ಬಿಗ್ಬಾಸ್ ಗೆದ್ದ ಬಳಿಕ ಸತತ ಕಾರ್ಯಕ್ರಮಗಳಿಂದ ಸುಸ್ತಾಗಿರುವ ಗಿಲ್ಲಿ ನಟನಿಗೆ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಭವಿಷ್ಯದ ಬಗ್ಗೆ ಸಲಹೆ ನೀಡಿದ್ದಾರೆ. ನಟನೆ, ನಿರ್ದೇಶನ ಅಥವಾ ಬರವಣಿಗೆಯಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಯೋಚಿಸಲು ಹೇಳಿದ್ದು, ತಮ್ಮ ಸಂಪೂರ್ಣ ಬೆಂಬಲದ ಭರವಸೆ ನೀಡಿದ್ದಾರೆ.
ಬಿಗ್ಬಾಸ್ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿರೋ ಗಿಲ್ಲಿ ನಟ (Bigg Boss Gilli Nata)ಇದೀಗ ಸಿನಿಮಾ ನಾಯಕನಾಗಿಯೂ ಮಿಂಚಿದ್ದಾರೆ. ಬಿಗ್ಬಾಸ್ ಗೆಲುವಿನ ಬಳಿಕ ಇನ್ನಿಲ್ಲದಂತೆ ಕಾರ್ಯಕ್ರಮಗಳು ಇದ್ದು, ಸಕತ್ ಬಿಜಿ ಇದ್ದಾರೆ. ಯಾರಿಗೂ ಇಲ್ಲ ಎನ್ನುವಂತಿಲ್ಲ, ಇಲ್ಲ ಎಂದುಬಿಟ್ಟರೆ ಮತ್ತಷ್ಟು ಕಾಂಟ್ರವರ್ಸಿಗಳು. ಹೀಗಾಗಿ ಬಿಟ್ಟಿದೆ ಗಿಲ್ಲಿ ನಟನ ಸದ್ಯದ ಬದುಕು.

ಆದರೆ, ಇಂಥ ಪ್ರೀತಿ ಎಲ್ಲರಿಗೂ ಸಿಗುವಂಥದ್ದಲ್ಲ. 12 ಸೀಸನ್ಗಳ ಬಿಗ್ಬಾಸ್ನಲ್ಲಿ, ಈ ಪರಿಯ ಪ್ರೀತಿ ಸಿಕ್ಕಿದ್ದು ಬಹುಶಃ ಗಿಲ್ಲಿ ನಟನಿಗೆ ಮಾತ್ರವೇ ಇರಬೇಕು ಎನ್ನುವಷ್ಟರ ಮಟ್ಟಿಗೆ ಸ್ಥಿತಿ ಇದೆ. ಇದೇ ಕಾರಣಕ್ಕೆ ಅದನ್ನು ಅವರು ಮೆಂಟೈನ್ ಮಾಡಲೇಬೇಕು. ಯಾರನ್ನೂ ನೋಯಿಸುವಂತಿಲ್ಲ.

ಇದೀಗ ಅವರ ಭವಿಷ್ಯದ ಬಗ್ಗೆ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಮಾತನಾಡಿದ್ದಾರೆ. ಗಿಲ್ಲಿ ನಟ ನನಗೆ ಬಿಗ್ಬಾಸ್ಗಿಂತ ಮುಂಚೆಯೇ ಗೊತ್ತಿರುವ ವಿಷಯ. ತುಂಬಾ ಟ್ಯಾಲೆಂಟ್ ಇದೆ. ಆತನಲ್ಲಿ ನನಗೆ ತುಂಬಾ ಖುಷಿಯಾಗಿದ್ದು ಏನೆಂದರೆ, ಅವರಿಗೆ ನಿರ್ದೇಶಕ ಆಗುವ ಬಯಕೆ ಇದೆ. ನಮಗೂ ನಿರ್ದೇಶಕರ ಕೊರತೆ ಇದೆ, ಇದೇ ಕಾರಣಕ್ಕೆ ನಿರ್ದೇಶಕ ಆದರೆ ನಮಗೂ ಖುಷಿ. ಆದರೆ ಇದಕ್ಕೂ ಮುನ್ನ ಸ್ಕ್ರಿಪ್ಟ್ ರೈಟಿಂಗೂ ಕಲಿಯುವಂತೆ ಅವರಿಗೆ ಹೇಳಿದ್ದೆ. ಹೂಂ ಅಂದಿದ್ದರು ಎಂದಿದ್ದಾರೆ ತರುಣ್.

