Headlines

ರಫೇಲ್‌ನಿಂದ ನಿಮ್ಮ ಸೇನೆಗೆ ಬಲ, ಆದರೂ ಟೀಕೆ ಏಕೆ?: ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರಾನ್‌ ಅಚ್ಚರಿ | Rafale Fighter Jet Deal Emmanuel Macron Reacts To India Opposition Criticism

ರಫೇಲ್‌ನಿಂದ ನಿಮ್ಮ ಸೇನೆಗೆ ಬಲ, ಆದರೂ ಟೀಕೆ ಏಕೆ?: ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರಾನ್‌ ಅಚ್ಚರಿ | Rafale Fighter Jet Deal Emmanuel Macron Reacts To India Opposition Criticism



ರಫೇಲ್‌ನಿಂದ ನಿಮ್ಮ ಸೇನೆಗೆ ಬಲ, ಆದರೂ ಟೀಕೆ ಏಕೆ?: ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರಾನ್‌ ಅಚ್ಚರಿ | Rafale Fighter Jet Deal Emmanuel Macron Reacts To India Opposition Criticism

ಫ್ರಾನ್ಸ್ ಅಧ್ಯಕ್ಷ ಎಮ್ಯಾನುವಲ್ ಮ್ಯಾಕ್ರಾನ್, ಭಾರತದ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ಕುರಿತ ವಿಪಕ್ಷಗಳ ಟೀಕೆಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಒಪ್ಪಂದವು ಭಾರತದ ಸೇನಾ ಬಲವನ್ನು ಹೆಚ್ಚಿಸುವುದಲ್ಲದೆ, ಉಭಯ ದೇಶಗಳ ವ್ಯೂಹಾತ್ಮಕ ಸಂಬಂಧವನ್ನು ಬಲಪಡಿಸುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ನವದೆಹಲಿ: ಫ್ರಾನ್ಸ್‌ನ ಡಸಾಲ್ಟ್‌ ಕಂಪನಿಯಿಂದ ರಫೇಲ್‌ ಯುದ್ಧ ವಿಮಾನ ಖರೀದಿಸುವ ಭಾರತ ಸರ್ಕಾರದ ನಿರ್ಧಾರದ ಬಗ್ಗೆ ಭಾರತದ ವಿಪಕ್ಷಗಳ ವಿರೋಧದ ಬಗ್ಗೆ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುವಲ್‌ ಮ್ಯಾಕ್ರಾನ್‌ ಅಚ್ಚರಿ ವ್ಯಕ್ತಡಿಸಿದ್ದಾರೆ. ‘ಯುದ್ಧವಿಮಾನಗಳು ಭಾರತೀಯ ಸೇನೆಯ ಬಲವರ್ಧನೆ ಮಾಡುವುದರ ಜತೆಗೆ ಉಭಯ ದೇಶಗಳ ವ್ಯೂಹಾತ್ಮಕ ಸಂಬಂಧವನ್ನೂ ಬಲ ತುಂಬುತ್ತದೆ. ಆದಾರೂ ಅದನ್ಯಾಕೆ ಟೀಕಿಸಲಾಗುತ್ತಿದೆ?’ ಎಂದು ಪ್ರಶ್ನಿಸಿದ್ದಾರೆ.

