Headlines

ಮದ್ವೆಯಾದ್ರೂ ನಾವಿಬ್ಬರೂ ನಮ್ಮ ಮೊದಲ ಪ್ರೀತಿ ಮರೆತಿಲ್ಲ: ಇದೇನಿದು Tarun Sudhir ಕೊಟ್ಟ ಸ್ಟೇಟ್​ಮೆಂಟ್​?

ಮದ್ವೆಯಾದ್ರೂ ನಾವಿಬ್ಬರೂ ನಮ್ಮ ಮೊದಲ ಪ್ರೀತಿ ಮರೆತಿಲ್ಲ:  ಇದೇನಿದು Tarun Sudhir ಕೊಟ್ಟ ಸ್ಟೇಟ್​ಮೆಂಟ್​?

ಮದ್ವೆಯಾದ್ರೂ ನಾವಿಬ್ಬರೂ ನಮ್ಮ ಮೊದಲ ಪ್ರೀತಿ ಮರೆತಿಲ್ಲ:  ಇದೇನಿದು Tarun Sudhir ಕೊಟ್ಟ ಸ್ಟೇಟ್​ಮೆಂಟ್​?

ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮೊಂಥೆರೋ ಮದುವೆಯಾಗಿ ಒಂದೂವರೆ ವರ್ಷವಾಗಿದೆ. ಸಂದರ್ಶನವೊಂದರಲ್ಲಿ ಮಾತನಾಡಿದ ತರುಣ್, ತಮಗಿಬ್ಬರಿಗೂ  ಮೊದಲ ಪ್ರೀತಿ  ಬೇರೆಯದ್ದೇ  ಇದೆ ಎಂದಿದ್ದಾರೆ.  ಈ ಸಮಾನ ಮನಸ್ಥಿತಿಯೇ ತಮ್ಮ ಸುಗಮ ದಾಂಪತ್ಯಕ್ಕೆ ಕಾರಣ ಎಂದಿದ್ದಾರೆ.

ಸ್ಯಾಂಡಲ್​ವುಡ್​ನ ಬ್ಯೂಟಿಫುಲ್​ ಜೋಡಿ ಎಂದೇ ಫೇಮಸ್​ ಆಗಿರುವ ಜೋಡಿಯಗಳ ಪೈಕಿ ತರುಣ್​ ಸುಧೀರ್​ ಮತ್ತು ಸೋನಲ್​ ಮೊಂಥೆರೋ (Tharun Sudhir and Sonal Monteiro) ಜೋಡಿಯೂ ಒಂದು, ತರುಣ್‌ ಅವರು ನಿರ್ದೇಶಕರಾಗಿ ಸಾಕಷ್ಟು ಹೆಸರು ಮಾಡುತ್ತಿದ್ದರೆ, ಸೋನಲ್‌ ಅವರು, ಸಿನಿಮಾದಲ್ಲಿ ಬಿಜಿಯಾಗಿದ್ದಾರೆ.

ಈ ಜೋಡಿ, 2024 ಆಗಸ್ಟ್​ 11ರಂದು ಮದುವೆಯಾಗಿದೆ. ಹಿಂದೂ ಸಂಪ್ರದಾಯದಂತೆ ಮೊದಲಿಗೆ ಮದುವೆ ನಡೆದಿತ್ತು. ಸೋನಲ್​ ಅವರ ಹುಟ್ಟುಹಬ್ಬದಂದೇ ಮದುವೆಯಾಗಿದ್ದು ವಿಶೇಷವೇ. ಕೊನೆಗೆ ಜೋಡಿ ಮಂಗಳೂರಿನಲ್ಲಿ ಕ್ರೈಸ್ತ ಸಮುದಾಯದಂತೆ ಮದುವೆ ಮಾಡಿಕೊಂಡಿತು. ಇದಕ್ಕೆ ಕಾರಣ ಸೋನಲ್​ (Sonal Monteiro) ಅವರು ಕ್ರೈಸ್ತ ಸಮುದಾಯಕ್ಕೆ ಸೇರಿದವರು. ಈ ದಂಪತಿ ತಮ್ಮ ವೈವಾಹಿಕ ಜೀವನವನ್ನು ಸಂತಸದಿಂದ ಕಳೆಯುತ್ತಿದ್ದಾರೆ.

ಇದೀಗ ತರುಣ್​ ಅವರು ಸಂದರ್ಶನವೊಂದರಲ್ಲಿ ತಮ್ಮಿಬ್ಬರ ಮೊದಲ ಲವ್​ ಬಗ್ಗೆ ಮಾತನಾಡಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ಈ ಜೋಡಿ ತಮ್ಮ ನಾಲ್ಕು ವರ್ಷದ ಪ್ರೀತಿಗೆ ಮದುವೆ ಎಂಬ ಮುದ್ರೆ ಒತ್ತಿದ್ದಾರೆ ತಾರೆಯರು. ಇದರ ಹೊರತಾಗಿಯೂ ಇದೇನಿದು ಮೊದಲ ಪ್ರೀತಿ ಎಂದು ಹಲವರು ಹುಬ್ಬೇರಿಸಬಹುದು.

