ನವದೆಹಲಿ, ಫೆಬ್ರುವರಿ 20: ದೆಹಲಿಯಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಸಮಿಟ್ (AI ಇಂಪ್ಯಾಕ್ಟ್ ಶೃಂಗಸಭೆ) ಇಡೀ ಪ್ರಪಂಚದ ಗಮನ ಸೆಳೆದಿದೆ. ಶೃಂಗಸಭೆಯ ಕೊನೆಯ ದಿನ ಶುಕ್ರವಾರ ಭಾರತೀಯ ಯುವ ಕಾಂಗ್ರೆಸ್ ಪಕ್ಷದ 10 ಕಾರ್ಯಕರ್ತರು ಅಂಗಿ ತೆಗೆದು ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದೂ ಕೂಡ ಸಾಕಷ್ಟು ಪ್ರಚಾರ ಪಡೆದಿದೆ. ಸಮಿತ್ ನಡೆಯುತ್ತಿರುವ ಸ್ಥಳದಲ್ಲಿ ಹತ್ತು ಮಂದಿ ದಿಢೀರನೇ ಶರ್ಟ್ ಬಿಚ್ಚಿ, ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಐ ಸಮಿಟ್ ನಲ್ಲಿ ಪ್ರಧಾನಿಗಳು ದೇಶವನ್ನು ಮಾರಿದ್ದಾರೆ ಎಂದು ಪ್ರತಿಭಟಿಸಿದ್ದಾರೆ.
ಆದರೆ, ಯುವ ಕಾಂಗ್ರೆಸ್ಸಿಗರ ಈ ವಿನೂತನ ಪ್ರತಿಭಟನೆ ಎಲ್ಲರಿಗೂ ಪಥ್ಯವಾಗಿಲ್ಲ. ದೇಶ ವಿದೇಶ ಸಮಿತಿಯಲ್ಲಿ ಭಾಗವಹಿಸಲು ಬಂದಿರುವ ಅತಿಥಿಗಳ ಮುಂದೆ ನಡೆದ ಈ ಪ್ರತಿಭಟನೆ ಹಲವರಿಗೆ ಅಸಮಾಧಾನ ತಂದಿದೆ. ದೇಶವನ್ನು ಬೆಚ್ಚಲು ಕಾಂಗ್ರೆಸ್ ಯತ್ನಿಸಿ, ತಾನೇ ಬೆತ್ತಲೆ ಎಂದು ಕೆಲವರು ಟೀಕಿಸಿದ್ದಾರೆ.
ಇದನ್ನೂ ಓದಿ: ದೇಶವೇ ತಲೆತಗ್ಗಿಸುವ ಕೆಲಸ; ಎಐ ಶೃಂಗಸಭೆಯಲ್ಲಿ ಯೂತ್ ಕಾಂಗ್ರೆಸ್ ಪ್ರತಿಭಟನೆಗೆ ಬಿಜೆಪಿ ಆಕ್ರೋಶ
‘ಪ್ರತಿಭಟನೆ ನಡೆಸಲು ಇದು ಸರಿಯಾದ ಸ್ಥಳ ಎಂಬುದು ಒಬ್ಬ ಸಂದರ್ಶಕನಾಗಿ ನನ್ನ ಅನಿಸಿಕೆ. ಇದರಿಂದ ದೇಶಕ್ಕೆ ಕೆಟ್ಟ ಪ್ರಚಾರ ಸಿಗುತ್ತದೆ. ಅಂತಾರಾಷ್ಟ್ರೀಯ ಕಾರ್ಯಕ್ರಮವೊಂದು ನಡೆಯುತ್ತಿದೆ, ಮತ್ತು ಎಐ ಬಗ್ಗೆ ಮಾತನಾಡುತ್ತಿರುವ ಸ್ಥಳದಲ್ಲಿ ಪ್ರತಿಭಟನೆ ನಡೆಯುವುದು ಸರಿಯಲ್ಲ. ಪ್ರಧಾನಿಗಳ ವಿರುದ್ಧ ಘೋಷಣೆಗಳನ್ನು ಕೂಗುವಾಗ ನಾನು ಬೂತ್ ನಲ್ಲೇ ನಿಂತಿದ್ದೆ. ಜಗಳ ಹುಟ್ಟುಹಾಕುವುದೇ ಈ ಪ್ರತಿಭಟನೆಯ ಉದ್ದೇಶದಿಂದ ಎಂದನಿಸುತ್ತದೆ’ ಎಂದು ಸುಮಿತ್ ಪಟನಿ ಎಂಬವರು ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಪ್ರತಿಭಟನೆಗೆ ಬಂದ ಕೆಲ ಪ್ರತಿಕ್ರಿಯೆಗಳು
