Headlines

2016ರಿಂದ ಇಲ್ಲಿಯವರೆಗೆ..; ಪತಿಯಿಂದ ದೂರ ಮಾಡಲು ಬಂದ್ರವ್ರ ಬಗ್ಗೆ ಫಸ್ಟ್‌ ಟೈಮ್‌ ಬಾಯಿಬಿಟ್ಟ ಚೈತ್ರಾ ಕುಂದಾಪುರ

2016ರಿಂದ ಇಲ್ಲಿಯವರೆಗೆ..; ಪತಿಯಿಂದ ದೂರ ಮಾಡಲು ಬಂದ್ರವ್ರ ಬಗ್ಗೆ ಫಸ್ಟ್‌ ಟೈಮ್‌ ಬಾಯಿಬಿಟ್ಟ ಚೈತ್ರಾ ಕುಂದಾಪುರ

2016ರಿಂದ ಇಲ್ಲಿಯವರೆಗೆ..; ಪತಿಯಿಂದ ದೂರ ಮಾಡಲು ಬಂದ್ರವ್ರ ಬಗ್ಗೆ ಫಸ್ಟ್‌ ಟೈಮ್‌ ಬಾಯಿಬಿಟ್ಟ ಚೈತ್ರಾ ಕುಂದಾಪುರ

ಚೈತ್ರಾ ಕುಂದಾಪುರ ಅವರು ಪತಿ ಶ್ರೀಕಾಂತ್‌ ಕಶ್ಯಪ್‌ಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ. ಶ್ರೀಕಾಂತ್‌ ಕಶ್ಯಪ್‌ ಅವರ ಪರಿಚಯ ಆದ ದಿನದಿಂದ ಹಿಡಿದು, ಇಲ್ಲಿಯವರೆಗಿನ ಫೋಟೋಗಳನ್ನು ಹಂಚಿಕೊಂಡು ಜೊತೆಯಾಗಿ ಬಂದ ಸ್ನೇಹ, ಪ್ರೀತಿ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಹೀಗೆ ಪ್ರಾರಂಭವಾದ ಸ್ನೇಹ, ಮಾತೇ ಆಡದೆ ಭರವಸೆ ಹುಟ್ಟಿಸಿತು.. ಸಿದ್ಧಾಂತಕ್ಕಾಗಿ ಬಡಿದಾಡುವ ಕೆಚ್ಚು ಕಲಿಸಿತು.ಕೆಲಸ- ಕಲಿಕೆ ಜೊತೆಗೆ ಸಾಗಿತು, ಹೊಸ ಹೆಜ್ಜೆಯನಿಡುವ ಧೈರ್ಯ ತುಂಬಿತು. ಯೋಚನೆ ನಿರ್ಧಾರ ಒಂದೇ ಆಯಿತು ಎಂದು ಚೈತ್ರಾ ಕುಂದಾಪುರ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಹೋರಾಟದ ಹಾದಿಗೆ ನಮ್ಮನ್ನು ಎಳೆದು ತಂದಿತು, ಕರ್ನಾಟಕ ದ ಮೂಲೆ ಮೂಲೆಗೂ ಜೊತೆಯಾಗಿ ಸಾಗುವ ಶಕ್ತಿ ನೀಡಿತು, ತಡೆಯಲು ಬಂದ ಶಕ್ತಿಗಳೆಷ್ಟೋ, ಮುರಿಯಲು ನಡೆದ ಪ್ರಯತ್ನ ಗಳೆಷ್ಟೋ ಲೆಕ್ಕವಿಲ್ಲ. ನಾವು ಸಾಗಿದೆವು ಇನ್ನಷ್ಟು ಗಟ್ಟಿಯಾದ ಭರವಸೆಯ ತಳಹದಿಯ ಮೇಲೆ ಸ್ನೇಹಿತರು, ಹಿತೈಷಿಗಳೆಂಬ ಮುಖವಾಡ ಹೊತ್ತು ಬಂದವರು ದೂರವಾದರು ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ.

ಗುರುದೇವರೆಡೆಗಿನ ನಂಬಿಕೆ, ಭಗವಂತನೆಡೆಗಿನ ಶರಣಾಗತಿ ನಮ್ಮನ್ನು ಕಾಯುತ್ತಲೇ ಬಂದಿತು. ಅಪವಾದ, ಅಪಮಾನಗಳ ಮೆಟ್ಟಿ ನಿಲ್ಲಲು ಶಕ್ತಿಯಾದವನಿಗೆ ನನ್ನೊಳಗಿನ ಶಕ್ತಿ, ನನ್ನ ಕನಸುಗಳ ಒಡೆಯನಿಗೆ, ಕನಸು ಕಾಣುವ ಹೆಣ್ಣುಮಕ್ಕಳಿಗೆಲ್ಲ, ನಾನು ಗಂಡಸು ಎನ್ನುವ ಅಹಮಿಕೆ ಇಲ್ಲದ ನಿನ್ನಂತಹ ಜೊತೆಗಾರ ಸಿಗಲಿ. ದೇವರಂತಹ ಗಂಡನ ಕೊಡು ಎಂದು ಯಾವತ್ತೂ ಕೇಳಿಲ್ಲ, ದೇವರೇ ನನ್ನ ಜೊತೆಗಿರುವ ಖಾತರಿ ನನಗಿದೆಯಲ್ಲ ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ.

ಹುಟ್ಟುಹಬ್ಬದ ಶುಭಾಶಯಗಳು ಮಗಾ… Thank you.. ನನ್ನ ಬದುಕನ್ನ ಆವರಿಸಿಕೊಂಡಿದ್ದಕ್ಕೆ… Thank you ನನ್ನ ಬದುಕು ನೀನೇ ಆಗಿದ್ದಕ್ಕೆ, ಶ್ರೀ ಕಶ್ಯಪ್‌, ಭಗವಂತ ನಿನ್ನೆಲ್ಲ ಆಯುಷ್ಯ, ಸಂಭ್ರಮ, ಯಶಸ್ಸನ್ನು ನನ್ನೊಂದಿಗೆ ಕೊಟ್ಟು ಕಾಪಾಡಲಿ ಎಂದು ಹೇಳಿದ್ದಾರೆ.

Source link

Leave a Reply

Your email address will not be published. Required fields are marked *