Headlines

Bengaluru: ಪಂಚಗಂಗಾ ಎಕ್ಸ್‌ಪ್ರೆಸ್‌ ಜೊತೆಯಲ್ಲಿ ಬೆಂಗಳೂರು-ಗೋವಾ ನಡುವೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌?

Bengaluru: ಪಂಚಗಂಗಾ ಎಕ್ಸ್‌ಪ್ರೆಸ್‌ ಜೊತೆಯಲ್ಲಿ ಬೆಂಗಳೂರು-ಗೋವಾ ನಡುವೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌?

Bengaluru: ಪಂಚಗಂಗಾ ಎಕ್ಸ್‌ಪ್ರೆಸ್‌ ಜೊತೆಯಲ್ಲಿ ಬೆಂಗಳೂರು-ಗೋವಾ ನಡುವೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌?

ಬೆಂಗಳೂರು (ಫೆ.21): ಬೆಂಗಳೂರು ಮತ್ತು ಗೋವಾ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಓಡಿಸಲು ಸಾಧ್ಯವೇ? ನೈಋತ್ಯ ರೈಲ್ವೆ (SWR), ದಕ್ಷಿಣ ರೈಲ್ವೆ ಮತ್ತು ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (KRCL) ಈ ತಿಂಗಳ ಆರಂಭದಲ್ಲಿ ಯಶವಂತಪುರ ಮತ್ತು ಮಡಗಾಂವ್ ನಡುವೆ ಅಂತಹ ರೈಲಿನ ಪ್ರಸ್ತಾವನೆಯೊಂದಿಗೆ ರೈಲ್ವೆ ಮಂಡಳಿಯನ್ನು ಸಂಪರ್ಕಿಸಿವೆ ಎಂದು ವರದಿಯಾಗಿದೆ. ಸದ್ಯ ಈ ಮಾರ್ಗದಲ್ಲಿ ಸಂಜೆಯ ವೇಳೆಗೆ ಅತ್ಯಂತ ಜನಪ್ರಿಯ ಪಂಚಗಂಗಾ ಎಕ್ಸ್‌ಪ್ರೆಸ್‌ ವಾರದ ಎಲ್ಲಾ ದಿನವೂ ಓಡಾಟ ನಡೆಸುತ್ತಿದೆ.

ರೈಲ್ವೆ ಮಂಡಳಿಗೆ ಸಲ್ಲಿಸಿರುವ ಪ್ರಸ್ತಾವನೆಯ ಪ್ರಕಾರ, ರೈಲು ವಾರದಲ್ಲಿ ಆರು ದಿನಗಳು ಓಡಲಿದ್ದು, ಬೆಳಿಗ್ಗೆ 6:05 ಕ್ಕೆ ಯಶವಂತಪುರದಿಂದ ಹೊರಡುತ್ತದೆ. ಇದು 12 ಗಂಟೆಗಳಿಗಿಂತ ಹೆಚ್ಚು ಕಾಲ ಸಂಚಾರ ಮಾಡಿ ಮತ್ತು ಸಂಜೆ 7:15 ರ ವೇಳೆಗೆ ಗೋವಾದ ಮಡ್ಗಾಂವ್ ತಲುಪುತ್ತದೆ. ನಿಲ್ದಾಣಗಳ ನಡುವೆ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ ಮತ್ತು ಪಡೀಲ್‌ನಲ್ಲಿ ಈ ಟ್ರೇಲ್‌ ನಿಲ್ಲಲಿದೆ. ಹೋಲಿಕೆ ಮಾಡುವುದಾದರೆ, ಸದ್ಯ ಇರುವ ಯಶವಂತಪುರ-ವಾಸ್ಕೋ ಡ ಗಾಮಾ ಎಕ್ಸ್‌ಪ್ರೆಸ್ 700 ಕಿ.ಮೀ ಕ್ರಮಿಸಲು ಸುಮಾರು 15 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ವಿವರವಾದ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಸ್ತಾಪಿಸಲಾಗಿದ್ದರೂ, ಅದು ಬದಲಾವಣೆಗಳಿಗೆ ಒಳಪಟ್ಟಿರಬಹುದು ಮತ್ತು ರೈಲ್ವೆ ಮಂಡಳಿಯು ವಲಯಗಳು ಬೆಳಿಗ್ಗೆ 6:30 ರ ನಂತರ ರೈಲು ಪ್ರಾರಂಭಿಸುವುದನ್ನು ಪರಿಗಣಿಸುವಂತೆ ಕೇಳಿದೆ.

