ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಟೀಸರ್ (ವಿಷಕಾರಿ ಟೀಸರ್) ರಿಲೀಸ್ ಆಗಿ ಧೂಳೆಬ್ಬಿಸಿದೆ. ಈ ಟೀಸರ್ ಲಕ್ಷ ಲಕ್ಷ ವೀಕ್ಷಣೆ ಕಾಣುತ್ತಿದೆ. ಯಶ್ ಅಭಿಮಾನಿಗಳಂತೂ ಹಬ್ಬ ಮಾಡುತ್ತಿದ್ದಾರೆ. ‘ಟಾಕ್ಸಿಕ್’ ಟೀಸರ್ ನೋಡಿ ರಾಕಿಂಗ್ ಸ್ಟಾರ್ಸ್ ಫ್ಯಾನ್ಸ್ ಖುಷ್ ಆಗಿದ್ದಾರೆ. ‘ವಿಂಟೇಜ್ ಯಶ್ ಮರಳಿದ’ ಎಂದು ಸಂಭ್ರಮಿಸುತ್ತಿದ್ದಾರೆ. ಹಾಗಾದರೆ, ಯಶ್ ಅಭಿಮಾನಿಗಳಿಗೆ ಇಷ್ಟವಾದ ಅಂಶಗಳು ಯಾವವು? ಆ ಬಗ್ಗೆ ಇಲ್ಲಿದೆ ವಿವರ.
ಯಶ್ ಅವರು ಒಳ್ಳೆಯ ನಟ, ಒಳ್ಳೆಯ ಡ್ಯಾನ್ಸರ್ ಕೂಡ ಹೌದು. ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಚಿತ್ರದಲ್ಲಿ ಸಖತ್ ಆ್ಯಕ್ಷನ್ ಮೆರೆದಿದ್ದರು. ಇಲ್ಲಿ ಡ್ಯಾನ್ಸ್ ಮಾಡೋಕೆ ಅಷ್ಟಾಗಿ ಅವಕಾಶ ಸಿಕ್ಕಿರಲಿಲ್ಲ. ಈಗ ‘ಟಾಕ್ಸಿಕ್’ ಟೀಸರ್ ನಲ್ಲಿ ಒಂದು ಕಡೆ ಯಶ್ ಡ್ಯಾನ್ಸ್ ಮಾಡಿದ್ದಾರೆ. ಈ ಡ್ಯಾನ್ಸ್ ಸ್ಟೆಪ್ ಗಮನ ಸೆಳೆದಿದೆ. ‘ಟಾಕ್ಸಿಕ್’ ಟೀಸರ್ ನ ಜನರು ಬಹುವಾಗಿ ಮೆಚ್ಚಿಕೊಳ್ಳಲು ಇದು ಕೂಡ ಒಂದು ಕಾರಣ.
ಇದನ್ನೂ ಓದಿ: ‘ಟಾಕ್ಸಿಕ್’ ಟೀಸರ್ ಡೈಲಾಗ್ ಮೂಲಕ ‘ಧುರಂಧರ 2’ ಗೆ ಎಚ್ಚರಿಕೆ ಕೊಟ್ಟ ಯಶ್
‘ಟಾಕ್ಸಿಕ್’ ಟೀಸರ್ ನಲ್ಲಿ ಬರೋ ಡೈಲಾಗ್ ಗಳು ಅಭಿಮಾನಿಗಳಿಗೆ ಇಷ್ಟ ಆಗಿವೆ. ‘ಹಠ ಬಿಟ್ಟುಬಿಡು’ ಎಂದು ಹೇಳಿದಾಗ ಅದು ಸಾಧ್ಯವೇ ಇಲ್ಲ ಎಂದು ಯಶ್ ಹೇಳುತ್ತಾರೆ. ಯಶ್ ಅವರು ಹುಟ್ಟುಗುಣ ಇದು. ಈ ಗುಣಕ್ಕೆ ಹೋಲಿಕೆಯಾಗುತ್ತದೆ ಎಂದು ಅನೇಕರು ಹೇಳಿದ್ದಾರೆ. ಈ ಕಾರಣದಿಂದಲೂ ಟೀಸರ್ ಇಷ್ಟವಾಗಿದೆ.
ಗಡ್ಡವಿಲ್ಲದೆ ಬೊಗಳುತ್ತಿದ್ದವರಿಗೆ ಚಪ್ಪಲಿ ಹೊಡೆದ ಯಶ್ ಏನಿಲ್ಲ 👊😬 ರಾಯರು ಭಾರತೀಯ ಚಿತ್ರರಂಗವನ್ನು ಆಳುತ್ತಾರೆ 🔥@TheNameIsYash #ToxicTheMovie #MARCH19 ರಂದು ವಿಷಕಾರಿ #ಯಶ್ pic.twitter.com/flNv3lIPvt
— ADI (Yashism) (@AdityaAngadi17) ಫೆಬ್ರವರಿ 20, 2026
ಆ ನೃತ್ಯ ಚೂಡು ತಮ್ಮುಡು 😭😭💥
ವಿಂಟೇಜ್ #ಯಶ್ backkkkk!!!!!!! #ToxicTheMovie #ಟಾಕ್ಸಿಕ್ ಟೀಸರ್ pic.twitter.com/kzaf6qAHUt
— ಕಡುಬು (@ಕಡುಬುಚುಟ್ನಿ) ಫೆಬ್ರವರಿ 20, 2026
‘ಟಾಕ್ಸಿಕ್’ ಟೀಸರ್ನಲ್ಲಿ ರಕ್ತವನ್ನು ಹೆಚ್ಚು ತೋರಿಸಲಾಗಿದೆ. ಇದು ಕೆಲವರಿಗೆ ಇಷ್ಟ ಆಗಿಲ್ಲ. ಈ ಬಗ್ಗೆ ಕೊಂಕು ತೆಗೆದಿದ್ದಾರೆ. ಈ ರೀತಿ ಕೊಂಕು ತೆಗೆಯೋ ಎಲ್ಲರಿಗೂ ಯಶ್ ಅಭಿಮಾನಿಗಳು ತಿರುಗೇಟು ಕೊಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.