ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಭವಿಷ್ಯ ಹೇಳಿದ ಪಾಕ್ ಮಾಜಿ ವೇಗಿ, ಸೆಮಿಫೈಲ್ ಟ್ವಿಸ್ಟ್

ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಭವಿಷ್ಯ ಹೇಳಿದ ಪಾಕ್ ಮಾಜಿ ವೇಗಿ, ಸೆಮಿಫೈಲ್ ಟ್ವಿಸ್ಟ್

ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಭವಿಷ್ಯ ಹೇಳಿದ ಪಾಕ್ ಮಾಜಿ ವೇಗಿ, ಸೆಮಿಫೈಲ್ ಟ್ವಿಸ್ಟ್

ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಭವಿಷ್ಯ ಹೇಳಿದ ಪಾಕ್ ಮಾಜಿ ವೇಗಿ, ಸೂಪರ್ 8 ಹಂತದಲ್ಲಿ ಭಾರತದ ಏನಾಗಲಿದೆ ಅನ್ನೋದನ್ನು ಪಾಕ್ ಮಾಜಿ ವೇಗಿ ಹೇಳಿದ್ದಾರೆ. ಸೆಮಿಫೈನಲ್‌ಗೂ ಮೊದಲು ಟ್ವಿಸ್ಟ್ ಕೊಟ್ಟಿದ್ದಾರೆ.

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸೂಪರ್ 8 ಹಂತಕ್ಕೇರಿದೆ. ಸೂಪರ್ 8 ಹಂತದಲ್ಲಿ ಭಾರತ ತಂಡ ಸೌತ್ ಆಫ್ರಿಕಾ ವಿರುದ್ದ ಹೋರಾಟ ನಡೆಸಲಿದೆ. ಲೀಗ್ ಹಂತದಲ್ಲಿ ಟೀಂ ಇಂಡಿಯಾ ಸೋಲಿಲ್ಲದ ಸರದಾರನಾಗಿ ಟೀಂ ಇಂಡಿಯಾ ಸೂಪರ್ 8 ಹಂತಕ್ಕೆರಿದೆ. ಹಲವು ಮಾಜಿ ಕ್ರಿಕೆಟಿಗರು, ಈ ಬಾರಿಯೂ ಟೀಂ ಇಂಡಿಯಾ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ ಎಂದಿದೆ. ಆದರೆ ಪಾಕಿಸ್ತಾನ ಮಾಜಿ ವೇಗಿ ಹೊಸ ಭವಿಷ್ಯ ನುಡಿದಿದ್ದಾರೆ.

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಹೋರಾಟ ಸೂಪರ್ 8 ಹಂತಕ್ಕೆ ಅಂತ್ಯಗೊಳ್ಳಲಿದೆ ಎಂದು ಪಾಕಿಸ್ತಾನ ಮಾಜಿ ವೇಗಿ ಮೊಹಮ್ಮದ್ ಅಮೀರ್ ಭವಿಷ್ಯ ನುಡಿದಿದ್ದಾರೆ. ಭಾರತ ಸೆಮಿಫೈನಲ್ ಪ್ರವೇಶಿಸುವುದಿಲ್ಲ ಎಂದಿದ್ದಾರೆ. ಭಾರತ ಉತ್ತಮ ಹೋರಾಟ ನೀಡಿದೆ. ಬಲಿಷ್ಠ ತಂಡವಾಗಿ ಹೋರಾಟ ನೀಡಿದೆ. ಆದರೆ ಸೆಮೀಸ್ ಪ್ರವೇಶಿಸಲ್ಲ ಎಂದಿದ್ದಾರೆ.

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ದ ಪಾಕಿಸ್ತಾನ ಮುಖಭಂಗ ಅನುಭವಿಸಿತ್ತು. ಹೀನಾಯ ಸೋಲು ಅನುಭವಿಸಿದ ನೋವು ಇನ್ನೂ ಮುಗಿದಿಲ್ಲ. ಮೊಹಮ್ಮದ್ ಅಮೀರ್ ಈ ಸೋಲಿನ ನೋವಿನ ಬೆನ್ನಲ್ಲೇ ಮತ್ತೆ ಭಾರತ ವಿರುದ್ಧ ಕಿಡಿ ಕಾರಿದ್ದಾರೆ. ಭಾರತ ಸೆಮಿಫೈನಲ್ ಪ್ರವೇಶ ಮಾಡಲ್ಲ ಎಂದು ಭವಿಷ್ಯ ಹೇಳುವ ಮೂಲಕ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಭಾರತ ತಂಡ ಸೂಪರ್ 8 ಹಂತದ ಮೊದಲ ಪಂದ್ಯವನ್ನು ಫೆ 22ರಂದು ಸೌತ್ ಆಫ್ರಿಕಾ ವಿರುದ್ಧ ಆಡಲಿದೆ. ಇನ್ನು ಫೆಬ್ರವರಿ 26ರಂದು ಜಿಂಬಾಬ್ವೆ ವಿರುದ್ಧ ಹೋರಾಟ ನಡೆಸಲಿದೆ. ಮಾರ್ಚ್ 1 ರಂದು ವೆಸ್ಟ್ ಇಂಡೀಸ್ ವಿರುದ್ಧ ಹೋರಾಟ ನಡೆಸಲಿದೆ.

ಮಾರ್ಚ್ 4 ರಿಂದೆ ಸೆಮಿಫೈನಲ್ ಹೋರಾಟ ನಡೆಯಲಿದೆ. ಮೊದಲ ಸೆಮಿಫೈನಲ್ ಪಂದ್ಯ ಮಾರ್ಚ್ 4 ರಂದು ನಡೆಯಲಿದೆ. ಮಾರ್ಚ್ 5 ರಂದು ಎರಡನೆ ಸೆಮಿಫೈನಲ್ ನಡೆಯಲಿದೆ. ಇನ್ನು ಮಾರ್ಚ್ 8 ರಂದು ಫೈನಲ್ ಪಂದ್ಯ ನಡೆಯಲಿದೆ.

Source link

Leave a Reply

Your email address will not be published. Required fields are marked *