Headlines

ಟಿ20 ವಿಶ್ವಕಪ್: ಇಂದಿನಿಂದ ಸೂಪರ್‌-8, ಮೊದಲ ಪಂದ್ಯದಲ್ಲಿ ಪಾಕ್‌ vs ಕಿವೀಸ್‌ ಫೈಟ್ | T20 World Cup 2026 Super 8 Stage Begins Today Pakistan Vs New Zealand Clash In Colombo Kvn

ಟಿ20 ವಿಶ್ವಕಪ್: ಇಂದಿನಿಂದ ಸೂಪರ್‌-8, ಮೊದಲ ಪಂದ್ಯದಲ್ಲಿ ಪಾಕ್‌ vs ಕಿವೀಸ್‌ ಫೈಟ್ | T20 World Cup 2026 Super 8 Stage Begins Today Pakistan Vs New Zealand Clash In Colombo Kvn



ಟಿ20 ವಿಶ್ವಕಪ್: ಇಂದಿನಿಂದ ಸೂಪರ್‌-8, ಮೊದಲ ಪಂದ್ಯದಲ್ಲಿ ಪಾಕ್‌ vs ಕಿವೀಸ್‌ ಫೈಟ್ | T20 World Cup 2026 Super 8 Stage Begins Today Pakistan Vs New Zealand Clash In Colombo Kvn

ಟಿ20 ವಿಶ್ವಕಪ್‌ನ ಗುಂಪು ಹಂತ ಮುಗಿದಿದ್ದು, ಶನಿವಾರದಿಂದ ಸೂಪರ್‌-8 ಪಂದ್ಯಗಳು ಆರಂಭವಾಗಲಿವೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಸೆಣಸಾಡಲಿದ್ದು, ಮತ್ತೊಂದೆಡೆ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ಒಮಾನ್ ವಿರುದ್ಧ ಗೆದ್ದು ಟೂರ್ನಿಯಿಂದ ಹೊರಬಿದ್ದಿದೆ.

ಕೊಲಂಬೊ: ಈ ಬಾರಿ ಟೂರ್ನಿಯಲ್ಲಿ ಗುಂಪು ಹಂತದ ಪಂದ್ಯಗಳು ಕೊನೆಗೊಂಡಿದ್ದು, ಶನಿವಾರ ಸೂಪರ್‌-8 ಹಂತದ ಪಂದ್ಯಗಳು ಆರಂಭಗೊಳ್ಳಲಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ಸೆಣಸಾಡಲಿವೆ.

ಗುಂಪು ಹಂತದಲ್ಲಿ 20 ತಂಡಗಳಿದ್ದವು. 12 ತಂಡಗಳು ಹೊರಬಿದ್ದಿದ್ದು, ಎಲ್ಲಾ 4 ಗುಂಪಿನ ಅಗ್ರ-2 ತಂಡಗಳು ಸೂಪರ್‌-8 ಹಂತ ಪ್ರವೇಶಿಸಿವೆ. ಈ ಹಂತದಲ್ಲಿ ಪ್ರತಿ ತಂಡಗಳು 3 ಪಂದ್ಯಗಳನ್ನಾಡಲಿದೆ. ಗುಂಪು ಹಂತದಲ್ಲಿ ‘ಎ’ ಗುಂಪಿನಲ್ಲಿದ್ದ ಪಾಕ್‌ ಆಡಿರುವ 4 ಪಂದ್ಯಗಳಲ್ಲಿ 3ರಲ್ಲಿ ಗೆದ್ದು 2ನೇ ಸ್ಥಾನಿಯಾಗಿತ್ತು. ನ್ಯೂಜಿಲೆಂಡ್‌ ಕೂಡಾ 4ರ ಪೈಕಿ 3ರಲ್ಲಿ ಜಯಗಳಿಸಿದ್ದು, 2ನೇ ಸ್ಥಾನಿಯಾಗಿ ಸೂಪರ್‌-8 ಪ್ರವೇಶಿಸಿವೆ. ಈ ತಂಡಗಳು ಗುಂಪು-2ರಲ್ಲಿ ಇಂಗ್ಲೆಂಡ್‌, ಶ್ರೀಲಂಕಾ ಜೊತೆ ಸ್ಥಾನ ಗಿಟ್ಟಿಸಿಕೊಂಡಿವೆ. ಮತ್ತೊಂದು ಗುಂಪಿನಲ್ಲಿ ಭಾರತ, ಜಿಂಬಾಬ್ವೆ, ವಿಂಡೀಸ್‌, ದಕ್ಷಿಣ ಆಫ್ರಿಕಾ ತಂಡಗಳಿವೆ.

ಸೂಪರ್ 8 ಹಂತದ ಪ್ರತಿ ಗುಂಪಿನಲ್ಲಿ ತಂಡವೊಂದು ಕನಿಷ್ಠ ಎರಡು ಗೆಲುವು ದಾಖಲಿಸಿದರೆ ಬಹುತೇಕ ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. ಹೀಗಾಗಿ ಸೂಪರ್-8 ಹಂತದ ಪ್ರತಿ ಪಂದ್ಯವು ಎಲ್ಲಾ ತಂಡಗಳಿಗೆ ಸಾಕಷ್ಟು ಮಹತ್ವದ್ದೆನಿಸಿದ್ದು, ಜಿದ್ದಾಜಿದ್ದಿನ ಪೈಪೋಟಿಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ.