ಆದರೆ ತರುಣ್​ ಅವರು ಹೇಳಿರುವ ಮೊದಲ ಪ್ರೀತಿಯೇ ಬೇರೆ. ಅದೇನೆಂದರೆ, ತಮಗೆ ಮತ್ತು ಸೋನಲ್​ ಇಬ್ಬರಿಗೂ ಅವರ ಮೊದಲ ಪ್ರೀತಿ ಎಂದರೆ ಅದು ಕೆಲಸ. ಅರ್ಥಾತ್​ ಸಿನಿಮಾ. ಆದ್ದರಿಂದ ಇಬ್ಬರೂ ಸಿನಿಮಾ ಕುರಿತು ಒಂದೇ ರೀತಿಯ ಮನಸ್ಥಿತಿ ಹಾಗೂ ಪ್ರೀತಿ ಹೊಂದಿರುವ ಕಾರಣ ತಮ್ಮ ದಾಂಪತ್ಯ ಜೀವನ ಕೂಡ ಅಷ್ಟೇ ಸುಗಮವಾಗಿ ನಡೆದಿದೆ ಎಂದು ಹೇಳಿದ್ದಾರೆ ತರುಣ್​.

ಇದೇ ವೇಳೆ ಮಗುವಿನ ಬಗ್ಗೆಯೂ ಮಾತನಾಡಿರುವ ಅವರು, ಆ ದೇವರು ಯಾವಾಗ ಮಗು ಕೊಡುತ್ತಾನೋ, ಆಗ ಮಗು ಆಗತ್ತೆ ಎಂದು ಹೇಳುವ ಮೂಲಕ, ಮಗು ಮಾಡಿಕೊಳ್ಳುವುದನ್ನು ಮುಂದೂಡುವ ಯಾವುದೇ ಪ್ಲ್ಯಾನ್​​ ಇಲ್ಲ ಎಂದು ಪರೋಕ್ಷವಾಗಿ ನುಡಿದಿದ್ದಾರೆ.

ಇನ್ನು ತರುಣ್​ ಅವರು ಇದಾಗಲೇ ರಿಯಾಲಿಟಿ ಷೋಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದರೆ, ಸೋನಲ್​ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಸೋನಲ್​ ಕುರಿತು ಹೇಳುವುದಾದರೆ, ಎಕ್ಕ ಸಕ್ಕ ಎಂಬ ತುಳು ಸಿನಿಮಾ ಮೂಲಕ ಎಂಟ್ರಿ ಕೊಟ್ಟರು. ಬಳಿಕ ಯಮುನಕ್ಕ ಸೇರಿದಂತೆ ಕೆಲವು ತುಳು ಚಿತ್ರಗಳಲ್ಲಿ ನಟಿಸಿದ್ದಾರೆ. 2018ರಲ್ಲಿ ಅಭಿಸಾರಿಕೆ ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಎಂಟ್ರಿ ಕೊಟ್ಟರು. 2019ರಲ್ಲಿ ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು.

ಬಳಿಕ ತರುಣ್ ನಿರ್ದೇಶನದ ರಾಬರ್ಟ್ ಚಿತ್ರದಲ್ಲಿ ಸೋನಲ್ ಪ್ರಮುಖ ಪಾತ್ರದಲ್ಲಿ ನಟಿಸಿದರು. ಆನಂತರ ಶುಗರ್‌ ಫ್ಯಾಕ್ಟರಿ, ಬನಾರಸ್‌, ಗರಡಿ, ಮದುವೆ ದಿಬ್ಬಣ, ಡೆಮೊ ಪೀಸ್‌, ಶಂಭೋ ಶಿವ ಶಂಕರ್‌ ಸಿನಿಮಾಗಳಲ್ಲಿ ನಟಿಸಿದರು. ಬಳಿಕ ಉಪೇಂದ್ರ ನಟನೆಯ ಬುದ್ಧಿವಂತ 2, ರೋಲೆಕ್ಸ್ ಹಾಗೂ ಮಾರ್ಗರೆಟ್ ಲವ್ ಆಫ್ ರಾಮಾಚಾರಿ ಚಿತ್ರದಲ್ಲಿ ಸೋನಲ್ ಅಭಿನಯಿಸಿದ್ದಾರೆ.

Source link

Leave a Reply

Your email address will not be published. Required fields are marked *