
ಮಧ್ಯಪ್ರದೇಶದ ರೇವಾದಲ್ಲಿ ತಡರಾತ್ರಿ ಸಾರ್ವಜನಿಕ ರಸ್ತೆಯಲ್ಲಿ ನಡೆದ ಗಲಾಟೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿವೆ. ಹಿರಿಯ ವೈದ್ಯ ಡಾ. ಕೆ.ಡಿ. ಸಿಂಗ್ ಅವರ ಪತ್ನಿ ಹಾಗೂ ದಂತವೈದ್ಯೆ ಪ್ರಿಯಾಂಕಾ ಸಿಂಗ್, ಯುವತಿಯೊಬ್ಬಳ ಕೂದಲನ್ನು ಹಿಡಿದು ಎಳೆದಾಡಿ, ಸಾರ್ವಜನಿಕವಾಗಿ ಥಳಿಸುತ್ತಿರುವುದನ್ನು ದೃಶ್ಯಗಳಲ್ಲಿ ಕಾಣಬಹುದು.
In #MadhyaPradesh‘s #Rewa, Priyanka Singh, a dentist and the wife of Dr. K.D. Singh, allegedly grabbed a young woman by the hair, dragged her, and assaulted her in public.
The incident reportedly occurred after she found her husband and the woman together inside a car,… pic.twitter.com/Q2tWca9UJ4
— Hate Detector 🔍 (@HateDetectors) February 19, 2026
ತನ್ನ ಪತಿ ಮತ್ತು ಆ ಯುವತಿ ಕಾರಿನಲ್ಲಿ ಒಟ್ಟಿಗೆ ಇರುವುದನ್ನು ಕಂಡ ನಂತರ ಪ್ರಿಯಾಂಕಾ ಸಿಂಗ್ ಈ ಗಲಾಟೆ ಶುರುಮಾಡಿದ್ದಾರೆ ಎನ್ನಲಾಗಿದೆ. ಅವರಿಬ್ಬರ ನಡುವೆ ಅಕ್ರಮ ಸಂಬಂಧವಿದೆ ಎಂದು ಅವರು ಅನುಮಾನಿಸಿದ್ದರು ಎಂದು ಸ್ಥಳೀಯ ವರದಿಗಳು ಹೇಳುತ್ತವೆ.