Bhagyalakshmi Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ನಾನು ಬದಲಾಗಿದ್ದೀನಿ, ಭಾಗ್ಯ ಜೊತೆ ಸಂಸಾರ ಮಾಡ್ತೀನಿ ಎಂದು ತಾಂಡವ್ ಹಠ ಹಿಡಿದು ಕೂತಿದ್ದಾನೆ. ಅತ್ತ ಆದಿ, ಭಾಗ್ಯ ಜೊತೆ ಬದುಕ್ತೀನಿ ಎಂದು ಪಣ ತೊಟ್ಟಿದ್ದಾಳೆ. ಈಗ ಈ ಕಥೆ ತ್ರಿಕೋನ ಪ್ರೇಮಕಥೆಯ ತಿರುವು ಪಡೆದಿದೆ.

ಹೌದು, ತಾಂಡವ್‌ಗೆ ತನ್ನ ತಪ್ಪು ಏನು ಎಂದು ಅರ್ಥ ಆಗಿದೆ. ಈಗ ಅವನು ಭಾಗ್ಯ ಮನೆಗೆ ಬಂದಿದ್ದಾನೆ. ಭಾಗ್ಯ ಮಾತ್ರ ತಾಂಡವ್‌ನನ್ನು ಕ್ಷಮಿಸೋಕೆ ರೆಡಿ ಇಲ್ಲ. ಆದರೆ ತನ್ವಿ ಮಾತ್ರ ತನ್ನ ತಂದೆಗೆ ಒಂದು ಅವಕಾಶ ಕೊಡಿ ಎಂದು ಬೇಡುತ್ತಿದ್ದಾಳೆ.

ಕುಸುಮಾ, ಆದಿ ಎಲ್ಲರೂ ಸೇರಿಕೊಂಡು ಆದಿ ಹಾಗೂ ಭಾಗ್ಯಳ ಮದುವೆ ಮಾಡಬೇಕು ಎಂದು ಪಣ ತೊಟ್ಟಿದ್ದಾರೆ. ಆದರೆ ಸುನಂದಾ ಮಾತ್ರ ಇದನ್ನು ಒಪ್ಪುತ್ತಿಲ್ಲ. ಭಾಗ್ಯ ಕೂಡ ಆದಿಯನ್ನು ಮದುವೆ ಆಗೋಕೆ ರೆಡಿ ಇದ್ದಾಳೆ. ಮುಂದೆ ಏನಾಗುವುದು?

ಈ ಬಗ್ಗೆ ವೀಕ್ಷಕರು ಏನು ಹೇಳುತ್ತಾರೆ ಎಂಬ ಬಗ್ಗೆ ಕುತೂಹಲ ಇರಬಹುದು. ಬಹುತೇಕರು ಆದಿ ಹಾಗು ಭಾಗ್ಯಳನ್ನು ಒಪ್ಪಿಕೊಂಡಿದ್ದಾರೆ, ಇವರಿಬ್ಬರು ಒಂದಾಗಲಿ ಎಂದು ಬಯಸುತ್ತಿದ್ದಾರೆ. ನಿಮ್ಮ ಮಗಳಿಗಾಗಿ, ಮಗಳನ್ನು ಗೌರವಿಸುವ ನಿಮ್ಮ ಮಗಳನ್ನು ತುಂಬಾ \ ಪ್ರೀತಿಸುವ ಜೋಪಾನ ಮಾಡುವ ಒಂದು ಜೀವ ಸಿಕ್ಕಿದೆ. ಒಬ್ಬ ತಾಯಿಯಾಗಿ ಮುಚ್ಚಿಕೊಂಡು ಒಪ್ಪಿಕೋ, ಮತ್ತೆ ಅಳಿಯಂದ್ರೆ ಅಳಿಯಂದ್ರೆ ಅಂತ ಆ ಹಳೆ ಕೋಣದ ಜೊತೆ ನಿನ್ನ ಮಗಳನ್ನು ಕಳುಹಿಸಬೇಡ ಎಂದು ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದರು.

“ಏನ್ ಸೀರಿಯಲ್ ಮಾಡ್ತೀರಾ? ಒಂದು ಒಳ್ಳೆಯ ಸಂದೇಶ ಕೊಡಿ. ಯಾಕೆ ಭಾಗ್ಯಳಿಗೆ ಇನ್ನೊಂದು ಗಂಡಸಿನ ಅವಶ್ಯಕತೆ ಇದೆ ಅಂತ ತೋರುಸ್ತೀರಾ? ಒಂಟಿಯಾಗಿ ಜೀವನ ಸಾಗಿಸಿ, ಮಾದರಿಯಾಗೋ ಥರ ತೋರಿಸಿ. ಅದನ್ನು ಬಿಟ್ಟು ಆದಿಗೆ ಏನ್ ತಲೆ ಕೆಟ್ಟಿದ್ಯಾ? ಭಾಗ್ಯಳ ಗಂಡ ಮನೆಗೆ ಬಂದರೂ ಕೂಡ. ಇನ್ನು ಪ್ರೀತಿ ಗೀತಿ ಅಂದುಕೊಂಡು ಥೂ. ಇದಕ್ಕೆ ಸಮಾಜ ಬಿಡಿ, ಅವಳ ಮಗಳು ತನ್ವಿ ಒಪ್ತಾಳಾ? ಉಗಿದು ಉಪ್ಪಿನಕಾಯಿ ಹಾಕ್ತಾಳೆ” ಎಂದು ಕಾಮೆಂಟ್ ಮಾಡಿದ್ದಾರೆ.

“ಇವತ್ತು ಸುನಂದಾ, ನಾಳೆ ತನ್ವಿ ಏನ್ ಇವ್ನು ತಾಂಡವ್‌ನನ್ನು ಹೊರಗಿನವನು ಅನ್ನೋದು? ಅವನು ಭಾಗ್ಯಳನ್ನು ಗಂಡ ಇವಯ್ಯಗೆ ಏನ್ ಹಕ್ಕಿದೆ ಮಾತಾಡೋಕೆ? ಇದನ್ನೆಲ್ಲ ನೋಡಿ ಕಲಿಯೋ ಜನರು ತುಂಬ ಜನ ಇದ್ದಾರೆ. ಈಗಾಗಲೇ ಹೆಂಗುಸರು ಗಂಡನ್ ಬಿಟ್ಟು ಡಿವೋರಸ್ ತಗೋಳೋದು ಕಾಮನ್ ಆಗಿದೆ, ಇದನ್ನೆಲ್ಲ ನೋಡಿ ಇನ್ನು ಕಲಿತಾರೆ” ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Source link
Bhagyalakshmi Serial: ತಾಂಡವ್ ಮನೆಗೆ ಬಂದ್ರೂ ಭಾಗ್ಯ ನಂಗೆ ಬೇಕೇ ಬೇಕು; ಹಠ ಹಿಡಿದ ಆದಿ; ವೀಕ್ಷಕರ ಆಕ್ರೋಶ