ಭಾರತದಲ್ಲಿ ಅನೇಕ ಉದ್ಯೋಗಗಳು ಸೃಷ್ಟಿಯಾಗುತ್ತವೆ

ದೆಹಲಿಯಲ್ಲಿ ನಡೆಯುತ್ತಿರುವ ಎಐ ಶೃಂಗದಲ್ಲಿ ಭಾಗಿಯಾಗಲು ಆಗಮಿಸಿರುವ ಮ್ಯಾಕ್ರಾನ್‌ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ‘ಭಾರತದೊಂದಿಗಿನ ರಫೇಲ್‌ ಒಪ್ಪಂದ ವಿಸ್ತರಿಸುತ್ತಿದೆ. ಈ ವ್ಯವಹಾರ ನಮ್ಮ ಡಸಾಲ್ಟ್‌ ಏವಿಯೇಷನ್‌ ಕಂಪನಿ ಹಾಗೂ ನಿಮ್ಮ ಸರ್ಕಾರದೊಂದಿಗೆ ಇರಬಹುದು. ಆದರೆ ಅದರಿಂದ ಸೇನಾ ಲಾಭವಾಗುವುದು ಭಾರತಕ್ಕೆ. ಜತೆಗೆ ಇದರಿಂದ ಅನೇಕ ಉದ್ಯೋಗ ಸೃಷ್ಟಿಯಾಗುತ್ತವೆ. ಎರಡೂ ದೇಶಗಳ ನಡುವಿನ ವಿಶೇಷ ಜಾಗತಿಕ ವ್ಯೂಹಾತ್ಮಕ ಪಾಲುದಾರಿಕೆಯನ್ನು ರಫೇಲ್‌ ಮುನ್ನಡೆಸುತ್ತಿವೆ’ ಎಂದರು.

ಇದೇ ವೇಳೆ ಟಾಟಾ ಜತೆಗೆ ಫ್ರಾನ್ಸ್‌ನ ಏರ್‌ಬಸ್‌ ಜಂಟಿಯಾಗಿ ಕೋಲಾರ ಸಮೀಪ ನಿರ್ಮಿಸಿರುವ ಹೆಲಿಕಾಪ್ಟರ್‌ ಘಟಕವನ್ನು ಉಲ್ಲೇಖಿಸುತ್ತಾ, ‘ಹೆಚ್ಚು ಭಾರತೀಯ ಭಾಗಗಳುಳ್ಳ ಶಸ್ತ್ರಾಸ್ತ್ರ ಉತ್ಪಾದಿಸುವುದರ ಜತೆಗೆ ಭಾರತದಲ್ಲೇ ಉತ್ಪಾದನೆ ಮಾಡಲು ಬದ್ಧರಾಗಿದ್ದೇವೆ’ ಎಂದು ಹೇಳಿದರು.

2016ರಲ್ಲಿ 36 ರಫೇಲ್ ಯುದ್ದ ವಿಮಾನ ಖರೀದಿಗೆ ಫ್ರಾನ್ಸ್ ಜತೆ ಒಪ್ಪಂದ

2016ರಲ್ಲಿ ಮೊದಲ ಬಾರಿಗೆ ಫ್ರಾನ್ಸ್‌ನಿಂದ 36 ರಫೇಲ್‌ ಯುದ್ಧ ವಿಮಾನ ಖರೀದಿಗೆ ಭಾರತ ಒಪ್ಪಂದ ಮಾಡಿಕೊಂಡಿತ್ತು. 60,000 ಕೋಟಿ ರು. ವೆಚ್ಚದ ಈ ಖರೀದಿ ಯೋಜನೆಯಡಿ ಮೊದಲ ವಿಮಾನ 2020ರಲ್ಲಿ ಭಾರತಕ್ಕೆ ಬಂದಿತ್ತು. ಆದರೆ ವಿಮಾನ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ವಿಪಕ್ಷ ಕಾಂಗ್ರೆಸ್‌ ಆರೋಪಿಸಿತ್ತು. ಆದರೆ ಸರ್ಕಾರ ಇದನ್ನು ಸ್ಪಷ್ಟವಾಗಿ ಅಲ್ಲಗಳೆದಿತ್ತು. ಇತ್ತೀಚಿನ ಪಾಕ್‌ ವಿರುದ್ಧದ ಆಪರೇಷನ್‌ ಸಿಂದೂರ ವೇಳೆ ರಫೇಲ್‌ ಯುದ್ಧ ವಿಮಾನಗಳು ಅದ್ಭುತ ಸಾಹಸ ಪ್ರದರ್ಶಿಸಿದ್ದವು. ಅದರ ಬೆನ್ನಲ್ಲೇ ಫ್ರಾನ್ಸ್‌ನಿಂದ 3.25 ಲಕ್ಷ ಕೋಟಿ ರು. ವೆಚ್ಚದಲ್ಲಿ ಇನ್ನೂ 114 ರಫೇಲ್‌ ಖರೀದಿಗೆ ಭಾರತ ನಿರ್ಧರಿಸಿದೆ.



Source link

Leave a Reply

Your email address will not be published. Required fields are marked *