#ವೀಕ್ಷಿಸಿ | ದೆಹಲಿ | AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಯ ಕುರಿತು, ಪ್ರತ್ಯಕ್ಷದರ್ಶಿಯೊಬ್ಬರು ಹೇಳುತ್ತಾರೆ, “ಸುಮಿತ್ ಪಟ್ನಿ ಹೇಳುತ್ತಾರೆ,” ಒಬ್ಬ ಸಂದರ್ಶಕನಾಗಿ, ಅಂತಹ ಪ್ರತಿಭಟನೆಯನ್ನು ನಡೆಸಲು ಇದು ಸರಿಯಾದ ಸ್ಥಳವಲ್ಲ ಎಂದು ನಾನು ಭಾವಿಸುತ್ತೇನೆ. ಇದರಿಂದ ದೇಶಕ್ಕೆ ಕೆಟ್ಟ ಚಿತ್ರಣ ಬರುತ್ತದೆ. ಇದು ಪ್ರತಿಭಟನೆಯ ಸ್ಥಳವಲ್ಲ, ಅಲ್ಲಿ ಭಾರತ… pic.twitter.com/rS7ATRUKGf
– ANI (@ANI) ಫೆಬ್ರವರಿ 20, 2026
#ವೀಕ್ಷಿಸಿ | ದೆಹಲಿ | AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಯ ಕುರಿತು, ಪ್ರತ್ಯಕ್ಷದರ್ಶಿ ಶೀತಲ್ ಹೇಳುತ್ತಾರೆ, “ಇದು ಪ್ರತಿಭಟನೆ ನಡೆಸಲು ವೇದಿಕೆಯಲ್ಲ. AI ಭಾರತ ಮತ್ತು ಅದರ ಭವಿಷ್ಯಕ್ಕಾಗಿ. ಅವರು ಇಲ್ಲಿ ಪ್ರತಿಭಟನೆಯನ್ನು ನಡೆಸಬಾರದು. ಅವರು ಇಲ್ಲಿ ಪ್ರತಿಭಟನೆ ನಡೆಸಬಾರದು. ಅವರು ಅದರ ಘನತೆಯನ್ನು ಅರ್ಥಮಾಡಿಕೊಳ್ಳಬೇಕು. pic.twitter.com/8YNpm80fUw
– ANI (@ANI) ಫೆಬ್ರವರಿ 20, 2026
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್: ಬ್ರೇಕಿಂಗ್ ಭಾರತ್ ಫೋರ್ಸ್
ಆನ್ಲೈನ್ ಪ್ರಚಾರದಿಂದ ಹಿಡಿದು ಭಾರತದ AI ಶೃಂಗಸಭೆಯ ನೆಲದ ಅಡೆತಡೆಗಳವರೆಗೆ, ಕಾಂಗ್ರೆಸ್ ಪಕ್ಷವು ಮತ್ತೊಮ್ಮೆ ಬಹಿರಂಗವಾಗಿದೆ. ರಾಗದ ಅಡಿಯಲ್ಲಿ, ಇದು ವಿರೋಧವಲ್ಲ, ಇದು ರಾಷ್ಟ್ರದ ಉದಯಕ್ಕೆ ಅಡ್ಡಿಯಾಗಿದೆ. #AIS ಶೃಂಗಸಭೆ #ಕಾಂಗ್ರೆಸ್ pic.twitter.com/VA8M2oreiB
— ಕರ್ವಜ್ಞ (@eternalroute) ಫೆಬ್ರವರಿ 20, 2026
ಭಾರತದ ನಾವೀನ್ಯತೆ ಮತ್ತು ಏರಿಕೆಗೆ ಸಾಕ್ಷಿಯಾಗಲು ಜಗತ್ತು ಒಟ್ಟುಗೂಡಿದಾಗ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ದೇಶಭಕ್ತಿಯ ಮೇಲೆ ಅಡ್ಡಿಯನ್ನು ಆರಿಸಿಕೊಳ್ಳುತ್ತದೆ.
