Headlines

ಎಲ್ಲಾ ಮುಗಿಸಿ ಮದುವೆ ಎಂದಾಗ ಜಗಳ ಜೋರು, 19ರ ಹರೆಯದ ಜೋಡಿಯ ಲೀವ್ ಇನ್ ಕೇಸ್

ಎಲ್ಲಾ ಮುಗಿಸಿ ಮದುವೆ ಎಂದಾಗ ಜಗಳ ಜೋರು, 19ರ ಹರೆಯದ ಜೋಡಿಯ ಲೀವ್ ಇನ್ ಕೇಸ್

ಎಲ್ಲಾ ಮುಗಿಸಿ ಮದುವೆ ಎಂದಾಗ ಜಗಳ ಜೋರು, 19ರ ಹರೆಯದ ಜೋಡಿಯ ಲೀವ್ ಇನ್ ಕೇಸ್

ಎಲ್ಲಾ ಮುಗಿಸಿ ಮದುವೆ ಎಂದಾಗ ಜಗಳ ಜೋರು, ಯುವತಿ ಮೇಲೆ ಅನುಮಾನ ಹೆಚ್ಚಾಗಿದೆ. ಮದುವೆ ಮಾತಿನಿಂದ ಶುರುವಾದ ಜಗಳದಲ್ಲಿ ಯುವತಿ ಪರಿಸ್ಥಿತಿ ಚಿಂತಾಜನಕವಾಗಿದ್ದರೆ, ಯುವಕ ಅರೆಸ್ಟ್ ಆಗಿದ್ದಾನೆ.

ಇಬ್ಬರು ಬಯೋಟೆಕ್ನಾಲಜಿ ವಿದ್ಯಾರ್ಥಿಗಳು. ಇಬ್ಬರ ವಯಸ್ಸು ಕೇವಲ 19. ವಿದ್ಯಾಭ್ಯಾಸ, ಆಟ ಪಾಠ ಎಲ್ಲವೂ ಜೊತೆಯಲ್ಲೇ ನಡೆಯುತ್ತಿತ್ತು. ಕಾರಣ ಲೀವ್ ಇನ್ ರಿಲೇಶನ್‌ಶಿಪ್. ವಿದ್ಯಾಭ್ಯಾಸಕ್ಕಾಗಿ ಇಬ್ಬರೂ ತಮ್ಮ ಊರಿನಿಂದ ಗುರುಗ್ರಾಂಗೆ ಬಂದಿದ್ದರು. ಜೊತೆಯಾಗಿ ರೂಂ ಪಡೆದು ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿ ಎಲ್ಲಾ ಮುಗಿಸಿದ್ದಾರೆ. ಗಂಡ ಹೆಂಡತಿಯಂತೆ ದಿನ ದೂಡಿದ್ದಾರೆ. ಇದರ ನಡುವೆ ಶುರುವಾದ ಜಗಳ ಈ ರಿಲೇಶನ್‌ಶಿಪ್‌ಗೆ ಅಂತ್ಯ ಹಾಡಿದ್ದು ಮಾತ್ರವಲ್ಲ, ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಯುವಕ ಅರೆಸ್ಟ್ ಆದ ಘಟನೆ ಗುರುಗ್ರಾಂನಲ್ಲಿ ನಡಿದೆ.

ಜಿಡಿ ಗೋಯೆಂಕಾ ವಿಶ್ವವಿದ್ಯಾಲಯದಲ್ಲಿನ ವಿದ್ಯಾರ್ಥಿಗಳು.ಇಬ್ಬರಲ್ಲಿ ಪ್ರೀತಿ ಶುರುವಾಗಿದೆ. ಇನ್ನು ಅಷ್ಟೇ ವೇಗದಲ್ಲಿ ಲೀವ್ ಇನ್ ರಿಲೇಶನ್‌ಶಿಪ್ ಶುರುವಾಗಿದೆ. ಗುರುಗ್ರಾಂ ಸೆಕ್ಟರ್ 69ರಲ್ಲಿ ಮನೆ ಬಾಡಿಗೆ ಪಡೆದು ಜೊತೆಯಾಗಿ ವಿದ್ಯಾಭ್ಯಾಸ ಮುಂದುವರಿಸಿದ್ದಾರೆ. ಲೀವ್ ಇನ್ ರಿಲೇಶನ್‌ಶಿಪ್‌ನಲ್ಲಿ ರೊಮ್ಯಾನ್ಸ್‌ಗೆ ಜಾರದ ದಿನಗಳಿಲ್ಲ.

