ಶಾಲು ಬಿಟ್ಟು ನೀವು ಏನೂ ಹಾಕಲ್ವಲ್ಲಾ ಸಾರ್​ ಎಂದು ಸಿಎಂಗೆ ಹೇಳಿದ ನಟಿ ಜಯಮಾಲಾ: ವಿಡಿಯೋ ವೈರಲ್​ | Jayamala Meets Cm Siddaramaiah And Greets With Shawl Video Gone Viral Suc

ಶಾಲು ಬಿಟ್ಟು ನೀವು ಏನೂ ಹಾಕಲ್ವಲ್ಲಾ ಸಾರ್​ ಎಂದು ಸಿಎಂಗೆ ಹೇಳಿದ ನಟಿ ಜಯಮಾಲಾ: ವಿಡಿಯೋ ವೈರಲ್​ | Jayamala Meets Cm Siddaramaiah And Greets With Shawl Video Gone Viral Suc



ಶಾಲು ಬಿಟ್ಟು ನೀವು ಏನೂ ಹಾಕಲ್ವಲ್ಲಾ ಸಾರ್​ ಎಂದು ಸಿಎಂಗೆ ಹೇಳಿದ ನಟಿ ಜಯಮಾಲಾ: ವಿಡಿಯೋ ವೈರಲ್​ | Jayamala Meets Cm Siddaramaiah And Greets With Shawl Video Gone Viral Suc

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆಯಾಗಿ ಆಯ್ಕೆಯಾದ ನಟಿ ಜಯಮಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚಿತ್ರರಂಗದ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಸಿಎಂಗೆ ಶಾಲು ಹೊದಿಸುವಾಗ ನಡೆದ ಸಂಭಾಷಣೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಇದೇ ಫೆಬ್ರುವರಿ 1ರಂದು ಚುನಾವಣೆ ನಡೆದಿದ್ದು, ನಟಿ ಜಯಮಾಲ ಗೆಲುವು ಸಾಧಿಸಿದ್ದಾರೆ. ಈ ಭಾರಿಯ ಫಿಲ್ಮ್ ಚೇಂಬರ್ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಟಿ ಜಯಮಾಲಾ ಹಾಗೂ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಭಾ.ಮಾ. ಹರೀಶ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ 512 ಮತ ಪಡೆದು ಜಯಮಾಲಾ ಜಯಗಳಿಸಿದ್ದಾರೆ. ಒಟ್ಟು 846 ಮತಗಳು ಚಲಾವಣೆಯಾಗಿದ್ದು, ಜಯಮಾಲಾ ಅವರು 512 ಮತಗಳನ್ನು ಪಡೆದುಕೊಂಡಿರುವುದು ವಿಶೇಷ. ಈ ಹಿನ್ನೆಲೆಯಲ್ಲಿ, ಚಲನಚಿತ್ರದಲ್ಲಿನ ಸಮಸ್ಯೆಗಳ ಕುರಿತು ನಟಿ ಜಯಮಾಲಾ ಅವರು ಸಿದ್ದರಾಮಯ್ಯ ಅವರ ಜೊತೆಗೆ ಚರ್ಚಿಸಲು ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ಈಚೆಗೆ ಭೇಟಿಯಾಗಿ, ತಮ್ಮ ಬೇಡಿಕೆಗಳ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿನ ವಿಡಿಯೋ ಒಂದು ವೈರಲ್​ ಆಗ್ತಿದೆ.

ಶಾಲೇಕೇ ತಂದ್ರಿ ಎಂದು ಕೇಳಿದ ಸಿಎಂ

ಮೊದಲಿಗೆ ಜಯಮಾಲಾ ಅವರು, ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಅವರಿಗೆ ಪುಷ್ಪಗುಚ್ಚವನ್ನು ನೀಡಿದರು. ಅವರ ಜೊತೆಗೆ, ಮಂಡಳಿಯ ಉಪಾಧ್ಯಕ್ಷರಾದ ಎಂ.ಕೆ. ಸುಂದರ್ ರಾಜನ್, ಎಂ.ಮಂಜು ಮತ್ತಿತರರು ಸಿದ್ದರಾಮಯ್ಯನವರ ಭೇಟಿಗೆ ತೆರಳಿದ್ದರು. ಆಗ ಜಯಮಾಲಾ ಅವರು ತಮ್ಮ ಜೊತೆ ಬಂದಿದ್ದವರನ್ನು ಮುಖ್ಯಮಂತ್ರಿಗಳಿಗೆ ಪರಿಚಯಿಸಿದರು. ಆರಂಭದಲ್ಲಿ ಕೊಟ್ಟ ಬೊಕ್ಕೆಯನ್ನು ಸಿದ್ದರಾಮಯ್ಯ ಖುಷಿಯಿಂದ ಸ್ವೀಕರಿಸಿದರು. ಬಳಿಕ ಜಯಮಾಲಾ ಅವರು ಶಾಲು ಹೊದಿಸಲು ಮುಂದಾದಾಗ, ಶಾಲನ್ನೇಕೆ ತಂದ್ರಿ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಅದಕ್ಕೆ ಜಯಮಾಲಾ ಅವರು, ನೀವು ಶಾಲನ್ನು ಬಿಟ್ಟರೆ ಬೇರೇನನ್ನೂ ಹಾಕುವುದಿಲ್ಲವಲ್ಲ ಸರ್​, ಅದಕ್ಕೇ ತಂದೆ ಎಂದರು. ಬಳಿಕ ಸಿದ್ದರಾಮಯ್ಯ ಅವರಿಗೆ ಈ ಶಾಲನ್ನು ಹೊದಿಸಿದರು.