ಕೆಎಸ್ಆರ್ ಬೆಂಗಳೂರು ನಿಲ್ದಾಣ ರಾಜಧಾನಿಯಲ್ಲಿ ಅತ್ಯಂತ ಆದ್ಯತೆಯ ನಿಲ್ದಾಣವಾಗಿದ್ದರೂ, ಅಲ್ಲಿ ನಿರ್ವಹಣಾ ಸ್ಥಳಗಳ ಕೊರತೆಯನ್ನು ನೈಋತ್ಯ ರೈಲ್ವೆ ಗಮನಸೆಳೆದಿದೆ. ಟರ್ಮಿನಲ್ ನಿಲ್ದಾಣಗಳ ನಡುವಿನ ಅಂತರವು ಬಹಳ ಇರುವುದರಿಂದ, ಸೇವೆಗೆ ಏಕಕಾಲದಲ್ಲಿ ಎರಡು ವಂದೇ ಭಾರತ್ ರೇಕ್‌ಗಳು ಬೇಕಾಗುತ್ತವೆ.

50ಕಿ.ಮೀಗಿಂತ ಕಡಿಮೆ ವೇಗದಲ್ಲಿ ಸಂಚಾರ

ಈ ರೈಲು ಸರಾಸರಿ ಗಂಟೆಗೆ 50 ಕಿ.ಮೀ ಗಿಂತ ಕಡಿಮೆ ವೇಗದಲ್ಲಿ ಚಲಿಸುವ ನಿರೀಕ್ಷೆಯಿದೆ ಎಂದು ರೈಲ್ವೆ ಮಂಡಳಿ ನಿರೀಕ್ಷಿಸುತ್ತದೆ. ಘಾಟ್ ವಿಭಾಗಗಳಲ್ಲಿ, ಇದು ಗಂಟೆಗೆ 30 ಕಿ.ಮೀ ಗೆ ಮತ್ತಷ್ಟು ಸೀಮಿತವಾಗಬಹುದು. ಗಂಟೆಗೆ 160 ಕಿ.ಮೀ ಗಿಂತ ಹೆಚ್ಚು ವೇಗದಲ್ಲಿ ಚಲಿಸುವ ಸಾಮರ್ಥ್ಯವಿರುವ ರೈಲಿಗೆ, ಬೆಂಗಳೂರು ಮತ್ತು ಗೋವಾ ನಡುವಿನ ಪ್ರಯಾಣ ಇನ್ನೂ ನಿಧಾನವಾಗಿರುತ್ತದೆ.

"ನಿಲುಗಡೆಗಳ ಕುರಿತು ರೈಲ್ವೆ ಮಂಡಳಿ ಇನ್ನೂ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ ಮತ್ತು ಕೋಚಿಂಗ್ ಅಧಿಸೂಚನೆಯನ್ನು ಹೊರಡಿಸಿಲ್ಲ. SWR ತನ್ನ ಇನ್‌ಪುಟ್‌ಗಳನ್ನು ಸಲ್ಲಿಸಿದೆ ಮತ್ತು ನಿರ್ಧಾರಕ್ಕಾಗಿ ಕಾಯುತ್ತಿದೆ" ಎಂದು SWR ಮುಖ್ಯಸ್ಥ PRO ಮಂಜುನಾಥ್ ಕನಮಾಡಿ ತಿಳಿಸಿದ್ದಾರೆ.

Source link

Leave a Reply

Your email address will not be published. Required fields are marked *