ಬೆಂಗಳೂರು, ಫೆಬ್ರವರಿ 20: ಸಿಎಂ ಕುರ್ಚಿ ಕದನ, ಸಚಿವ ಸಂಪುಟ ವಿಸ್ತರಣೆ ವಿಚಾರ ಸೇರಿದಂತೆ ಹಲವು ಕಾರಣಗಳಿಂದ ಕಾಂಗ್ರೆಸ್ನಾಯಕರು ಅಸಮಾಧಾನಗೊಂಡಿರುವ ನಡುವೆಯೇ ಹೊಸ ಪದ್ಧತಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ನಾಂದಿ ಹಾಡಿರುವ ವಿಚಾರವೀಗ ಪಕ್ಷದೊಳಗೆ ಹೊಸ ಚರ್ಚೆಗೆ ನಾಂದಿ ಹಾಡಿದೆ. ಕಾಂಗ್ರೆಸ್ನ ಜಿಲ್ಲಾ ಘಟಕಗಳಿಗೆ ಕಾರ್ಯಾಧ್ಯಕ್ಷರನ್ನು ನೇಮಿಸಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಆದೇಶ ಹೊರಡಿಸಿದ್ದಕ್ಕೆ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಡಿಸಿಸಿ ಅಧ್ಯಕ್ಷರಿಗೆ ಸಮಾನಾಂತರವಾಗಿ ಹೊಸ ಹುದ್ದೆ ಸೃಷ್ಟಿಸಿ ಗೊಂದಲ ಸೃಷ್ಟಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ತಮಗೆ ಬೇಕೋ ಅಲ್ಲಷ್ಟೇ ಕಾರ್ಯಾಧ್ಯಕ್ಷರನ್ನು ನೇಮಿಸಲಾಗಿದೆ ಎಂದು ಡಿಸಿಸಿ ಘಟಕಗಳು ಕಿಡಿ ಕಾರಿವೆ.
ಜಿಲ್ಲಾ ಸಮಿತಿ ಕಾರ್ಯಾಧ್ಯಕ್ಷರಿಗೆ ನೀಡಿರುವ ಟಾಸ್ಕ್ ಬಗ್ಗೆಯೂ ದೊಡ್ಡ ಗುಮಾನಿ ಇದ್ದು, ಕಾಂಗ್ರೆಸ್ ಸಮಿತಿಗಳಲ್ಲೇ ಡಿ.ಕೆ. ಶಿವಕುಮಾರ್ ಪರ್ಯಾಯ ನಾಯಕರನ್ನು ಹುಟ್ಟು ಹಾಕುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಹೊಸ ಹುದ್ದೆಗಳ ಸೃಷ್ಟಿಯ ಮೂಲಕ 2028 ರ ಚುನಾವಣೆಗೆ ಈಗಿನಿಂದಲೇ ಎಂಬ ಮೆಗಾಪ್ಲ್ಯಾನ್ ಚರ್ಚೆಯನ್ನು ಪ್ರಾರಂಭಿಸುತ್ತದೆ, ಈ ಮೂಲಕ ಟಾಸ್ಕ್ ಮತ್ತು ಟಾರ್ಗೆಟ್ ಫಿಕ್ಸ್ ಮಾಡಲಾಗಿದೆ. ಜಿಲ್ಲಾ ಮಟ್ಟದ ಕಾರ್ಯಾಧ್ಯಕ್ಷರ ನೇಮಕದ ಹಿಂದೆ ಹತ್ತಾರು ಪ್ಲ್ಯಾನ್ ಇದ್ದು, ಎಲ್ಲೆಲ್ಲಿ ಡಿಸಿಸಿ ಅಧ್ಯಕ್ಷರ ಕಾರ್ಯದ ಬಗ್ಗೆ ಸಮಾಧಾನವಿಲ್ಲವೋ ಅಲ್ಲಿ ಕಾರ್ಯಾಧ್ಯಕ್ಷರನ್ನು ನೇಮಿಸಲಾಗಿದೆ.
ಇದನ್ನೂ ಓದಿ: ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಭಾರಿ ಅಸಮಾಧಾನ; ಬೇಸರಕ್ಕೆ ಕಾರಣ ಇಲ್ಲಿದೆ
ಡಿಕೆಶಿ ಲೆಕ್ಕಾಚಾರವೇನು?
ಶಾಸಕರ ಕಾರ್ಯವಿಧಾನ, ಜನರ ಸಂಪರ್ಕ ಮತ್ತು 2028 ಹಾಲಿ ಶಾಸಕರ ಸೋಲು-ಗೆಲುವಿನ ಬಗ್ಗೆಯೂ ಸರ್ವೆಗೆ ಡಿಕೆಶಿ ಪರೋಕ್ಷ ಸೂಚನೆ ನೀಡಲಾಗಿದೆ. ಆ ಮೂಲಕ ಹಾಲಿ ಶಾಸಕರ ಕ್ಷೇತ್ರಗಳ ಬಗ್ಗೆ ಈಗಿನಿಂದಲೇ ವರದಿ ಪಡೆಯುವ ಜೊತೆಗೆ, ಪರಾಜಿತ ಅಭ್ಯರ್ಥಿಗಳಿಂದ ಪಕ್ಷ ಸಂಘಟನೆಗೂ ಪ್ಲ್ಯಾನ್ ನಡೆದಿದೆ. ಜೊತೆಗೆ ಕಳೆದ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳ ಸದ್ಯದ ಸ್ಥಿತಿಗತಿಯ ಬಗ್ಗೆಯೂ ವಿವರ ಸಂಗ್ರಹಣೆಗೆ ಶಿವಕುಮಾರ್ ಸೂಚಿಸಿದ್ದು, ಕ್ಷೇತ್ರ ಬದಲಾವಣೆ ಮತ್ತು ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಈಗಿನಿಂದಲೇ ಲಭ್ಯತೆ ಇರುತ್ತದೆ. ಹೀಗಾಗಿ ಡಿಸಿಸಿ ಅಧ್ಯಕ್ಷರಿಗೆ ಪೈಪೋಟಿ ನೀಡುವಂತೆ ಕಾರ್ಯಾಧ್ಯಕ್ಷರ ಕೆಲಸ ಸಾಗುವ ಸಾಧ್ಯತೆ ಇದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 11:17 am, ಶುಕ್ರ, 20 ಫೆಬ್ರವರಿ 26