ನಾನು ಬಾಲ್ಡಿ ಆಗಿದ್ರೂ ಸೂಪರ್​ ಹೆಂಡ್ತಿನೇ ಬೇಕು ಎಂದ್ರೆ ಸಿನಿಮಾ ಸಕ್ಸಸ್​ ಆಗಲ್ಲ: ಶೆಟ್ರ ಪಂಚ್​ಗೆ ಉಪ್ಪಿ-ಶಿವಣ್ಣ ಫಿದಾ

ನಾನು ಬಾಲ್ಡಿ ಆಗಿದ್ರೂ ಸೂಪರ್​ ಹೆಂಡ್ತಿನೇ ಬೇಕು ಎಂದ್ರೆ ಸಿನಿಮಾ ಸಕ್ಸಸ್​ ಆಗಲ್ಲ: ಶೆಟ್ರ ಪಂಚ್​ಗೆ ಉಪ್ಪಿ-ಶಿವಣ್ಣ ಫಿದಾ

ನಾನು ಬಾಲ್ಡಿ ಆಗಿದ್ರೂ ಸೂಪರ್​ ಹೆಂಡ್ತಿನೇ ಬೇಕು ಎಂದ್ರೆ ಸಿನಿಮಾ ಸಕ್ಸಸ್​ ಆಗಲ್ಲ: ಶೆಟ್ರ ಪಂಚ್​ಗೆ ಉಪ್ಪಿ-ಶಿವಣ್ಣ ಫಿದಾ

ಕಡಿಮೆ ಬಜೆಟ್‌ನಲ್ಲಿ ಸತತ ಹಿಟ್ ಚಿತ್ರಗಳನ್ನು ನೀಡುತ್ತಿರುವ ರಾಜ್ ಬಿ. ಶೆಟ್ಟಿ ಅವರ ಯಶಸ್ಸಿನ ರಹಸ್ಯವನ್ನು ಉಪೇಂದ್ರ ಮತ್ತು ಶಿವರಾಜ್‌ಕುಮಾರ್ ಅವರೇ ಕೇಳಿದ್ದಾರೆ.  ರಾಜ್ ಶೆಟ್ಟಿ ತಮ್ಮ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ.

ಕಡಿಮೆ ಬಜೆಟ್​ನಲ್ಲಿ ಸಿನಿಮಾ ಒಂದು ಹೇಗೆ ಚಿಂದಿ ಉಡಾಯಿಸಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತದ್ದು ಸು ಫ್ರಂ ಸೋ. ರಾಜ್ ಬಿ ಶೆಟ್ಟಿ (Raj B Shetty) ಅವರ ಈ ಚಿತ್ರ ನಿರೀಕ್ಷೆಗೂ ಮೀರಿ ಗಳಿಕೆ ಮಾಡಿದೆ. ಇತರ ಭಾಷೆಗಳಲ್ಲಿಯೂ ಚಿತ್ರಕ್ಕೆ ಸಕರ್​ ರೆಸ್ಪಾನ್ಸ್ ಸಿಗುತ್ತಿದೆ. ಭಾರಿ ಸದ್ದು ಮಾಡುತ್ತಿದೆ. ಕನ್ನಡದಲ್ಲಿ ಇನ್ನೂ ಭರ್ಜರಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರವನ್ನು ವಿವಿಧ ಭಾಷೆಗಳಲ್ಲಿಯೂ ಡಬ್​ ಮಾಡಲಾಗಿದೆ.

ಇದಕ್ಕೂ ಮುನ್ನ ಒಂದು ಮೊಟ್ಟೆಯ ಕಥೆ, ಗರುಡ ಗಮನ ಸೇರಿದಂತೆ ಕಡಿಮೆ ಬಜೆಟ್​ನಲ್ಲಿ ರಾಜ್​ ಶೆಟ್ಟಿ ಮಾಡಿದ್ದ ಚಿತ್ರಗಳು ಸಕ್ಸಸ್​ ಮೇಲೆ ಸಕ್ಸಸ್​ ಕಂಡು, ಸಿನಿಮಾ ಇಂಡಸ್ಟ್ರಿಯನ್ನೇ ಕುತೂಹಲಕ್ಕೆ ತಳ್ಳಿರುವುದು ಇದೆ. ಇದೀಗ ರಾಜ್​ ಅವರು ಮಾಲಿವುಡ್ (Mollywood)ನಲ್ಲೂ ಮಿಂಚಿದ್ದಾರೆ. ಬಾಲಿವುಡ್ ಮತ್ತು ಕಾಲಿವುಡ್ ಮಾತ್ರ ಇತ್ತು. ಆದರೆ ಇದೀಗ ಪಾಕೆಟ್ ನಾವೆಲ್ ಎನ್ನುವ ಕಾಲಿವುಡ್​ನಲ್ಲಿ ನಟಿಸಿದ್ದಾರೆ.

ಇಷ್ಟೆಲ್ಲಾ ಸಕ್ಸಸ್​ ಗಳಿಸ್ತಿರೋ ರಾಜ್​ ಶೆಟ್ಟಿ ಅವರ ಸೀಕ್ರೇಟ್​ ಏನು ಎನ್ನುವ ಬಗ್ಗೆ ಖುದ್ದು ಸ್ಟಾರ್​ ನಟರಾದ ಉಪೇಂದ್ರ ಮತ್ತು ಶಿವರಾಜ್​ಕುಮಾರ್​ ಅವರಿಗೂ ಕುತೂಹಲ ತಂದಿದೆ ಎನ್ನುವುದಕ್ಕೆ ಒಂದು ವಿಡಿಯೋ ಸಾಕ್ಷಿಯಾಗಿದೆ. suddimanekannada ಇನ್​ಸ್ಟಾಗ್ರಾಮ್​ನಲ್ಲಿ ಈ ಸಂದರ್ಶವನ್ನು ಶೇರ್​ ಮಾಡಲಾಗಿದೆ. ಇದರಲ್ಲಿ ಉಪೇಂದ್ರ ಅವರು, ಇಂಥ ಹಿಟ್​ ಚಿತ್ರಗಳನ್ನು ಕಡಿಮೆ ಬಜೆಟ್​ನಲ್ಲಿ ಕೊಡಲು ಹೇಗೆ ಸಾಧ್ಯವಾಯ್ತು ಎಂದು ರಾಜ್​ ಶೆಟ್ಟಿ ಅವರನ್ನು ಪ್ರಶ್ನಿಸಿದ್ದಾರೆ. ನೀವು ಸಿಂಪಲ್ ಕಥೆಯನ್ನು ಜನರಿಗೆ ತಲುಪಿಸುವ ರೀತಿ, ನಿಮ್ಮ ಸ್ಟ್ರಾಟಜಿ ಗುಟ್ಟು ಹೇಳಿ ಎಂದಿದ್ದಾರೆ.

ಅದಕ್ಕೆ ರಾಜ್​ ಬಿ.ಶೆಟ್ಟಿಯವರು ನಾವು ಯಾವುದನ್ನು ಗ್ರೇಟ್​ ಮಾಡಬೇಕು ಎನ್ನೋ ಹಟದಿಂದ ಮಾಡಿದರೆ ಅಲ್ಲಿ ಇಗೋ ಬರುತ್ತದೆ. ಕುವೆಂಪು, ಶಿವರಾಮ್​ ಕಾರಂತ್​ ಅವರು ಯಾವತ್ತಿಗೂ ತಾವು ಗ್ರೇಟ್​ ಆಗಬೇಕು ಎಂದು ಬರೆದಿಲ್ಲ. ಆದರೆ ಅವರು ಗ್ರೇಟ್​ ಆದರು. ಅದನ್ನೇ ನಾವು ಅಳವಡಿಸಿಕೊಳ್ಳಬೇಕು ಎಂದಿದ್ದಾರೆ. ಆದರೆ ನಾವು ಯಾವುದನ್ನೋ, ಯಾರನ್ನೋ ಮೆಚ್ಚಿಸಲು, ಅದನ್ನು ಗ್ರೇಟ್​ ಮಾಡಲು ಹೋಗಿ ಎಡವ್ತಾ ಇದ್ದೇವೆ ಎಂದಿದ್ದಾರೆ.

ನನ್ನೊಳಗಿನ ಹುಡುಕಾಟವೇ ನನ್ನ ಒಂದು ಮೊಟ್ಟೆಯ ಕಥೆಗೆ ಪ್ರೇರೇಪಣೆ ಆಯಿತು. ನಾವು ಸಾಮಾನ್ಯವಾಗಿ ನನ್ನ ತಲೆಯಲ್ಲಿ ಕೂದಲಿಲ್ಲ ಅಂದ್ರೂ ಸ್ಮಾರ್ಟ್​ ಆಗಿರೋ ಹುಡುಗಿ ಬೇಕು ಅಂತೇವೆ. ಏಕೆಂದ್ರೆ ನಮ್ಮ ಹೆಂಡ್ತಿಯನ್ನು ಸಮಾಜಕ್ಕೆ ಟ್ರೋಫಿ ರೂಪದಲ್ಲಿ ತೋರಿಸಲು ಬಯಸ್ತೇವೆ. ಇದ್ಯಾಕೆ ಈ ರೀತಿ ಮನಸ್ಥಿತಿ ಎನಿಸಿಯೇ ಆ ಸಿನಿಮಾ ಮಾಡಿದೆ ಎಂದಿದ್ದಾರೆ.

Garuda Gamana Vrishabha Vahana (ಗರುಡ ಗಮನ ವೃಷಭ ವಾಹನ) ಚಿತ್ರ ಮಾಡುವಾಗ ಒಂದು ಮೊಟ್ಟೆಯ ಕಥೆ ಹಿಟ್ ಆಗಿತ್ತು. ಯಶಸ್ಸಿಗೆ ಸಾವಿರ ತಂದೆ ಎನ್ನೋ ಹಾಗೆ ಹಲವರು ಅದರ ಯಶಸ್ಸನ್ನು ಪಡೆದರು. ಇದ್ಯಾಕೆ ಹೀಗೆ ಎಂದು ನನಗೆ ಅನ್ನಿಸಿತು. ಆ ಸಂದರ್ಭದಲ್ಲಿ ಇಬ್ಬರು ಗ್ಯಾಂಗ್​ಸ್ಟರ್​ ಬೆಳೆದು ಒಟ್ಟಿಗೇ ಇರ್ತಾರೆ, ಆಮೇಲೆ ಇದೇ ಅವರಿಂದ ದೂರ ಹೋಗ್ತಾರೆ. ಇದ್ಯಾಕೆ ಎನ್ನುವ ಉತ್ತರ ಸಿಗಲ್ಲ. ನಾವು ಏನು ಹುಡುತ್ತೇವೋ ನಮಗೆ ಗೊತ್ತಿರಲಿಲ್ಲ. ಅದರ ಪ್ರತಿಫಲ ಈ ಚಿತ್ರವಾಯ್ತು,ಅದು ಯಶಸ್ಸು ಪಡೆಯಿತು ಎಂದಿದ್ದಾರೆ.

ಹುಡುಕಾಟದಿಂದ ಕಥೆ ಬರಬೇಕು, ಯೋಚನೆಯಿಂದ ಅಲ್ಲ ಎಂದಾಗ ಉಪೇಂದ್ರ ಅವರು ಎರಡರ ವ್ಯತ್ಯಾಸ ಕೇಳಿದರು. ಯೋಚನೆ ಹೊರಗಡೆಯಿಂದ ಬರುತ್ತದೆ, ಹುಡುಕಾಟ ಒಳಗಿನಿಂದ ಬರುತ್ತದೆ ಎಂದಾಗ ಉಪ್ಪಿ ಮತ್ತು ಶಿವರಾಜ್​ ಕುಮಾರ್​ ಇಬ್ಬರೂ ಫಿದಾ ಆದರು. ರಾಜ್​ ಬಿ.ಶೆಟ್ಟಿ ಅವರ ಯಶಸ್ಸು ಅಲ್ಲಿಯೇ ಅನಾವರಣಗೊಂಡಿತು.

Source link

Leave a Reply

Your email address will not be published. Required fields are marked *