AI impact ಶೇ.40ರಷ್ಟು ಎಂಟ್ರಿ ಲೆವೆಲ್ ಉದ್ಯೋಗಕ್ಕೆ AI ಕುತ್ತು, ನಿಮ್ ಜಾಬ್ ಸೇಫಾ?IMF ಮುಖ್ಯಸ್ಥೆ ಸ್ಫೋಟಕ ಭವಿಷ್ಯ | Imf Chief Warns Ai To Hit 40 Percent Of Global Entrylevel Jobs Is Your Job Safe

AI impact ಶೇ.40ರಷ್ಟು ಎಂಟ್ರಿ ಲೆವೆಲ್ ಉದ್ಯೋಗಕ್ಕೆ AI ಕುತ್ತು, ನಿಮ್ ಜಾಬ್ ಸೇಫಾ?IMF ಮುಖ್ಯಸ್ಥೆ ಸ್ಫೋಟಕ ಭವಿಷ್ಯ | Imf Chief Warns Ai To Hit 40 Percent Of Global Entrylevel Jobs Is Your Job Safe



AI impact ಶೇ.40ರಷ್ಟು ಎಂಟ್ರಿ ಲೆವೆಲ್ ಉದ್ಯೋಗಕ್ಕೆ AI ಕುತ್ತು, ನಿಮ್ ಜಾಬ್ ಸೇಫಾ?IMF ಮುಖ್ಯಸ್ಥೆ ಸ್ಫೋಟಕ ಭವಿಷ್ಯ | Imf Chief Warns Ai To Hit 40 Percent Of Global Entrylevel Jobs Is Your Job Safe

ಶೇ.40ರಷ್ಟು ಎಂಟ್ರಿ ಲೆವೆಲ್ ಉದ್ಯೋಗಕ್ಕೆ AI ಕುತ್ತು, ನಿಮ್ಮ ಜಾಬ್ ಸೇಫ್ ಇದೆಯಾ? ಈ ಕುರಿತು ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜಿವಾ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಇದು ಶೇಕಡಾ 60ಕ್ಕೂ ಏರಿಕೆಯಾಗುವ ಸಾಧ್ಯತೆ ಇದೆ. 

ನವದೆಹಲಿ (ಫೆ.20) ಆರ್ಟಿಫೀಶಿಯಲ್ ಇಂಟಲಿಜೆನ್ಸ್ (ಎಐ) ಎಲ್ಲಾ ಕ್ಷೇತ್ರಗಳನ್ನು ಆವರಿಸಿಕೊಳ್ಳುತ್ತಿದೆ. ಹಲವು ಪ್ರತಿಷ್ಠಿತ ಕಂಪನಿಗಳು ಎಐ ಟೆಕ್‌ನಿಂದ ಉದ್ಯೋಗ ಕಡಿತ ಮಾಡುತ್ತಿದೆ. ಎಐ ಮೂಲಕ ಕೆಲಸ ನಿರ್ವಹಣೆ ವೆಚ್ಚವನ್ನೂ ಕಡಿಮೆ ಮಾಡುತ್ತಿದೆ. ಇದೀಗ ದೆಹಲಿಯಲ್ಲಿ ಎಐ ಇಂಪ್ಯಾಕ್ಟ್ ಶೃಂಗಸಭೆ ಬಳಿಕ ಭಾರತ ಎಐ ಜಗತ್ತಿನಲ್ಲಿ ಅಧಿಪತ್ಯ ಸಾಧಿಸುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿ ಗೋಚರಿಸುತ್ತಿದೆ. ಎಲ್ಲಾ ಬೆಳವಣಿಗೆ ನಡುವೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಎಎಂಎಫ್) ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜಿವಾ ಉದ್ಯೋಗಕ್ಕೆ ಎದುರಾಗುವ ಎಐ ಆತಂಕದ ಕುರಿತು ಮಾತನಾಡಿದ್ದಾರೆ. ಇದರಲ್ಲಿ ನಿಮ್ಮ ಉದ್ಯೋಗ ಸೇಫಾ ಈ ಕುರಿತು ಹಲವು ಸ್ಫೋಟಕ ಮಾಹಿತಿ ನೀಡಿದ್ದಾರೆ.