ಬಿಗ್ಬಾಸ್ ಮುಗಿದ ಮೇಲೆ ಒಮ್ಮೆ ಸಿಕ್ಕಿದ್ದರು. ತುಂಬಾ ಸುಸ್ತಾಗಿ ಬಿಟ್ಟಿದ್ದೇನೆ. ಎಲ್ಲಿಗೆ ಹೋಗಬೇಕು, ಎಲ್ಲಿಗೆ ಬಿಡಬೇಕು ಎಂದು ತಿಳಿಯುತ್ತಿಲ್ಲ. ಸ್ವಲ್ಪ ಸಮಯವೂ ಸಿಗುತ್ತಿಲ್ಲ. ತುಂಬಾ ಟೈಯರ್ಡ್ ಎನ್ನಿಸುತ್ತಿದೆ ಎಂದರು. ಅದಕ್ಕೆ ನಾನು, ಇನ್ನೊಂದೆರಡು ತಿಂಗಳು ಹೀಗೆ ಇರತ್ತೆ. ಈ ಪ್ರೀತಿ ಯಾರಿಗೂ ಸಿಗಲ್ಲ. ನಿಮಗೆ ಸಿಕ್ಕಿದೆ. ಎಂಜಾಯ್ ಮಾಡು ಎಂದು ಬುದ್ಧಿ ಹೇಳಿದೆ ಎಂದಿದ್ದಾರೆ.

ಅವರಿಗೆ ನಿರ್ದೇಶಕ, ನಟ, ರೈಟರ್ ಇವೆಲ್ಲವುಗಳಲ್ಲಿಯೂ ಟ್ಯಾಲೆಂಟ್ ಇದೆ. ಅದೇ ಕಾರಣಕ್ಕೆ ಓಡಾಟ ಎಲ್ಲಾ ಮುಗಿದ ಮೇಲೆ ಸ್ವಲ್ಪ ದಿನ ಬ್ರೇಕ್ ತಗೊಂಡು ಚೆನ್ನಾಗಿ ಯೋಚನೆ ಮಾಡಿ, ಫ್ರೆಂಡ್ಸ್ ಜೊತೆ ಡಿಸ್ಕಸ್ ಮಾಡಲು ಹೇಳಿದ್ದೇನೆ. ಯಾವ ಫೀಲ್ಡ್ ಆಯ್ದುಕೊಳ್ಳಬೇಕು ಎನ್ನುವ ಬಗ್ಗೆ ಯೋಚನೆ ಮಾಡಿ, ಮುಂದಿನ ಹೆಜ್ಜೆ ಇಡುವಂತೆ ಹೇಳಿದ್ದೇನೆ ಎಂದು ತರುಣ್ ಸುಧೀರ್ ಹೇಳಿದ್ದಾರೆ.

ಅವರು ನಟನೆಗೆ ಬರುವುದಾದರೆ, ನಾನು ನಿರ್ದೇಶನ ಮಾಡುವ ಚಿತ್ರಕ್ಕೆ ಕ್ಯಾರೆಕ್ಟರ್ ಸೂಟ್ ಎನ್ನಿಸಿದರೆ, ಖಂಡಿತ ತೆಗೆದುಕೊಳ್ಳುತ್ತೇನೆ. ಗಿಲ್ಲಿ ನಟ ಮುಂದೆ ಏನು ಹೆಜ್ಜೆ ಇಟ್ಟರೂ ಪರವಾಗಿಲ್ಲ. ಅವರು ಒಂದೇ ಒಂದು ಫೋನ್ ಕಾಲ್ ಮಾಡಿದರೂ ಅವರ ಭವಿಷ್ಯ ಬಗ್ಗೆ ನಾನು ಹೇಳುತ್ತೇನೆ. ಅವರಿಗೆ ಒಳ್ಳೆಯ ಭವಿಷ್ಯವಿದೆ ಎನ್ನುವ ಮೂಲಕ ತರುಣ್ ಸುಧೀರ್ ಗಿಲ್ಲಿ ನಟ ಮತ್ತು ಅವರ ಫ್ಯಾನ್ಸ್ಗೆ ಭರ್ಜರಿ ಗುಡ್ನ್ಯೂಸ್ ಕೊಟ್ಟಿದ್ದಾರೆ.

Source link
Gilli Nataನ ಒಂದೇ ಒಂದು ಫೋನ್ ಕಾಲ್, ಭವಿಷ್ಯವೇ ಬದಲಾಗತ್ತೆ: ನಿರ್ದೇಶಕ ತರುಣ್ ಸುಧೀರ್ ಬಿಗ್ ಸರ್ಪ್ರೈಸ್