Headlines

ಪ್ಯಾಕ್ಸ್ ಸಿಲಿಕಾಗೆ ಭಾರತ ಸೇರ್ಪಡೆ; ಅಮೆರಿಕ ಸಂತಸ; ಏನಿದು ಹೊಸ ಒಪ್ಪಂದ?

ಪ್ಯಾಕ್ಸ್ ಸಿಲಿಕಾಗೆ ಭಾರತ ಸೇರ್ಪಡೆ; ಅಮೆರಿಕ ಸಂತಸ; ಏನಿದು ಹೊಸ ಒಪ್ಪಂದ?


ನವದೆಹಲಿ, ಫೆಬ್ರುವರಿ 20: ಅಮೆರಿಕ ನೇತೃತ್ವದ ಪ್ಯಾಕ್ಸ್ ಸಿಲಿಕಾ (ಪ್ಯಾಕ್ಸ್ ಸಿಲಿಕಾ) ಮೈತ್ರಿಕೂಟಕ್ಕೆ ಭಾರತ ಸೇರ್ಪಡೆಯಾಗುತ್ತಿದೆ. ಈ ಸಂಬಂಧ ಘೋಷಣೆಗೆ ಭಾರತ ಸಹಿ ಹಾಕಿದೆ. ದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಇಂಡಿಯಾ ಎಐ ಇಂಪ್ಯಾಕ್ಟ್ ಸಮಿಟ್ (ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ) ವೇಳೆ ಈ ಡಿಕ್ಲರೇಶನ್‌ಗೆ ಭಾರತ ಸಹಿ ಹಾಕಿದೆ. ಭಾರತ ಮತ್ತು ಅಮೆರಿಕ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಏರ್ಪಡುತ್ತಿದೆ, ಹಲವು ಇತರ ಉಪಕ್ರಮಗಳು ಜಾರಿಗೆ ಬರುತ್ತಿರುವುದರ ಮಧ್ಯೆ ಪ್ಯಾಕ್ಸ್ ಸಿಲಿಕಾಗೆ ಭಾರತ ಸೇರ್ಪಡೆಯಾಗುತ್ತಿರುವ ಬೆಳವಣಿಗೆ ನಡೆಯುತ್ತಿದೆ. ಈ ಬೆಳವಣಿಗೆಯನ್ನು ಅಮೆರಿಕ ಸ್ವಾಗತಿಸಿದೆ. ಪ್ಯಾಕ್ಸ್ ಸಿಲಿಕಾಗೆ ಭಾರತ ಪ್ರವೇಶ ಮಾಡಿರುವುದು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ಅಂತರರಾಷ್ಟ್ರೀಯ ಸಹಕಾರ ಮತ್ತು ಸಮನ್ವಯತೆ ಸಾಧಿಸಲು ಸುಲಭವಾಗಿದೆ ಎಂದು ಅಮೆರಿಕದ ರಾಯಭಾರಿ ಸೆರ್ಗಿಯೋ ಗೋರ್ ಅಭಿಪ್ರಾಯಪಟ್ಟಿದ್ದಾರೆ.

ಏನಿದು ಪ್ಯಾಕ್ಸ್ ಸಿಲಿಕಾ?

ಪ್ಯಾಕ್ಸ್ ಎಂದರೆ ಲ್ಯಾಟಿನ್ ಭಾಷೆಯಲ್ಲಿ ಶಾಂತಿ ಎಂದರ್ಥ. ಸಿಲಿಕಾ ಎಂಬುದು ಸಿಲಿಕಾನ್ ಚಿಪ್. ಪ್ಯಾಕ್ಸ್ ಸಿಲಿಕಾ ಎಂಬುದು ಅಮೆರಿಕ ಸರ್ಕಾರದಿಂದಲೇ ಆರಂಭಗೊಂಡಿದೆ ಒಂದು ಅಂತಾರಾಷ್ಟ್ರೀಯ ಮೈತ್ರಿಗುಂಪು. ಕೃತಕ ಬುದ್ಧಿಮತ್ತೆ ಮತ್ತು ಪೂರೈಕೆ ಸರಪಳಿ ಭದ್ರತೆಯನ್ನು ಪ್ರಬಲಗೊಳಿಸುವುದು ಇದರ ಗುರಿ. ಮುಂದಿನ ತಲೆಮಾರಿನ ಕೈಗಾರಿಕೆಗಳಿಗೆ ಬೇಕಾದ ಪ್ರಮುಖ ಸಂಪನ್ಮೂಲಗಳ ಲಭ್ಯತೆಯನ್ನು ಖಚಿತಪಡಿಸಲು ಅಂತಾರಾಷ್ಟ್ರೀಯ ಮಟ್ಟದ ವ್ಯವಸ್ಥೆ ಜೊತೆಗೆ, ಪರಸ್ಪರ ಸಹಕಾರ ಹೆಚ್ಚಿಸುವುದು ಇದರ ಗುರಿ.

