Headlines

ಮಾಜಿ ಬಾಯ್‌ಫ್ರೆಂಡ್‌ನಿಂದ ಶ್ವಾನ ಕಸ್ಟಡಿಗೆ ಪಡೆಯಲು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ

ಮಾಜಿ ಬಾಯ್‌ಫ್ರೆಂಡ್‌ನಿಂದ ಶ್ವಾನ ಕಸ್ಟಡಿಗೆ ಪಡೆಯಲು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ

ಮಾಜಿ ಬಾಯ್‌ಫ್ರೆಂಡ್‌ನಿಂದ ಶ್ವಾನ ಕಸ್ಟಡಿಗೆ ಪಡೆಯಲು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ

ತಮ್ಮ ಸಾಕು ನಾಯಿ ಹೆನ್ರಿಯನ್ನು ವಶಕ್ಕೆ ಪಡೆಯಲು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಗೆಳೆಯ ಜೈ ಅನಂತ್ ದೇಹಾದ್ರಾಯಿ ಅವರೊಂದಿಗೆ ಶ್ವಾನವಿದ್ದು, ಅದನ್ನು ಕಸ್ಟಡಿಗೆ ಕೋರಿ ಅವರು ಅರ್ಜಿ ಸಲ್ಲಿಸಿದ್ದಾರೆ.

ನವದೆಹಲಿ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ತಮ್ಮ ಸಾಕುಪ್ರಾಣಿ ರಾಟ್‌ವೀಲರ್ ಹೆನ್ರಿಯನ್ನು ತಮ್ಮ ವಶಕ್ಕೆ ನೀಡುವಂತೆ ಕೋರಿ ಗುರುವಾರ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರತಿ ತಿಂಗಳು ನಾಯಿಯನ್ನು 10 ದಿನಗಳ ಕಸ್ಟಡಿಗೆ ನೀಡುವಂತೆ ಅವರು ಮಾಡಿದ ಕೋರಿಕೆಯನ್ನು ಸಾಕೇತ್ ನ್ಯಾಯಾಲಯವು ಕಳೆದ ವರ್ಷದ ನವೆಂಬರ್ 10 ರಂದು ನಿರಾಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಈಗ ಸಂಸದೆ ಮಹುವಾ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ನ್ಯಾಯಮೂರ್ತಿ ಮನೋಜ್ ಕುಮಾರ್ ಓಹ್ರಿ ಮೊಯಿತ್ರಾ ಅವರ ಮಾಜಿ ಪತಿ ಮತ್ತು ವಕೀಲ ಜೈ ಅನಂತ್ ದೇಹಾದ್ರಾಯಿ ಅವರಿಗೆ ನೋಟೀಸ್ ಜಾರಿ ಮಾಡಿದ್ದು, ಅವರು ಈ ಮನವಿಗೆ ನೀಡುವ ಪ್ರತಿಕ್ರಿಯೆಯನ್ನು ಪರಿಗಣಿಸಿ ಈ ಪ್ರಕರಣವನ್ನು ಏಪ್ರಿಲ್ 29 ರಂದು ವಿಚಾರಣೆಗೆ ನಿಗದಿ ಮಾಡಲಾಗಿದೆ.

ಕೆಳ ನ್ಯಾಯಾಲಯದ ಆದೇಶವು ಕಾನೂನು ಮತ್ತು ವಾಸ್ತವದಲ್ಲಿ ಕೆಟ್ಟದು ಎಂದು ಮೊಯಿತ್ರಾ ವಾದಿಸಿದ್ದಾರೆ. ತನ್ನ ಅರ್ಜಿಯಲ್ಲಿ, ತನ್ನ ನಾಯಿ ಹೆನ್ರಿ ಬಹುತೇಕ ನನ್ನ ಜೊತೆಗೆ ವಾಸಿಸುತ್ತಿತ್ತು. ನಾನು ನನ್ನ ಕ್ಷೇತ್ರದ ಅಧಿಕೃತ ಕೆಲಸಗಳಿಗೆಂದು ದೆಹಲಿಯಿಂದ ಹೊರಗೆ ಹೋದಾಗ ಮಾತ್ರ ಅದು ಜೈ ಅನಂತ್ ದೇಹಾದ್ರಾಯಿ ಅವರ ಜೊತೆ ಇರುತ್ತಿತ್ತು ಎಂದು ಮೊಯಿತ್ರಾ ಹೇಳಿದ್ದಾರೆ.

