
ಈ ದಿನ ರಾಮದೇವರ ದೇವಸ್ಥಾನಕ್ಕೆ ಹಣ್ಣನ್ನು ನೈವೇದ್ಯಕ್ಕೆ ನೀಡಿ. ಇದರಿಂದ ವಿರಸಗಳು ದೂರವಾಗಿ ಸಾಮರಸ್ಯ ಮೂಡುತ್ತದೆ. ಸರ್ಕಾರಿ ಕೆಲಸಗಳು ವಿಳಂಬವಾಗುತ್ತಾ ಇದ್ದಲ್ಲಿ ಅದನ್ನು ಪೂರ್ಣಗೊಳಿಸಲು ಸಹಾಯವಾಗುತ್ತದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):
ಈ ದಿನ ಕೆಲಸ- ಕಾರ್ಯಗಳಲ್ಲಿ ಒಂದು ಬಗೆಯ ನಿರಾಸಕ್ತಿಯನ್ನು ಕಾಡಲಿದೆ. ನಿರ್ದಿಷ್ಟವಾಗಿ ಹೇಳಬೇಕು ಅಂದರೆ ವೈರಾಗ್ಯವು ನಿಮ್ಮನ್ನು ಆವರಿಸಲಿದೆ. ಕೃಷಿಯಲ್ಲಿ ತೊಡಗಿಸಿಕೊಂಡವರಿಗೆ ಆದಾಯದಲ್ಲಿ ಇಳಿಕೆ ಆಗುವ ಸೂಚನೆ. ಅಥವಾ ಒಟ್ಟು ಮೊತ್ತವನ್ನು ಅಂತಿಮಗೊಳಿಸಿದ ಅವರು ಅಷ್ಟು ಹಣವನ್ನು ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಬಹುದು.
ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):
ಮನೆಯ ಕೆಲಸಗಳನ್ನು ಮಾಡುತ್ತಿರುವವರಿಗೆ ಬಹಳ ಸಂತೋಷ- ಸಮಾಧಾನ ದೊರೆಯುವಂಥ ದಿನ ಇದಾಗಿದೆ. ಹೋಮ್ ಥಿಯೇಟರ್, ಇಂಟಿರೀಯರ್ ಸೇರಿದಂತೆ ನೀವು ಬಹಳ ಸಮಯದಿಂದ ಬಯಸುತ್ತಿದ್ದ ಕೆಲವು ಕೆಲಸಗಳನ್ನು ಮಾಡಿದ್ದರಿಂದ ಅವರಿಗೆ ಖುಷಿಯಾಗಿದೆ. ಇನ್ನು ನಿಮ್ಮ ಸೋದರ- ಸೋದರಿಯರ ಜೊತೆ ಇರುವಂಥ ಭಿನ್ನಾಭಿಪ್ರಾಯವನ್ನು ದೂರ ಮಾಡಿಕೊಳ್ಳುವ ಸಾಧ್ಯತೆ ಇದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):
ನಿಮ್ಮಲ್ಲಿ ಯಾರಿಗೆ ಬೆನ್ನು ನೋವು, ಮಧುಮೇಹ ಅಥವಾ ಹೊಟ್ಟೆಗೆ ಅನಾರೋಗ್ಯ ಕಾಡುತ್ತಿದ್ದರೆ ಅದಕ್ಕೆ ಸೂಕ್ತ ವೈದ್ಯೋಪಚಾರಗಳು ದೊರೆಯಲಿವೆ. ಯೂಟ್ಯೂಬರ್ ಗಳು ಇದ್ದಲ್ಲಿ ವೃತ್ತಿಗೆ ಬೇಕಾದಂತಹ ಸಲಕರಣೆಗಳನ್ನು ಖರೀದಿಸಲು ಹಣವನ್ನು ಪಡೆದುಕೊಳ್ಳಲು ಅಥವಾ ನಿಮ್ಮಲ್ಲಿ ಖರೀದಿಯನ್ನೇ ಮಾಡುವ ಸಾಧ್ಯತೆಗಳಿವೆ.
ಲೇಖನ- ಸ್ವಾತಿ ಎನ್.ಕೆ.