‘ಟಾಕ್ಸಿಕ್’ ಸಿನಿಮಾ ಟೀಸರ್ ರಿಲೀಸ್ ಆಗಿ ಸೆನ್ಸೇಷನ್ ಸೃಷ್ಟಿಸಿದೆ. ಯಶ್ (ಯಶ್) ಅಭಿಮಾನಿಗಳು ಟೀಸರ್ನ ಬಹುವಾಗಿ ಇಷ್ಟಪಟ್ಟಿದ್ದಾರೆ. ಯಶ್ ಅವರು ವಿವಿಧ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಲುಕ್ ಗಮನ ಸೆಳೆದಿದೆ. ಇದರಲ್ಲಿ ಯಶ್ ಅವರು ಯಂಗ್ ಲುಕ್ನಲ್ಲಿ ಕಾಣಿಸಿಕೊಂಡ ಲುಕ್ ಕೂಡ ಗಮನ ಸೆಳೆದಿದ್ದಾರೆ. ಯಶ್ ಅವರು ಈ ಮೊದಲು ಮುಖವನ್ನು ಮುಚ್ಚಿಕೊಂಡರು. ಅದು ಏಕೆ ಎಂಬ ಪ್ರಶ್ನೆ ಮೂಡಿತ್ತು. ಟಾಕ್ಸಿಕ್ ಟೀಸರ್ ಮೂಲಕ ಉತ್ತರ ಸಿಕ್ಕಂತೆ ಆಗಿದೆ.
ಕೆಲವು ವಾರಗಳ ಹಿಂದೆ ಯಶ್ ಮುಂಬೈ ಬೀದಿಗಳಲ್ಲಿ ಕಾಣಿಸಿಕೊಂಡಿದ್ದರು. ಆಗ ಅವರ ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡರು. ಈ ವಿಡಿಯೋ ಗಮನ ಸೆಳೆಯಿತು. ಯಶ್ ಅವರು ಯಾವಾಗಲೂ ಹೀಗೆ ಕಾಣುವವರಲ್ಲ. ಅವರು ಈ ರೀತಿ ಮಾಡಿದ್ದೇಕೆ ಎಂಬ ಪ್ರಶ್ನೆ ಮೂಡಿತ್ತು. ಅವರು ಗಡ್ಡ ಹಾಗೂ ಕೂದಲಿಗೆ ಕತ್ತರಿ ಹಾಕಿರಬಹುದು ಎಂಬುದು ಅನೇಕರ ಊಹೆ. ಆ ಊಹೆ ನಿಜವಾಗಿದೆ.
ಯಶ್ ಅವರು ಯಂಗ್ ವರ್ಷನ್ ಅಲ್ಲಿ ಕಾಣಿಸಿಕೊಳ್ಳುವ ಉದ್ದೇಶದಿಂದ ಗಡ್ಡವನ್ನು ಕತ್ತರಿಸಿದ್ದರು ಎಂಬುದು ಟೀಸರ್ ನೋಡಿದ ಬಳಿಕ ಪಕ್ಕಾ ಆಗಿದೆ. ಒಂದಷ್ಟು ಎಡಿಟ್ಗಳನ್ನು ಮಾಡಿ ಟೀಸರ್ನಲ್ಲಿ ಮತ್ತಷ್ಟು ಯಂಗ್ ಆಗಿ ಕಾಣುವಂತೆ ಮಾಡಲಾಗಿದೆ. ಇದು ಗಮನ ಸೆಳೆದಿದೆ.
ಈಗ ನಿಮಗೆ ಉತ್ತರ ಸಿಕ್ಕಿದೆ y ಅವನು ಮುಖ ಮುಚ್ಚಿಕೊಂಡಿದ್ದಾನೆ ಅಲ್ಲವೇ ಗೆಳೆಯಾ #ಟಾಕ್ಸಿಕ್ ಟೀಸರ್ #ವಿಷಕಾರಿ #MARCH19 ರಂದು ವಿಷಕಾರಿ #ToxicTheMovie #ಅಪ್ಪ ಮನೆ @TheNameIsYash . pic.twitter.com/fgfTNb65mH
— 𝗬𝗮𝘀𝗵𝗶𝗸𝗮🪷ᵗᵒˣⁱᶜ ¹⁹ ⁰³ ²⁶ (@iamyashikarsy) ಫೆಬ್ರವರಿ 20, 2026
ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಈ ಟೆಕ್ನಿಕ್ ನ ಫಾಲೋ ಮಾಡುತ್ತಾರೆ. ಮುಂದಿನ ಸಿನಿಮಾದ ಲುಕ್ ರಿವೀಲ್ ಆಗಬಾರದು ಎಂಬ ಕಾರಣಕ್ಕೆ ಈ ರೀತಿಯಲ್ಲಿ ಮುಖಕ್ಕೆ ಬಟ್ಟೆ ಧರಿಸುತ್ತಾರೆ. ಯಶ್ ಕೂಡ ಇದೆ ತಂತ್ರ ಬಳಸಿದ್ದಾರೆ. ಯಶ್ ಅವರು ಸದ್ಯ ಯಾವ ಲುಕ್ನಲ್ಲಿ ಇದ್ದಾರೆ ಎಂಬ ಕುತೂಹಲ ಅಭಿಮಾನಿಗಳಿಗೆ ಮೂಡಿದೆ.
ಇದನ್ನೂ ಓದಿ: ‘ವಿಂಟೇಜ್ ಯಶ್ ಈಸ್ ಬ್ಯಾಕ್’; ‘ಟಾಕ್ಸಿಕ್ ಟೀಸರ್ ನೋಡಿ ಯಶ್ ಫ್ಯಾನ್ಸ್ ಖುಷ್
‘ಟಾಕ್ಸಿಕ್’ ಚಿತ್ರವನ್ನು ಗೀತು ಮೋಹನ್ದಾಸ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಕೆವಿಎನ್ ನಿರ್ಮಾಣ ಸಂಸ್ಥೆ ಬಂಡವಾಳ ಹೂಡುತ್ತಾ ಇದೆ. ಯಶ್ ಕೂಡ ಚಿತ್ರದ ನಿರ್ಮಾಪಕ. ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಶಿ ಮೊದಲಾದವರು ನಟಿಸಿದ್ದಾರೆ. ಮಾರ್ಚ್ 19ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.