿದ್ದಾರೆ. ಹೀಗಾಗಿ, ಅಂಬಿಕಾ ಪಾತ್ರ ಕೆಲವು ದಿನ ತೆರೆಮೇಲೆ ಕಾಣಿಸಿಕೊಂಡಿಲ್ಲ.

ಇದನ್ನೂ ಓದಿ: ಧಾರಾವಾಹಿಯಲ್ಲಿ ದೆವ್ವ, ನಿಜ ಜೀವನದಲ್ಲಿ ಎಷ್ಟು ಕ್ಯೂಟ್ ನೋಡಿ ನೀತಾ ಅಶೋಕ್

ನೀತಾ ಅಶೋಕ್ ಅವರು ಕಿರುತೆರೆ ಹಾಗೂ ಹಿರಿತೆರೆ ಇಬ್ಬರಿಗೂ ಪರಿಚಿತರು. ಇವರು ಉಡುಪಿ ಜಿಲ್ಲೆಯ ಕೋಟದವರು. 2014ರಲ್ಲಿ ಪ್ರಸಾರ ಕಂಡ ‘ಯಶೋಧ’ ಧಾರಾವಾಹಿ ಮೂಲಕ ಬಣ್ಣದ ಬದುಕು ಆರಂಭಿಸಿದರು. ನೀಲಾಂಬರಿ ಹೆಸರಿನ ಧಾರಾವಾಹಿಯಲ್ಲಿಯೂ ನಟಿಸಿದ್ದಾರೆ. 2019ರ ‘ಜಬರ್ದಸ್ತ್ ಶಂಕರ’ ಹೆಸರಿನ ತುಳು ಸಿನಿಮಾದಲ್ಲಿ ನೀತಾ ಅಶೋಕ್ ನಟಿಸಿದರು. ಈ ತುಳು ಸಿನಿಮಾ ಸಾಕಷ್ಟು ಮೆಚ್ಚುಗೆ ಪಡೆಯಿತು. 2022ರಲ್ಲಿ ರಿಲೀಸ್ ಆದ ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ದೀಪ್ ಪತ್ನಿಯ ಪಾತ್ರದಲ್ಲಿ ಅಪರ್ಣಾ ಬಲ್ಲಾಳ್ ಪಾತ್ರದಲ್ಲಿ ನೀತಾ ಮಿಂಚಿದರು. ಈಗ ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ಮಿಂಚುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 7:44 am, ಶುಕ್ರ, 20 ಫೆಬ್ರವರಿ 26



Source link

Leave a Reply

Your email address will not be published. Required fields are marked *