ಸಮಸ್ಯೆ ಪರಿಹಾರ

ಇದೇ ವೇಳೆ ಜಯಮಾಲಾ ಅವರು ದೇವರಿಗೆ ಹಾಕಿದಂತೆ ನಾನು ನಿಮಗೆ ಶಾಲನ್ನು ಹೊದಿಸುತ್ತಿದ್ದೇನೆ ಎಂದು ಶಾಲು ಹೊದಿಸಿ ಕೈಮುಗಿದರು. ಬಳಿಕ ಎಲ್ಲರನ್ನೂ ಪರಿಚಯಿಸಿ ತಾವು ತಂದ ಮನವಿ ಪತ್ರವನ್ನು ಸಿಎಂ ಮುಂದೆ ಇಟ್ಟರು. ಅದರಲ್ಲಿ ಚಿತ್ರರಂಗದ ಕೆಲವೊಂದು ಸಮಸ್ಯೆಗಳ ಬಗ್ಗೆ ಬರೆಯಲಾಗಿದೆ. ಇವೆಲ್ಲವನ್ನೂ ತಾವು ಪರಿಹರಿಸುತ್ತೀರಿ ಎಂದು ನಂಬುತ್ತೇನೆ ಎಂದಾಗ, ಅಲ್ಲಿ ಇದ್ದವರು ನಂಬುತ್ತೇನೆ ಅಲ್ಲ, ಪರಿಹರಿಸಿ ಎಂದು ಕೇಳಿಕೊಳ್ಳಿ ಎಂದರು. ಆಗ ತಕ್ಷಣ ಜಯಮಾಲಾ ಅವರು, ಸಿದ್ದರಾಮಯ್ಯ ಅವರು ಖಂಡಿತವಾಗಿಯೂ ಎಲ್ಲಾ ಸಮಸ್ಯೆಗಳನ್ನೂ ಪರಿಹರಿಸುತ್ತಾರೆ ಎಂದರು.

ವಿಡಿಯೋ ವೈರಲ್​

ಸಿದ್ದರಾಮಯ್ಯನವರು ಬೇರೇನನ್ನೂ ಸ್ವೀಕರಿಸುವುದಿಲ್ಲ ಎನ್ನುವ ವಿಷಯವನ್ನು ಹೈಲೈಟ್​ ಮಾಡಿದ್ದ ನಟಿ ಜಯಮಾಲಾ ತಾವು ಶಾಲನ್ನು ತಂದಿರುವುದಾಗಿ ಹೇಳಿದ್ದರು. ಆದರೆ ಬೇರೇನನ್ನೂ ಹಾಕುವುದಿಲ್ಲ ಎಂದಿರುವ ಅವರ ಮಾತುಗಳ ವಿಡಿಯೋ ಅಷ್ಟೇ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಇದಕ್ಕೆ ವಿಭಿನ್ನ ರೀತಿಯ ಕಮೆಂಟ್ಸ್ ಬರುತ್ತಿವೆ. ಸಿದ್ದರಾಮಯ್ಯನವರು ಆಗ್ಗಾಗ್ಗೆ ತಮಾಷೆ ಮಾಡುವುದು ಉಂಟು. ಅದೇ ರೀತಿ ಇಲ್ಲಿಯೂ ಶಾಲ್​ ಯಾಕೆ ತಂದ್ರಿ ಎಂದು ತಮಾಷೆ ಮಾಡಿರುವುದಾಗಿ ಕೆಲವರು ಹೇಳುತ್ತಿದ್ದಾರೆ. ಅಷ್ಟಕ್ಕೂ ಇಂಥ ವಿಡಿಯೋಗಳಿಗಾಗಿಯೇ ಕಾಯುತ್ತಿರುವ ದೊಡ್ಡ ವರ್ಗವೇ ಇದೆ. ತಮಗೆ ಬೇಕಾದದ್ದಷ್ಟನ್ನೇ ಟ್ರಿಮ್​ ಮಾಡಿ ಅದನ್ನು ಹಾಕುವವರು ಹೆಚ್ಚಾಗಿದ್ದಾರೆ. ಅದೇ ರೀತಿ ಈ ಮಾತಿನ ವಿಡಿಯೋ ಈಗ ವೈರಲ್​ ಆಗ್ತಿದೆ. shankar_punarv ಎನ್ನುವವರು ಶೇರ್​ ಮಾಡಿರುವ ವಿಡಿಯೋ ಇಲ್ಲಿದೆ. 



Source link

Leave a Reply

Your email address will not be published. Required fields are marked *