ಪಂದ್ಯ: ಸಂಜೆ 7 ಗಂಟೆಗೆ

ಆಸ್ಟ್ರೇಲಿಯಾ ಗೆಲುವಿನ ವಿದಾಯ

ಪಲ್ಲೆಕೆಲೆ: ಮಾಜಿ ಚಾಂಪಿಯನ್‌ ಆಸ್ಟ್ರೇಲಿಯಾ ಈ ಬಾರಿ ಟಿ20 ವಿಶ್ವಕಪ್‌ಗೆ ಗೆಲುವಿನೊಂದಿಗೆ ವಿದಾಯ ಹೇಳಿದೆ. ಶುಕ್ರವಾರ ಒಮಾನ್‌ ವಿರುದ್ಧ ಪಂದ್ಯದಲ್ಲಿ ಆಸೀಸ್‌ 9 ವಿಕೆಟ್‌ ಭರ್ಜರಿ ಗೆಲುವು ಸಾಧಿಸಿತು. ಆಡಿದ 4 ಪಂದ್ಯಗಳ ಪೈಕಿ 2ರಲ್ಲಿ ಗೆದ್ದ ತಂಡ ‘ಬಿ’ ಗುಂಪಿನಲ್ಲಿ 3ನೇ ಸ್ಥಾನಿಯಾಯಿತು. ಒಮಾನ್‌ ಎಲ್ಲಾ 4 ಪಂದ್ಯಗಳಲ್ಲೂ ಸೋತು ಕೊನೆ ಸ್ಥಾನಿಯಾಗಿ ಅಭಿಯಾನ ಕೊನೆಗೊಳಿಸಿತು.

ಮೊದಲು ಬ್ಯಾಟ್‌ ಮಾಡಿದ ಒಮಾನ್‌ 16.2 ಓವರ್‌ಗಳಲ್ಲಿ 104 ರನ್‌ಗೆ ಆಲೌಟಾಯಿತು. ವಾಸಿಂ ಅಲಿ(32) ಹೊರತುಪಡಿಸಿ ಬೇರೆ ಯಾರೂ 20ಕ್ಕಿಂತ ಹೆಚ್ಚು ರನ್‌ ಗಳಿಸಲಿಲ್ಲ. ಆ್ಯಡಂ ಝಾಂಪ ದಾಳಿಗೆ ಕುಸಿದ ತಂಡ ರನ್‌ ಗಳಿಸಲು ಪರದಾಡಿತು. ಝಾಂಪ 21 ರನ್‌ಗೆ 4 ವಿಕೆಟ್‌ ಕಿತ್ತರೆ, ಕ್ಷೇವಿಯರ್‌ ಬಾರ್ಟ್ಲೆಟ್‌ ಹಾಗೂ ಮ್ಯಾಕ್ಸ್‌ವೆಲ್‌ ತಲಾ 2 ವಿಕೆಟ್‌ ಪಡೆದರು.

ಸುಲಭ ಗುರಿ ಬೆನ್ನತ್ತಿ ಗೆದ್ದ ಕಾಂಗರೂ ಪಡೆ

ಸುಲಭ ಗುರಿಯನ್ನು ಆಸ್ಟ್ರೇಲಿಯಾ ಕೇವಲ 9.4 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟದಲ್ಲಿ ಬೆನ್ನತ್ತಿ ಗೆದ್ದಿತು. ನಾಯಕ ಮಿಚೆಲ್‌ ಮಾರ್ಷ್‌ 33 ಎಸೆತಗಳಲ್ಲಿ ಔಟಾಗದೆ 64 ರನ್‌ ಸಿಡಿಸಿದರೆ, ಟ್ರ್ಯಾವಿಸ್‌ ಹೆಡ್‌ 19 ಎಸೆತಕ್ಕೆ 32 ರನ್‌ ಬಾರಿಸಿದರು.

ಸ್ಕೋರ್: ಒಮಾನ್‌ 16.2 ಓವರ್‌ನಲ್ಲಿ 104/10 (ವಾಸಿಂ 32, ಝಾಂಪ 4-21, ಮ್ಯಾಕ್ಸ್‌ವೆಲ್‌ 2-13), ಆಸ್ಟ್ರೇಲಿಯಾ 9.4 ಓವರ್‌ಗಳಲ್ಲಿ 108/1 (ಮಾರ್ಷ್‌ ಔಟಾಗದೆ 64, ಹೆಡ್‌ 32, ಶಕೀಲ್‌ 1-29) ಪಂದ್ಯಶ್ರೇಷ್ಠ: ಆ್ಯಡಂ ಝಾಂಪ



Source link

Leave a Reply

Your email address will not be published. Required fields are marked *