ಯುವತಿ ತ್ರಿಪುರಾ ಮೂಲದವಳು. ಲೀವ್ ಇನ್ ಹೇಗೆ ಸಾಗಿತ್ತು. ಅಷ್ಟೊತ್ತಿಗೆ ಯುವತಿಗೆ ಜ್ಞಾನೋದಯವಾಗಿದೆ. ಗಂಡ ಹೆಂಡತಿಯಂತೆ ಸಾಗುತ್ತಿದೆ ಜೀವನ. ಎಲ್ಲವನ್ನೂ ಆತನಿಗೆ ಕೊಟ್ಟಾಗಿದೆ. ಇನ್ನು ಆತ ಮದುವೆಯಾಗದಿದ್ದರೆ ಹೇಗೆ ಎಂಬ ಪ್ರಶ್ನೆ ಕಾಡತೊಡಗಿದೆ. ಹೀಗಾಗಿ ಮದುವೆಯಾಗುವಂತೆ ಪಾರ್ಟ್ನರ್‌ನ್ನು ಒತ್ತಾಯಿಸಿದ್ದಾಳೆ. ಇದೇ ವಿಚಾರಕ್ಕೆ ಸಣ್ಣದಾಗಿ ಮನಸ್ತಾಪಗಳು , ಜಗಳಗಳು ಶುರುವಾಗುತ್ತಿತ್ತು. ಆದರೆ ಪ್ರತಿ ದಿನದ ರೊಮ್ಯಾನ್ಸ್‌ನಲ್ಲಿ ಎಲ್ಲವೂ ಮಾಯವಾಗುತ್ತಿತ್ತು

ಮದುವೆಯಾಗುವಂತೆ ಬಲವಂತ ಮಾಡುತ್ತಿದ್ದಂತೆ ಯುವಕ ನಿಜ ಸ್ವರೂಪ ಹೊರತೆಗೆದಿದ್ದಾನೆ.ಯುವತಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾನೆ. ಆಕೆ ನಡೆತೆ ಬಗ್ಗೆ ಅನುಮಾನ,ಯಾರೇ ಫೋನ್ ಮಾಡಿದರೂ ಸಂಶಯ ವ್ಯಕ್ತಪಡಿಸಿದ್ದಾರೆ. ಹೀಗೆ ಕಳೆದ ರಾತ್ರಿ ಇಬ್ಬರು ಮದುವೆ ವಿಚಾರಕ್ಕೆ ತೀವ್ರ ಜಗಳವಾಡಿದ್ದಾರೆ. ಈ ಜಗಳದಲ್ಲಿ ಯುವತಿ ಮೇಲೆ ಪಾರ್ಟ್ನರ್ ಹಲ್ಲೆ ಮಾಡಿದ್ದಾನೆ.

ತೀವ್ರವಾಗಿ ಗಾಯಗೊಂಡ ಯುವತಿ ತಾಯಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ತ್ರಿಪುರಾದಲ್ಲಿರುವ ಯುವತಿ ಕುಟುಂಬಸ್ಥರು ತಕ್ಷಣೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತ್ರಿಪುರಾ ಪೊಲೀಸರು ಗುರುಗ್ರಾಂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರೆ, ಇತ್ತ ಯುವಕನ ಅರೆಸ್ಟ್ ಮಾಡಿದ್ದಾರೆ. ಯುವತಿ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಯಿಗೆ ಫೋನ್ ಮಾಡಿದ ಯುವತಿ

Source link

Leave a Reply

Your email address will not be published. Required fields are marked *