ಟಾಕ್ಸಿಕ್​ ಟೀಸರ್​: ಫ್ಯಾನ್ಸ್​​ಗೆ ಡಬಲ್ ಧಮಾಕ; ದ್ವಿಪಾತ್ರದಲ್ಲಿ ಕಾಣಿಸಿಕೊಂಡ ಯಶ್

ಟಾಕ್ಸಿಕ್​ ಟೀಸರ್​: ಫ್ಯಾನ್ಸ್​​ಗೆ ಡಬಲ್ ಧಮಾಕ; ದ್ವಿಪಾತ್ರದಲ್ಲಿ ಕಾಣಿಸಿಕೊಂಡ ಯಶ್


‘ಟಾಕ್ಸಿಕ್’ ಟ್ರೇಲರ್ ಬಗ್ಗೆ ಚರ್ಚೆ ನಡೆಯುವಾಗಲೇ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಈ ಚಿತ್ರ ಹೇಗಿರದಿರಬಹುದು ಎಂಬ ಸ್ಪಷ್ಟ ಚಿತ್ರಣ ಸಿಕ್ಕಿದೆ. ಯಶ್ ಅವರ ಎದುರು ಬಂದವರು ಉಡೀಸ್ ಆಗುವ ಸೂಚನೆ ಟೀಸರ್ ನೋಡಿದವರಿಗೆ ಸಿಕ್ಕಿದೆ. ಈ ಹಿಂದೆ ಬಿಡುಗಡೆ ಆಗಿದ್ದ ಟೀಸರ್ಗಿಂತ ಈ ಟೀಸರ್ ತುಂಬಾ ಭಿನ್ನವಾಗಿದೆ. ಯಶ್ ಅವರ ರಾಲುಕ್ ಗಮನ ಸೆಳೆದಿದೆ. ಟೀಸರ್ ನಲ್ಲಿ ಇರುವ ಅಂಶಗಳೇನು ವಿವರ ಇಲ್ಲಿದೆ.

‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳೋದು ಪಕ್ಕಾ ಆಗಿದೆ. ಟೀಸರ್ ನಲ್ಲಿ ಯಶ್ ಯಂಗ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ರಾಯನ (ಯಶ್) ಮಗ ಇರಬಹುದೇ ಎಂಬ ಪ್ರಶ್ನೆ ಮೂಡಿದೆ. ಯಶ್ ಅವರು ಸಖತ್ ವೈಲೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಟೀಸರ್ ನಲ್ಲಿ ಸಾಕಷ್ಟು ರಕ್ತ ಕೂಡ ಹರಿದಿದೆ.

‘ಈ ಸಲ ಯುದ್ಧನೇ ಬೇರೆ’ ಎಂಬ ಡೈಲಾಗ್ ಗಮನ ಸೆಳೆದಿದೆ. ‘ಟಾಕ್ಸಿಕ್’ ಟೀಸರ್ ನೋಡಿದವರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ‘ಹಠ ಬಿಡೋ ಮಾತೇ ಇಲ್ಲ’ ಎಂದು ಯಶ್ ಸ್ಪಷ್ಟವಾಗಿ ಹೇಳಿದ್ದಾರೆ.

ಈ ಮೊದಲು ರಿಲೀಸ್ ಆದ ‘ಟಾಕ್ಸಿಕ್’ ಸಿನಿಮಾದ ಟೀಸರ್ ಹಲ್ಚಲ್ ಎಬ್ಬಿಸಿತ್ತು. ಕ್ರಿಯೆ ನಡೆಸೋ ದೃಶ್ಯವನ್ನು ಟೀಸರ್ ನಲ್ಲಿ ತೋರಿಸಿದ್ದು ಅನೇಕರ ಕೋಪಕ್ಕೆ ಕಾರಣವಾಯಿತು. ಈ ಸಂಬಂಧ ದೂರು ಕೂಡ ದಾಖಲಾಯಿತು. ಆದರೆ, ಅವ್ಯಾವುದು ಟ್ರೇಲರ್‌ನ ತಡೆಯಲಿಲ್ಲ. ಟೀಸರ್ ಯೂಟ್ಯೂಬ್ ಒಂದರಲ್ಲೇ ಮಿಲಿಯನ್ ವೀಕ್ಷಣೆ ಕಂಡಿತು ಚಿತ್ರದ. ಈಗ ಹೊಸ ಟೀಸರ್ ಮತ್ತಷ್ಟು ಗಮನ ಸೆಳೆದಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಟ್ರೇಲರ್ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಸರ್ ಪ್ರೈಸ್ ಕೊಟ್ಟ ಯಶ್

‘ಟಾಕ್ಸಿಕ್’ ಚಿತ್ರವನ್ನು ಗೀತು ಮೋಹನ್‌ದಾಸ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಕೆವಿಎನ್ ನಿರ್ಮಾಣ ಸಂಸ್ಥೆ ಬಂಡವಾಳ ಹೂಡಿದೆ. ಯಶ್ ಕೂಡ ನಿರ್ಮಾಪಕ. ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಶಿ ಮೊದಲಾದವರು ನಟಿಸಿದ್ದಾರೆ. ಮಾರ್ಚ್ 19ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 9:42 am, ಶುಕ್ರವಾರ, 20 ಫೆಬ್ರವರಿ 26



Source link

Leave a Reply

Your email address will not be published. Required fields are marked *