ನವದೆಹಲಿ, ಫೆಬ್ರುವರಿ 20: ಪ್ರಧಾನಿ ನರೇಂದ್ರ (ನರೇಂದ್ರ ಮೋದಿ) ಅವರು ಭಾರತ್ ಮಂಟಪದ ಬಳಿಯ ಸೇವಾ ತೀರ್ಥದಲ್ಲಿ ಉದಯೋನ್ಮುಖ ಇಐ ಮತ್ತು ಡೀಪ್ ಟೆಕ್ ಸ್ಟಾರ್ಟಪ್ಗಳ ಸಂಸ್ಥಾಪಕರು ಮತ್ತು ಸಿಐಒ ಮೋದಿ ದುಂಡುಮೇಜಿನ ಸಭೆ ನಡೆಸಿದರು. ಪ್ರಮುಖ ಸೆಕ್ಟರ್‌ಗಳಲ್ಲಿ ದೊಡ್ಡ ಮಟ್ಟದ ಸವಾಲುಗಳಿಗೆ ಪರಿಹಾರ ಹುಡುಕುತ್ತಿರುವ ಸ್ಟಾರ್ಟ್‌ಗಳು ಈ ಸಭೆಯಲ್ಲಿ ಕಂಡುಬಂದವು. ಒಟ್ಟು 16 ಸ್ಟಾರ್ಟಪ್ಗಳ ಸಿಐಒಗಳು ಕಾಣಿಸಿಕೊಂಡಿದ್ದರು. ಸೈಬರ್ ಸೆಕ್ಯೂರಿಟಿ, ಎಥಿಕಲ್ ಎಐ, ಬಾಹ್ಯಾಕಾಶ, ಸಾಮಾಜಿಕ ಸಬಲೀಕರಣ ಇತ್ಯಾದಿ ಕ್ಷೇತ್ರಗಳಲ್ಲಿ ವಿವಿಧ ಎಐ ಪರಿಹಾರಗಳನ್ನು ಒದಗಿಸಲು ನಿರತವಾಗಿರುವ ಕಂಪನಿಗಳಿವು.
ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ಈ ಸ್ಟಾರ್ಟಪ್ಗಳ ಕಾರ್ಯವನ್ನು ಶ್ಲಾಘಿಸಿದರು. ಕ್ಷೇತ್ರದಲ್ಲಿ ಕೃಷಿ ಬೆಳೆ ಉತ್ಪನ್ನ, ರಸಗೊಬ್ಬರ ಬಳಕೆಯನ್ನು ಪರಿವೀಕ್ಷಿಸುವುದು ಸೇರಿದಂತೆ ವಿವಿಧ ಕಾರ್ಯಗಳಿಗೆ ಎಐ ಅನ್ನು ಸರಿಯಾಗಿ ಬಳಸಲಾಗಿದೆ ಎಂದು ಸಿಇಒಗಳ ಜೊತೆ ಪಿಎಂ ಚರ್ಚಿಸಿದ್ದಾರೆ. ಮಾತೃಭಾಷೆಯಲ್ಲಿ ಉನ್ನತ ಶಿಕ್ಷಣವನ್ನು ಹೊಂದಲು ಸಾಧ್ಯವಾಗುತ್ತದೆ
ಇದನ್ನೂ ಓದಿ: ಭಾರತ-ಅಮೆರಿಕ ಮಧ್ಯ ವ್ಯಾಪಾರ ಒಪ್ಪಂದ ಏಪ್ರಿಲ್ ನಿಂದ ಚಾಲನೆ ಸಾಧ್ಯತೆ; ಓಮನ್, ಬ್ರಿಟನ್ ಒಪ್ಪಂದಗಳು ಏಪ್ರಿಲ್ ನಲ್ಲೇ?
ಎಬ್ರಿಡ್ಜ್, ಅದಾಲತ್ ಎಐ, ಬ್ರೈನ್ ಸೈಟ್‌ಎಐ, ಕ್ರೆಡೋ ಎಐ, ಎಕಾ ಕೇರ್, ಗ್ಲೀನ್, ಇನ್ನೋಗಲ್, ಇನ್‌ವಿಡಿಯೋ, ಮೈಕೋ, ಆರಿಜಿನ್, ಪ್ರೋಫೇಜ್, ರೆಸೆನ್, ರುಬ್ರಿಕ್, ಸ್ಯಾಟ್‌ಶೂರ್, ಸೂಪರ್‌ನೋವಾ, ಸೈಫಾ ಐ ಕಂಪನಿಗಳ ಸಿಐಒಗಳು ಮತ್ತು ಸಂಸ್ಥಾಪಕರು ಭಾಗವಹಿಸಿದ್ದರು.
