
ನೀನು ಯಾಕೆ ಹೀಗೆ ಮಾಡಿದೆ, ನೀನು ಏನು ಮಾಡಿದ್ದೀಯ ನೋಡು ಅಂತ ಮಕ್ಕಳನ್ನು ದೂಷಿಸಬೇಡಿ. ಮಕ್ಕಳ ಮೇಲೆ ದೂರು ಹೇಳುವುದು ಪೋಷಕರ ಉದ್ದೇಶವಾಗಿರಬಾರದು. ಮಕ್ಕಳಿಗೆ ಸಮಸ್ಯೆಯನ್ನು ಅರ್ಥ ಮಾಡಿಸುವುದು ಪೋಷಕರ ಕರ್ತವ್ಯ. ಮಕ್ಕಳನ್ನು ದೂಷಿಸುತ್ತಾ ಹೋದರೆ ಅವರಲ್ಲಿ ಆತ್ಮವಿಶ್ವಾಸ, ಸುರಕ್ಷತೆಯ ಭಾವನೆ ಕಡಿಮೆಯಾಗುತ್ತದೆ. ಅವರು ತಮ್ಮ ವೈಯಕ್ತಿಕ ವಿಷಯಗಳನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಹಿಂಜರಿಯುತ್ತಾರೆ.
ಬದಲಾಗಿ ಅವರ ತಪ್ಪನ್ನು ನೇರವಾಗಿ ಹೇಳಬಹುದು. ಉದಾಹರಣೆಗೆ, ಮಕ್ಕಳು ಆಟಿಕೆಗಳನ್ನು ಎಸೆದಾಗ, “ಆಟಿಕೆಗಳನ್ನು ಎಸೆದಾಗ ನನಗೆ ಬೇಸರವಾಗುತ್ತದೆ, ಅದು ಇತರರಿಗೆ ನೋವುಂಟು ಮಾಡಬಹುದು” ಅಂತ ಮಕ್ಕಳಿಗೆ ಹೇಳಬಹುದು.