ವಕೀಲ ಜೈ ಅನಂತ್ ದೇಹಾದ್ರಾಯಿ ಅವರು ಹೈಕೋರ್ಟ್ ಮುಂದೆ ಖುದ್ದಾಗಿ ಹಾಜರಾಗಿ, ಅರ್ಜಿಯನ್ನು ಆರಂಭದಲ್ಲಿಯೇ ಸಂಪೂರ್ಣವಾಗಿ ವಜಾಗೊಳಿಸಬೇಕೆಂದು ವಾದಿಸಿದ್ದರು ಎಂದು ವರದಿಯಾಗಿದೆ. ರೊಟ್‌ವೀಲರ್ ನಾಯಿಯ ಕಸ್ಟಡಿ ವಿವಾದವು ಸಾಕೇತ್ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಾಕಿ ಇದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ ದೇಹಾದ್ರಾಯಿ ಸಲ್ಲಿಸಿದ್ದ ಮೇಲ್ಮನವಿಯ ಮೇರೆಗೆ ದೆಹಲಿ ಹೈಕೋರ್ಟ್ ಮೊಯಿತ್ರಾ ಅವರಿಗೆ ನೋಟಿಸ್ ಜಾರಿ ಮಾಡಿತ್ತು, ಈ ವಿಷಯವನ್ನು ಪ್ರಚಾರ ಮಾಡದಂತೆ ನಿರ್ದೇಶಿಸಿತ್ತು.

ನಂತರ ನ್ಯಾಯಮೂರ್ತಿ ಮನೋಜ್ ಜೈನ್, ಮೊಯಿತ್ರಾ ಅವರ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಳಿಕೊಂಡರೆ, ಹಿರಿಯ ವಕೀಲ ಸಂಜಯ್ ಘೋಷ್ ದೇಹಾದ್ರಾಯಿ ಪರವಾಗಿ ವಾದ ಮಂಡಿಸಿದರು. ಅರ್ಜಿಯ ಪ್ರಕಾರ, ಮೊಯಿತ್ರಾ ಈ ಹಿಂದೆ 2021 ರಲ್ಲಿ ಖರೀದಿಸಿದ ಸಾಕು ನಾಯಿ ಹೆನ್ರಿ ವಿರುದ್ಧ ದೇಹಾದ್ರಾಯಿ ಅವರು ಕಸ್ಟಡಿ ಮೊಕದ್ದಮೆ ಹೂಡಿದ್ದರು. ಈ ಪ್ರಕರಣದ ವಿಚಾರಣೆ ಏಪ್ರಿಲ್ 29 ರಂದು ನಡೆಯಲಿದೆ.

ಮಹುವಾ ಮೊಯಿತ್ರಾ ಮತ್ತು ವಕೀಲ ಜೈ ಅನಂತ್ ದೇಹಾದ್ರಾಯಿ ನಡುವಿನ ಕಾನೂನು ವಿವಾದವು ವೈಯಕ್ತಿಕ ಸಂಘರ್ಷವಾಗಿಹುಟ್ಟಿಕೊಂಡಿದ್ದು, ಅದು ನಂತರ ಹಲವಾರು ಸಾರ್ವಜನಿಕ ಮತ್ತು ಕಾನೂನು ಘರ್ಷಣೆಗಳಾಗಿ ಬೆಳೆಯಿತು. ಮೊಯಿತ್ರಾ ಮತ್ತು ದೇಹಾದ್ರಾಯಿ ಸಂಬಂಧದಲ್ಲಿದ್ದರು ಮತ್ತು ಜಂಟಿಯಾಗಿ ಹೆನ್ರಿ ಎಂಬ ರಾಟ್ ವೀಲರ್ ನಾಯಿಯನ್ನು ಹೊಂದಿದ್ದರು ಎಂದು ವರದಿಯಾಗಿದೆ.