ಇದನ್ನೂ ಓದಿ: ಬೆಂಗಳೂರಿನ ‘ಪರಮ್’ ಗೆ ಪ್ರಧಾನಿ ಮೋದಿ ಫಿದಾ! ಇದು ಭಾರತದ ಅತ್ಯಂತ ಶಕ್ತಿಶಾಲಿ ರೋಬೋಟ್ ನಾಯಿ

ಪ್ಯಾಕ್ಸ್ ಸಿಲಿಕಾದಲ್ಲಿ ಯಾವ್ಯಾವ ದೇಶಗಳಿವೆ…?

ಅಮೆರಿಕ ನೇತೃತ್ವದ ಪ್ಯಾಕ್ಸ್ ಸಿಲಿಕಾ ಗುಂಪಿನಲ್ಲಿ ಆಸ್ಟ್ರೇಲಿಯಾ, ಗ್ರೀಸ್, ಇಸ್ರೇಲ್, ಜಪಾನ್, ಕತಾರ್, ಸೌತ್ ಕೊರಿಯಾ, ಸಿಂಗಾಪುರ್, ಯುಇ ಮತ್ತು ಬ್ರಿಟನ್ (ಯುಕೆ) ದೇಶಗಳಿವೆ. ಈ ಗುಂಪಿನಲ್ಲಿ ಭಾರತವೂ ಒಂದು ಭಾಗಕ್ಕೆ.

ಪ್ಯಾಕ್ಸ್ ಸಿಲಿಕಾದಿಂದ ಭಾರತಕ್ಕೆ ಏನು ಉಪಯೋಗ?

ಐಐಡಿ ತಂತ್ರಜ್ಞಾನ ಅಭಿವೃದ್ಧಿ ಸಾಧಿಸಲು ಅಗತ್ಯವಾದ ಕಚ್ಚಾ ವಸ್ತುಗಳ ಪೂರೈಕೆಯನ್ನು ಭಾರತ ಖಚಿತಪಡಿಸಿಕೊಳ್ಳಲು ಪ್ಯಾಕ್ಸ್ ಸಿಲಿಕಾ ಒಪ್ಪಂದ ಸಹಕಾರಿಯಾಗಬಹುದು. ಭಾರತದ ಅಭಿವೃದ್ಧಿ ಮತ್ತು ಸೆಮಿಕಂಡಕ್ಟರ್ ಉದ್ಯಮದ ಬೆಳವಣಿಗೆಗೆ ಇದು ಅನುಕೂಲವಾಗಿದೆ. ಚೀನಾ ಪ್ರಾಬಲ್ಯ ಹೊಂದಿರುವ ಕ್ರಿಟಿಕಲ್ ಮಿನರಲ್ಗಳಿಗೆ ಪರ್ಯಾಯ ಪೂರೈಕೆ ಜಾಲವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದೆ, ಪ್ಯಾಕ್ಸ್ ಸಿಲಿಕಾ ಈ ಒಂದು ಪ್ರಮುಖ ಉಪಕ್ರಮವಾಗಿದೆ. ಇದರ ಲಾಭ ಭಾರತಕ್ಕೂ ಸಿಗುತ್ತದೆ.

ಇದನ್ನೂ ಓದಿ: Sarvam AI: ಗೂಗಲ್ ಜೆಮಿನಿ, ಚಾಟ್‌ಜಿಪಿಟಿ ಹಿಂದಿಕ್ಕಿದ ಬೆಂಗಳೂರಿನ ‘ಸರ್ವಂ AI’ ನ ಸಹ ಸಂಸ್ಥಾಪಕ ಪ್ರತ್ಯೂಷ್ ಕುಮಾರ್ ಯಾರು?

ಭಾರತದಲ್ಲಿ 10 ಸೆಮಿಕಂಡಕ್ಟರ್ ಘಟಕಗಳು ಸ್ಥಾಪನೆಯಾಗಿವೆ ಮತ್ತು ಸ್ಥಾಪನೆಯಾಗುವ ಹಂತದಲ್ಲಿವೆ. ಮೊದಲ ಸೆಮಿಕಂಡಕ್ಟರ್ ಘಟಕದಲ್ಲಿ ಸದ್ಯದಲ್ಲೇ ಕಮರ್ಷಿಯಲ್ ಉತ್ಪಾದನೆ ಆರಂಭವಾಗಲಿದೆ. ಮುಂದಿನ ಕೆಲಗಳಲ್ಲಿ ಅನೇಕ ಘಟಕಗಳಲ್ಲಿ ಚಿಪ್ಸ್ ಕಮರ್ಷಿಯಲ್ ಆಗಿ ತಯಾರಿಸುವ ಕಾರ್ಯ. ಬಹಳ ಸಂಕೀರ್ಣವಾದ 2-ನ್ಯಾನೋಮೀಟರ್ ಚಿಪ್ಗಳನ್ನು ಭಾರತದಲ್ಲಿ ವಿನ್ಯಾಸ ಮಾಡಲಾಗುತ್ತಿದೆ. ಪ್ಯಾಕ್ಸ್ ಸಿಲಿಕಾ ಮೈತ್ರಿಕೂಟಕ್ಕೆ ಸೇರ್ಪಡೆಯಾಗಲು ಇಂತಹ ಹೆಜ್ಜೆಗಳು ಸಲೀಸಾಗಿ ನಡೆದು ಹೋಗಬಹುದು.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *