‘ಆಲ್ಫಾ’ ಸಿನಿಮಾದಲ್ಲಿ ಕಾರ್ತಿಕ್ ಮಹೇಶ್ (ಕಾರ್ತಿಕ್ ಮಹೇಶ್) ಅವರು ನೆಗೆಟಿವ್ ಪಾತ್ರ ಮಾಡಿದ್ದಾರೆ. ಬಿಗ್ ಬಾಸ್ ಶೋ ಗೆದ್ದ ಅವರ ಸಿನಿಮಾಗಳಲ್ಲಿ ಬ್ಯೂಸಿ ಆಗಿದ್ದಾರೆ. ಅವರ ಹೊಸ ಸಿನಿಮಾ ನೋಡಲು ಸ್ನೇಹಿತರು ಬಂದಿದ್ದಾರೆ. ತನಿಷಾ ಕುಪ್ಪಂಡ, ನಮ್ರತಾ ಗೌಡ ಮುಂತಾದವರು ಬಂದು ‘ಆಲ್ಫಾ’ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಕಾರ್ತಿಕ್ ಮಹೇಶ್ ಮಾಡಿರುವ ವಿಲನ್ ಪಾತ್ರ ತನಿಷಾ ಅವರಿಗೆ ಸಖತ್ ಇಷ್ಟವಾಗಿದೆ. ‘ನಾನು ಈ ಸಿನಿಮಾ ನೋಡೋಕೆ ಬಂದಿದ್ದೆ ಕಾರ್ತಿಕ್ ಮಹೇಶ್ ಅವರಿಗಾಗಿ. ಈವರೆಗೂ ನಾವು ಅವರನ್ನು ಕ್ಯೂಟ್ ಆಗಿ ನೋಡಿದ್ದೆವು. ಆದರೆ ಈಗ ಅವರು ವಿಲನ್ ಆಗಿರುವುದು ನನಗೆ ಖುಷಿಯಾಗಿದೆ. ಅವರನ್ನು ಈ ರೀತಿ ನೋಡಿದ ಬಳಿಕ ನಮ್ಮ ಕನ್ನಡ ಚಿತ್ರರಂಗಕ್ಕೆ ಒಬ್ಬ ಹೊಸ ವಿಲನ್ ಹುಟ್ಟಿಕೊಂಡರು’ ಎಂದು ಹೇಳಿದರು ತನಿಷಾ ಕುಪ್ಪಂಡ (ತನಿಶಾ ಕುಪ್ಪಂಡ) ಅವರು ಹೇಳಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.