ಜಾಗತಿಕ ನಾಯಕರ ಮುಂದೆ ರಾಷ್ಟ್ರದ ಪ್ರತಿಷ್ಠೆಯನ್ನು ಹಾಳುಮಾಡಲು ಅವರು ಪದೇ ಪದೇ ಪ್ರಯತ್ನಿಸುತ್ತಾರೆ. ಅವರಿಗೆ ಭಾರತಕ್ಕಿಂತ ರಾಜಕೀಯವೇ ಮುಖ್ಯ ಎಂಬುದಕ್ಕೆ ಇದು ಸಾಕ್ಷಿ… pic.twitter.com/C5QvrQM4GY
— ಜುಬಿನ್ ಆಶಾರಾ (@zubinashara) ಫೆಬ್ರವರಿ 20, 2026
ಬಹಳಷ್ಟು ಜನರು ಇದೆ ಅಭಿಪ್ರಾಯವನ್ನು ಪುನರುಚ್ಚರಿಸಿದ್ದಾರೆ. ಜಗತ್ತು ಭಾರತದ ಬೆಳವಣಿಗೆ ಕಾಣಲು ಸೇರಿದೆ, ಕಾಂಗ್ರೆಸ್ ಪಕ್ಷವು ಕಲಹ ಹುಟ್ಟುಹಾಕಲು ಅಸಕ್ತವಾಗಿದೆ ಎಂದು ಜುಬಿನ್ ಅಶಾರಾ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಅವರು ವಿಪಕ್ಷದ ಈ ವರ್ತನೆಯನ್ನು ಬಲವಾಗಿ ಖಂಡಿಸಿದ್ದಾರೆ.
ಇದನ್ನೂ ಓದಿ: ಭಾರತ-ಅಮೆರಿಕ ಮಧ್ಯ ವ್ಯಾಪಾರ ಒಪ್ಪಂದ ಏಪ್ರಿಲ್ ನಿಂದ ಚಾಲನೆ ಸಾಧ್ಯತೆ; ಓಮನ್, ಬ್ರಿಟನ್ ಒಪ್ಪಂದಗಳು ಏಪ್ರಿಲ್ ನಲ್ಲೇ?
‘ಕಾಂಗ್ರೆಸ್ನ ಹತಾಶೆ ಮತ್ತು ಅಹಂಕಾರದ ಪ್ರದರ್ಶನ ಇದು. ಮಿಸ್ಟರ್ ರಾಹುಲ್ ಗಾಂಧಿಯವರೆ, ಸರ್ಕಾರವನ್ನು ಗುರಿಯಾಗಿಟ್ಟುಕೊಂಡು ಭಾರತವನ್ನು ಹಿಯಾಳಿಸುವುದು ನಿಮ್ಮ ವಿರೋಧದ ಧ್ವನಿ ಎಂದಾಯಿತು. ನೀವು ಒಂದೆಡೆ ಇತ್ತೀಚಿನ ಟ್ರೆಡ್ ಡೀಲ್ಗಳ ಬಗ್ಗೆ ಸುಳ್ಳುಗಳನ್ನು ಹೇಳುತ್ತಾ, ಭಾರತದ ಅಭಿವೃದ್ಧಿಗೆ ಭಂಗ ತರುತ್ತಿದ್ದೀರಿ. ಇನ್ನೊಂದೆಡೆ ನಿಮ್ಮ ಸೈನಿಕರು ಐ ಸಮಿಟ್ ನಲ್ಲಿ ಬಟ್ಟೆ ಬಿಚ್ಚಿ, 140 ಕೋಟಿ ಜನರಿಗೆ ಮುಜುಗರ ತಂದಿದ್ದಾರೆ. ಈ ಪ್ರತಿಭಟನೆಯು ನಿಮ್ಮ ಹಾಗೂ ನಿಮ್ಮ ಪಕ್ಷದ ದೃಷ್ಟಿಯ ಕೊರತೆಯನ್ನು ಎತ್ತಿ ತೋರಿಸಿದೆ’ ಎಂದು ಪೀಯೂಶ್ ಗೋಯಲ್ ಟ್ವೀಟ್ ಮಾಡಿದ್ದಾರೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