ಕೇವಲ 3 ತಿಂಗಳ ಸಾಲದ ಕಂತು ಬಾಕಿ, ₹1.2ಕೋಟಿ ಫ್ಲಾಟ್ ಕಳೆದುಕೊಂಡ ಬೆಂಗಳೂರಿಗನ ಕಣ್ಣೀರು

ಕೇವಲ 3 ತಿಂಗಳ ಸಾಲದ ಕಂತು ಬಾಕಿ, ₹1.2ಕೋಟಿ ಫ್ಲಾಟ್ ಕಳೆದುಕೊಂಡ ಬೆಂಗಳೂರಿಗನ ಕಣ್ಣೀರು

ಕೇವಲ 3 ತಿಂಗಳ ಸಾಲದ ಕಂತು ಬಾಕಿ, ₹1.2ಕೋಟಿ ಫ್ಲಾಟ್ ಕಳೆದುಕೊಂಡ ಬೆಂಗಳೂರಿಗನ ಕಣ್ಣೀರು

ಕೇವಲ 3 ತಿಂಗಳ ಸಾಲದ ಕಂತು ಬಾಕಿ, ಇಷ್ಟೇ ನೋಡಿ ಬರೋಬ್ಬರಿ 8 ವರ್ಷಗಳಿಂದ ನಿಯತ್ತಾಗಿ ಗೃಹ ಸಾಲ ಕಟ್ಟಿದ್ದರೂ ಬ್ಯಾಂಕ್ ಕೇಳಲಿಲ್ಲ. ಮನೆಯಲ್ಲಿ ಬ್ಯಾಂಕ್ 90 ಲಕ್ಷಕ್ಕೆ ಹರಾಜು ಹಾಕಿದ ಕಣ್ಣೀರಿನ ಘಟನೆ ಬೆಂಗಳೂರಲ್ಲಿ ನಡೆದಿದೆ.

ಬೆಂಗಳೂರಲ್ಲಿ ಮನೆ ಖರೀದಿಸಬೇಕು ಅನ್ನೋದು ಹಲವರ ಬಯಕೆ. ಇನ್ನು ಮನೆ ಖರೀದಿಸಿದವರು ಇಎಂಐ, ಮನೆ ಸಾಲದ ಬಡ್ಡಿ ಅತೀಯಾಗುತ್ತಿದೆ ಅನ್ನೋ ತಲೆನೋವು ಇದ್ದೇ ಇದೆ. ಇದೀಗ ಬೆಂಗಳೂರಿನಲ್ಲಿ ನಡೆದ ಘಟನೆಯೊಂದು ಬೆಂಗಳೂರಿನಲ್ಲಿ ಫ್ಲಾಟ್ ಖರೀದಿಸುವವರನ್ನು ಎಚ್ಚರಿಸಿದೆ. ಬೆಂಗಳೂರಿನ ನಿವಾಸಿ ದಿಢೀರ್ ಕೆಲಸ ಕಳೆದುಕೊಂಡಿದ್ದಾರೆ. ಹೀಗಾಗಿ ಮೂರು ತಿಂಗಳ ಮನೆಯ ಸಾಲ ಪಾವತಿಸಲು ಸಾಧ್ಯವಾಗಿಲ್ಲ. ಇಷ್ಟೇ ನೋಡಿ ಬ್ಯಾಂಕ್ 1.2 ಕೋಟಿ ರೂಪಾಯಿ ಮೌಲ್ಯದ ಫ್ಲಾಟ್‌ನ್ನು 95 ಲಕ್ಷರೂಪಾಯಿಗೆ ಹರಾಜು ಹಾಕಿದ ಘಟನೆ ನಡೆದಿದೆ.

ನೆರೆಮನೆಯ ಚಾರ್ಟೆಡ್ ಅಕೌಂಟೆಂಟ್ ಮೀನಾ ಗೋಯಲ್ ನೆರೆಮೆಯವರ ಕಣ್ಣೀರ ಕತೆಯನ್ನು ಬಹಿರಂಗಪಡಿಸಿದ್ದಾರೆ. 8 ವರ್ಷಗಳ ಹಿಂದೆ ಈತ ಫ್ಲಾಟ್ ಖರೀದಿಸಿದ್ದಾರೆ. ಡೌನ್‌ಪೇಮೆಂಟ್ ಮಾಡಿ ಫ್ಲಾಟ್ ಖರೀದಿಸಿದ ಈ ಬೆಂಗಳೂರು ನಿವಾಸಿ ಕಳೆದ 8 ವರ್ಷದಿಂದ ಒಂದೇ ಒಂದು ಇಎಂಐ ಬಾಕಿ ಉಳಿಸಿದೆ ಸಮಯಕ್ಕೆ ಸರಿಯಾಗಿ ಪಾವತಿಸಿದ್ದಾರೆ. ಆದರೆ ಮೂರು ಕಂತು ಸಾಲ ಬಾಕಿಯಾಗಿದ್ದೇ ತಡ, ಬ್ಯಾಂಕ್ ಎದ್ನೋ ಬಿದ್ನೋ ಅಂತಾ ಬಂದು ಮನೆಯನ್ನೇ ಮಾರಾಟ ಮಾಡಿ ಕುಟಂಬವನ್ನೇ ಬೀದಿಗೆ ತಂದಿದೆ.

