T20 ವಿಶ್ವಕಪ್ 2026: T20 ನಿಂದ ಮೊದಲ ಸುತ್ತಿನ ಪಂದ್ಯಗಳು ನಡೆಯುತ್ತಿವೆ. ಆಟದ ಹಂತದಲ್ಲಿ ಕಣಕ್ಕಿಳಿದ 20 ತಂಡಗಳಲ್ಲಿ 12 ತಂಡಗಳು ಮೊದಲ ಸುತ್ತಿನಲ್ಲೇ ನಿರ್ಗಮಿಸಿದೆ. ಇನ್ನುಳಿದ 8 ತಂಡಗಳು ಸೂಪರ್-8 ಸುತ್ತಿನಲ್ಲಿ ಕಣಕ್ಕಿಳಿಯಲಿವೆ.
ಸೂಪರ್-8 ಸುತ್ತಿನ ಗ್ರೂಪ್-ಎ ನಲ್ಲಿ, ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಝಿಂಬಾಬ್ವೆ ತಂಡಗಳು ಭಾರತಿವೆ. ಈ ತಂಡಗಳು ತಲಾ 3 ಪಂದ್ಯಗಳನ್ನಾಡಲಿದೆ. ಅಂದರೆ ಭಾರತ ತಂಡವು ಉಳಿದ ಮೂರು ತಂಡಗಳ ವಿರುದ್ಧ ಒಂದೊಂದು ಪಂದ್ಯಗಳನ್ನು ಆಡಲಿದೆ.
ಇನ್ನು ಗ್ರೂಪ್-ಬಿ ನಲ್ಲಿ ಕಾಣಿಸಿಕೊಂಡಿರುವುದು ನ್ಯೂಜಿಲೆಂಡ್, ಇಂಗ್ಲೆಂಡ್, ಪಾಕಿಸ್ತಾನ್ ಮತ್ತು ಶ್ರೀಲಂಕಾ. ಈ ತಂಡಗಳು ಕೂಡ ತಲಾ ಮೂರು ಪಂದ್ಯಗಳನ್ನಾಡಲಿದೆ. ಈ ಎಲ್ಲಾ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದೆ. ಅತ್ತ ಗ್ರೂಪ್-ಎ ತಂಡಗಳ ಪಂದ್ಯಗಳಿಗೆ ಭಾರತ ಆತಿಥ್ಯವಹಿಸಲಿದೆ.
ವಿಶೇಷ ಎಂದರೆ ಗ್ರೂಪ್-ಎ ನಲ್ಲಿ ಸ್ಥಾನ ಪಡೆದಿರುವ 4 ತಂಡಗಳು ಒಂದೇ ಒಂದು ಸೋಲು ಕಾಣದೇ ದ್ವಿತೀಯ ಸುತ್ತಿಗೆ ಪ್ರವೇಶಿಸಿದೆ. ಅಂದರೆ ಭಾರತ, ಸೌತ್ ಆಫ್ರಿಕಾ, ಝಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ಮೊದಲ ಸುತ್ತಿನಲ್ಲಿ ಒಂದೇ ಒಂದು ಮ್ಯಾಚ್ ಸೋತಿಲ್ಲ. ಇದೀಗ ಸೋಲಿಲ್ಲದ ಸರದಾರರಾಗಿ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ ಈ ಎಲ್ಲಾ ತಂಡಗಳು ಗುಂಪು-ಎ ನಲ್ಲೇ ಕಾಣಿಸಿಕೊಂಡಿದೆ.
ಹೀಗಾಗಿ ದ್ವಿತೀಯ ಸುತ್ತಿನಲ್ಲಿ ಗ್ರೂಪ್-ಎ ತಂಡಗಳ ನಡುವೆ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು. ಅತ್ತ ಗ್ರೂಪ್-ಬಿ ನಲ್ಲೂ ಬಲಿಷ್ಠ ತಂಡಗಳೇ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಸೂಪರ್-8 ಸುತ್ತಿನಲ್ಲಿ ರಣರೋಚಕ ಹೋರಾಟವನ್ನು ನಿರೀಕ್ಷಿಸಬಹುದು. ಈ ರೋಚಕ ಹೋರಾಟದ ಮೂಲಕ ಸೆಮಿಫೈನಲ್ ಗೇರುವ 4 ತಂಡಗಳು ಕಾದು ನೋಡೋಣ.