ಆದಾಗ್ಯೂ ಅವರ ಸಂಬಂಧವು ಕಹಿಯಾದ ನಂತರ ಮತ್ತು ‘ಪ್ರಶ್ನೆಗಾಗಿ ಲಂಚ’ ವಿವಾದದಲ್ಲಿ ಮೊಯಿತ್ರಾ ವಿರುದ್ಧ ದೇಹಾದ್ರಾಯಿ ಸಾರ್ವಜನಿಕವಾಗಿ ಆರೋಪ ಮಾಡಿದ್ದರು. ಈ ಆರೋಪದ ನಡುವೆ ಹೆನ್ರಿಯ ಪಾಲನೆ ವಿವಾದದ ಕೇಂದ್ರಬಿಂದುವಾಯಿತು. ಇಬ್ಬರೂ ನಾಯಿಯ ಮಾಲೀಕತ್ವವನ್ನು ಪ್ರತಿಪಾದಿಸಿದರು ಮತ್ತು ಇನ್ನೊಬ್ಬರು ಅದನ್ನು ಕಾನೂನುಬಾಹಿರವಾಗಿ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ದೆಹಾದ್ರಾಯಿ ಅವರು 2021 ರಲ್ಲಿ ಹೆನ್ರಿಯನ್ನು 75,000 ರೂ.ಗೆ ಖರೀದಿಸಿದ್ದಾಗಿ ಮತ್ತು ನಾಯಿ 40 ದಿನಗಳಾದಾಗಿನಿಂದ ಅದನ್ನು ನೋಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಮತ್ತೊಂದೆಡೆ, ದೆಹಾದ್ರಾಯಿ ತಮ್ಮ ನಿವಾಸಕ್ಕೆ ಅತಿಕ್ರಮವಾಗಿ ಪ್ರವೇಶಿಸಿ ಹೆನ್ರಿಯನ್ನು ತಮ್ಮ ಒಪ್ಪಿಗೆಯಿಲ್ಲದೆ ಕರೆದೊಯ್ದಿದ್ದಾರೆ ಎಂದು ಮೊಯಿತ್ರಾ ಆರೋಪಿಸಿದ್ದಾರೆ.

ಕಸ್ಮಡಿ ವಿವಾದ ಸಾಕೇತ್ ನ್ಯಾಯಾಲಯದ ಮೆಟ್ಟಿಲೇರುತ್ತಿದ್ದಂತೆ ವಿಚಾರಣಾ ನ್ಯಾಯಾಲಯವು ಎರಡೂ ಪಾರ್ಟಿಗಳಿಗೆ ಪ್ರಸ್ತುತ ಪ್ರಕ್ರಿಯೆಗಳನ್ನು ಯಾವುದೇ ರೀತಿಯಲ್ಲಿ ಪ್ರಚಾರ ಮಾಡದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶಿಸಿದೆ. ದೇಹಾದ್ರಾಯಿ ಈ ನಿರ್ದೇಶನವನ್ನು ಪ್ರಶ್ನಿಸಿದರು, ಇದು ಸಾರ್ವಜನಿಕವಾಗಿ ಪ್ರಕರಣದ ಅಸ್ತಿತ್ವವನ್ನು ಬಹಿರಂಗಪಡಿಸುವುದನ್ನು ತಡೆಯುತ್ತದೆ ಎಂದು ವಾದಿಸಿದ್ದರು.

Source link

Leave a Reply

Your email address will not be published. Required fields are marked *