ಜಾಗತಿಕ ಎಐ ದೈತ್ಯರ ಮಧ್ಯೆ ಶೀತಲ ಸಮರ
ಎಐ ಇಂಪ್ಯಾಕ್ಟ್ ಸಮಿತಿಯಲ್ಲಿ ಹಿಂದಿನ ದಿನ (ಗುರುವಾರ) ಗಮನ ಸೆಳೆದ ಮತ್ತೊಂದು ಸಂಗತಿ ಎಂದರೆ ಅದು ಓಪನ್‌ಎಐ ಮತ್ತು ಆಂಥ್ರೋಪಿಕ್ ಕಂಪನಿಗಳ ಸಿಐಒಗಳ ವೈಮನಸ್ಸಿಗೆ ಸಾಕ್ಷ್ಯ ಸಿಕ್ಕಿದೆ. ಜಾಗತಿಕ ಎಐ ದಿಗ್ಗಜರು ಪಿ ಮೋದಿ ಜೊತೆ ವೇದಿಕೆ ಹಂಚಿಕೊಂಡಿದ್ದ ಸಂದರ್ಭದಲ್ಲಿ ಈ ಘಟನೆ ನಡೆಯಿತು. ಪ್ರಧಾನಿ ಮೋದಿ ಜೊತೆ ವೇದಿಕೆಯಲ್ಲಿ ಹತ್ತಾರು ಸಿಇಗಳು ನಿಂತಿದ್ದರು. ಮೋದಿ ಅಕ್ಕಪಕ್ಕದಲ್ಲಿ ಸುಂದರ್ ಪಿಚೈ ಮತ್ತು ಸ್ಯಾಮ್ ಆಲ್ಟ್ಮ್ಯಾನ್ ಇಬ್ಬರು. ಅವರಿಬ್ಬರ ಆ ಎರಡು ಬದಿಗಳಲ್ಲಿ ಇತರರಿದ್ದರು. ಮೋದಿ ಅವರು ಒಗ್ಗಟ್ಟಿನ ಮಂತ್ರದಲ್ಲಿ ಪಿಚೈ ಮತ್ತು ಸ್ಯಾಮ್ ಅವರ ಕೈಗಳಲ್ಲಿ ಹಿಡಿದಿದ್ದರು. ಎಲ್ಲರೂ ಕೂಡ ಪರಸ್ಪರ ಕೈ ಹಿಡಿದು ಮೇಲೆತ್ತಿದರು.
ಇದನ್ನೂ ಓದಿ: ಜಗತ್ತಿನ ಮುಂದೆ ಬೆತ್ತಲಾದ ಕಾಂಗ್ರೆಸ್; ಐ ಸಮಿತಿಯಲ್ಲಿ ಅರೆಬೆತ್ತಲೆ ಕಾಂಗ್ರೆಸ್ ಪ್ರತಿಭಟನೆಗೆ ಹಲವರ ಅಸಮಾಧಾನ
ಈ ವೇಳೆ, ಸ್ಯಾಮ್ ಆಲ್ಟ್‌ಮ್ಯಾನ್ ಅವರು ತಮ್ಮ ಎಡಬದಿಯಲ್ಲಿ ಇದ್ದ ಆಂಥ್ರೋಪಿಕ್ ಸಿಇಒ ಡೇರಿಯೋ ಅಮೋಡೆ ಅವರ ಕೈಹಿಡಿಯಲು ಹಿಂದೇಟು ಹಾಕಿದರು. ಪರಸ್ಪರ ಕೈ ಹಿಡಿಯದೇ ಅವರಿಬ್ಬರೂ ತಮ್ಮ ಕೈ ಮೇಲೆತ್ತಿದರು. ಪಿಎಂ ಮೋದಿ ಅಚಾನಕ್ಕಾಗಿ ಹಿಡಿದಿದ್ದಾರೆ ತನಗೆ ಏನು ಮಾಡಬೇಕೆಂದು ತೋಚಲಿಲ್ಲ ಎಂದು ಓಪನ್ ಎ ಸಿಇಒ ಸ್ಯಾಮ್ ಆಲ್ಟ್ ಮ್ಯಾನ್ ತಮ್ಮ ವರ್ತನೆಗೆ ಸ್ಪಷ್ಟನೆ ನೀಡಿದ್ದಾರೆ.
ಓಪನ್ ಐನಲ್ಲಿ ವೈಸ್ ಪ್ರೆಸಿಡೆಂಟ್ ಆಗಿ ಕೆಲಸ ಮಾಡುತ್ತಿರುವ ವ್ಯಕ್ತಿಗಳು ಸೇರಿ ಆಂಥ್ರೋಪಿಕ್ ಕಂಪನಿಯನ್ನು ಸ್ಥಾಪಿಸಿದ್ದಾರೆ. ಓಪನ್‌ಎಐನ ನೀತಿಗಳನ್ನು ಆಂಥ್ರೊಪಿಕ್ ವಿರೋಧಿಸುತ್ತದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