ಎನ್‌ಡಿಟಿವಿ ಜೊತೆಗಿನ ಸಂದರ್ಶನದಲ್ಲಿ ಕ್ರಿಸ್ಟಲಿನಾ ಜಾರ್ಜಿವಾ ಕೆಲ ಮಾಹಿತಿ ನೀಡಿದ್ದಾರೆ. ಪ್ರಮುಖವಾಗಿ ಅಂತಾರಾಷ್ಟ್ರೀಯ ಹಣಹಾಸು ನಿಧಿ ಬೆಂಬಲದೊಂದಿಗೆ ನಡೆಸಿದ ಅಧ್ಯಯನದಲ್ಲಿ ಶೇಕಡಾ 40ರಷ್ಟು ಎಂಟ್ರಿ ಲೆವೆಲ್ ಉದ್ಯೋಗ ಎಐನಿಂದ ಆಪತ್ತಿನಲ್ಲಿದೆ ಎಂದಿದ್ದಾರೆ. ಈ ಸಂಖ್ಯೆ ಶೇಕಡಾ 60ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಆದರೆ ಭಾರತದಲ್ಲಿ ಈ ಸಂಖ್ಯೆ ಶೇಕಡಾ 26ರ ಆಸುಪಾಸಿನಲ್ಲಿ ನಿಲ್ಲಲಿದೆ ಎಂದಿದ್ದಾರೆ.

ಆರಂಭಿಕ ಹಂತದ ಕೆಲಸಗಳ ಮೇಲೆ ಹೆಚ್ಚಿನ ಪ್ರಭಾವ

ಎಐ ಟೆಕ್‌ನಿಂದ ಆರಂಭಿಕ ಹಂತದ ಕೆಲಸಗಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಅಂದರೆ ಹೊಸದಾಗಿ ಸೇರುವ ಅಥವಾ ಎಂಟ್ರಿ ಲೆವೆಲ್ ಜಾಬ್‌ಗಳನ್ನು ಎಐ ಅತ್ಯಂತ ಸುಲಭವಾಗಿ ಮಾಡಲಿದೆ. ಹೀಗಾಗಿ ಎಂಟ್ರಿ ಲೆವೆಲ್ ಉದ್ಯೋಗದ ಮೇಲೆ ಎಐ ಪರಿಣಾಮ ಬೀರಲಿದೆ. ಆದರೆ ಎಐ ಆವರಿಸಿಕೊಳ್ಳುತ್ತಿದ್ದಂತೆ ಹೊಸ ಉದ್ಯೋಗಗಳು ಸೃಷ್ಟಿಯಾಗಲಿದೆ. ಎಐನಿಂದ ವಿಫುಲ ಅವಕಾಶಗಳು ಸೃಷ್ಟಿಯಾಗಲಿದೆ ಎಂದಿದ್ದಾರೆ.

ಅಭಿವೃದ್ದಿ ಹೊಂದಿದೆ ದೇಶಗಳಲ್ಲಿ ಎಐ ಆಪತ್ತು

ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಎಐ ಉದ್ಯೋಗದ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂದು ಕ್ರಿಸ್ಟಲಿನಾ ಜಾರ್ಜಿವಾ ಹೇಳಿದ್ದಾರೆ. ಇಲ್ಲಿ ಶೇಕಡಾ 60ರಷ್ಟು ಎಂಟ್ರಿ ಲೆವೆಲ್ ಉದ್ಯೋಗಗಳನ್ನು ಎಐ ಕಸಿದುಕೊಳ್ಳಲಿದೆ ಎಂದಿದೆ. ಆದರೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಈ ಪ್ರಮಾಣ ಇಳಿಕೆಯಾಗುತ್ತದೆ ಎಂದಿದ್ದಾರೆ. ಎಐ ಎಲ್ಲಾ ಕ್ಷೇತ್ರಗಳನ್ನು ಆವರಿಸಿಕೊಳ್ಳುವ ಕಾರಣ ತಂತ್ರಜ್ಞಾನ, ಕೌಶಲ್ಯ ರಹಿತ ಉದ್ಯೋಗಿಗಳಿಗೆ ಸಮಸ್ಯೆಯಾಗಲಿದೆ ಎಂದಿದ್ದಾರೆ. ಇದೇ ಕಾರಣದಿಂದ ಸರ್ಕಾರಗಳು ವಿದ್ಯಾರ್ಥಿಗಳಿಗೆ ಎಐ ಹಾಗೂ ಮಶಿನ್ ಲರ್ನಿಂಗ್ ಸಾಮಾನ್ಯ ವಿಷಯವನ್ನಾಗಿ ಮಾಡಬೇಕು. ಎಲ್ಲಾ ವಿದ್ಯಾರ್ಥಿಗಳು ಎಐ ಹಾಗೂ ಮಶಿನ್ ಲರ್ನಿಂಗ್ ಕನಿಷ್ಠ ಜ್ಞಾನ ಹೊಂದಿರಬೇಕು. ಇದು ಭವಿಷ್ಯದ ದಿನಗಳಲ್ಲಿ ಅನಿವಾರ್ಯವಾಗಲಿದೆ ಎಂದಿದ್ದಾರೆ.



Source link

Leave a Reply

Your email address will not be published. Required fields are marked *