2025ರ ಅಕ್ಟೋಬರ್ ತಿಂಗಳಲ್ಲಿ ಕೆಲಸ ಕಳೆದುಕೊಂಡಿದ್ದರು. ಆರಂಭಿಕ ತಿಂಗಳು ಮ್ಯಾನೇಜ್ ಮಾಡಿದ್ದಾರೆ. ಬಳಿಕ ಸಾಧ್ಯವಾಗಿಲ್ಲ. ಹೀಗಾಗಿ ಜನವರಿ ವೇಳೆಗೆ 3 ತಿಂಗಳ ಮನೆ ಸಾಲದ ಕಂತು ಬಾಕಿ ಉಳಿದುಕೊಂಡಿದೆ. 8 ವರ್ಷ ಒಂದು ಸಾಲ ಬಾಕಿ ಉಳಿಸಿಕೊಳ್ಳದ ವ್ಯಕ್ತಿ, ಆರ್ಥಿಕ ಸಮಸ್ಯೆ ಎದುರಾಗಿದ್ದ ಕಾರಣ 3 ತಿಂಗಳ ಮನೆ ಸಾಲ ಬಾಕಿ ಉಳಿದಿತ್ತು.

ಬ್ಯಾಂಕ್ SARFAESI Act ಅಡಿಯಲ್ಲಿ ಜನವರಿಯಲ್ಲಿ ನೋಟಿಸ್ ನೀಡಿದೆ. SARFAESI Act ಅಡಿಯಲ್ಲಿ ಬ್ಯಾಂಕ್‌ಗಳು ಕೋರ್ಟ್ ಮಧ್ಯಸ್ಥಿತೆ ಇಲ್ಲದೆ ಸಾಲದ ಮರುಪಾವತಿಗಾಗಿ ಆಸ್ತಿ ಜಪ್ತಿ ಮಾಡುವ ಅಧಿಕಾರ ಹೊಂದಿದೆ. ಇದರಂತೆ ವ್ಯಕ್ತಿಗೆ ನೋಟಿಸ್ ನೀಡಿದೆ ಕೆಲವೇ ದಿನದಲ್ಲಿ 1.2 ಕೋಟಿ ರೂಪಾಯಿ ಮೌಲ್ಯದ ಫ್ಲಾಟ್‌ನ್ನು ಹರಾಜು ಮಾಡಿದೆ.

ಡೌನ್‌ಪೇಮೆಂಟ್ ಮಾಡಿ ಕಳೆದ 8 ವರ್ಷದಿಂದ ಲೋನ್ ಪಾವತಿ ಮಾಡುತ್ತಿದ್ದಾರೆ. ಆದರೆ ಬ್ಯಾಂಕ್ 1.2 ಕೋಟಿ ರೂಪಾಯಿ ಮೌಲ್ಯದ ಫ್ಲಾಟ್‌ನ್ನು 95 ಲಕ್ಷ ರೂಪಾಯಿಗೆ ಹರಾಜು ಹಾಕಿತು. ಈ 90 ಲಕ್ಷ ರೂಪಾಯಿಯಲ್ಲಿ 80 ಲಕ್ಷ ರೂಪಾಯಿ ಬಾಕಿ ಸಾಲವನ್ನು ಬ್ಯಾಂಕ್ ವಸೂಲಿ ಮಾಡಿದೆ. ಬಾಕಿ ಉಳಿದ 15 ಲಕ್ಷ ರೂಪಾಯಿ ಹಣವನ್ನು ವ್ಯಕ್ತಿಗೆ ನೀಡಿದೆ. ಸರಿಸುಮಾರು 40 ಲಕ್ಷಕ್ಕೂ ಹೆಚ್ಚು ಪಾವತಿ ಮಾಡಿ ವ್ಯಕ್ತಿಗೆ ಕೊನೆಗೆ ಉಳಿದಿದ್ದು ಕೇವಲ 15 ಲಕ್ಷ ರೂಪಾಯಿ ಮಾತ್ರ.

ಸಾಲ ಬಾಕಿ ಉಳಿಸಿಕೊಂಡರೆ ಬ್ಯಾಂಕ್‌ನಿಂದ ದೂರ ಸರಿಯುವ ಬದಲು ಬ್ಯಾಂಕ್ ಜೊತೆ ಮಾತನಾಡಿ ಸಾಲವನ್ನು ಅವಧಿ ವಿಸ್ತರಣೆ, ಅಥವಾ ಇತರ ಮಾರ್ಗಗಳನ್ನು ಚರ್ಚಿಸಿ. ಕೆಲ ಆಯ್ಕೆಗಳನ್ನು ಬ್ಯಾಂಕ್ ನೀಡಲಿದೆ. ತಕ್ಷಣದ ಅಪಾಯದಿಂದ ಪಾರಾಗುವ ಸಾಧ್ಯತೆಗಳಿವೆ. ಇನ್ನು ಪಿಎಫ್ ಖಾತೆಯಿಂದ ತುರ್ತು ನಿಧಿ ಬಳಸಿಕೊಳ್ಳಲು ಅವಕಾಶವಿದೆ. ಬ್ಯಾಂಕ್ ಜಪ್ತಿ ಮಾಡಿ ಮಾರಾಟ ಮಾಡುವವರೆಗೆ ಕಾಯಬೇಡಿ. ನೀವೇ ಮಾರಾಟ ಮಾಡಿದರೆ ಮಾರುಕಟ್ಟೆ ದರ ಲಭ್ಯವಾಗಲಿದೆ. ಬ್ಯಾಂಕ್ ತನ್ನ ಸಾಲ ಮಾರುಪಾವತಿ ಮಾತ್ರ ನೋಡಲಿದೆ ಎಂದು ಮೀನಲ್ ಗೋಯಲ್ ಎಚ್ಚರಿಸಿದ್ದಾರೆ.

ಮೀನಲ್ ಗೋಯಲ್ ನೀಡಿದ ಎಚ್ಚರಿಕೆ

Source link

Leave a Reply

Your email address will not be published. Required fields are marked *