T20 ವಿಶ್ವಕಪ್ 2026: T20 ನಿಂದ ಸೂಪರ್-8 ಸುತ್ತಿನಲ್ಲಿ ಕಣಕ್ಕಿಳಿಯಲು 8 ತಂಡಗಳು ಸಜ್ಜಾಗಿವೆ. ಈ ಸುತ್ತಿನ ಮೊದಲ ಭಕ್ಷ್ಯ ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ಮುಖಾಮುಖಿಯಾಗಲಿದೆ. ಇನ್ನು ದ್ವಿತೀಯ ಕೊಡುಗೆ ಶ್ರೀಲಂಕಾ ಮತ್ತು ಇಂಗ್ಲೆಂಡ್ ತಂಡಗಳು ಸೆಣಸಲಿದೆ. ನಾಳೆ (ಫೆ.22) ನಡೆಯಲಿರುವ ಮೂರನೇ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯದ ಟೀಮ್ ಇಂಡಿಯಾದ ಬಂಡವಾಳವನ್ನು ಬಯಲು ಎಂದು ಸವಾಲು ಹಾಕಿದ್ದಾರೆ ಸೌತ್ ಆಫ್ರಿಕಾ ತಂಡದ ಕೋಚ್ ಶುಕ್ರಿ ಕಾನ್ರಾಡ್.
ಸೌತ್ ಆಫ್ರಿಕಾ ತಂಡದ ಮುಂದಿನ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಿರುವ ಶುಕ್ರಿ ಕಾನ್ರಾಡ್, ಭಾರತ ತಂಡವು ಮೊದಲ ಸುತ್ತಿನಲ್ಲಿ ಯಾವುದೇ ಬಲಿಷ್ಠ ತಂಡದ ವಿರುದ್ಧ ಕಣಕ್ಕಿಳಿದಿಲ್ಲ. ಇದೀಗ ಅವರು ಸೌತ್ ಆಫ್ರಿಕಾ ತಂಡವನ್ನು ಎದುರಿಸಬೇಕಾಗಿದೆ. ಹೀಗಾಗಿ ಅವರು ಹೆಚ್ಚಿನ ಒತ್ತಡಕ್ಕೆ ಒಳಗಾಗಲಿದ್ದಾರೆ.
ಭಾರತವು ಹಾಲಿ ಮತ್ತು ಆತಿಥೇಯ ರಾಷ್ಟ್ರವಾಗಿರುವುದರಿಂದ ಅವರ ಮೇಲೆ ಅಪಾರ ನಿರೀಕ್ಷೆಯಿದೆ. ಈ ಒತ್ತಡವನ್ನು ಬಳಸಿ ಭಾರತವನ್ನು “ಅಸಹಾಯಕ” ಸ್ಥಿತಿಗೆ ತಳ್ಳುವುದಾಗಿ ಕಾನ್ರಾಡ್ ಹೇಳಿದ್ದಾರೆ.
ಕೆಲವು ಆಟಗಾರರ ಫಾರ್ಮ್ ಬಗ್ಗೆ ಕೂಡ ಪರೋಕ್ಷವಾಗಿ ಮಾತನಾಡಿದ ಅವರು, ಸತತವಾಗಿ ವೈಫಲ್ಯ ಅನುಭವಿಸುತ್ತಿರುವ ಭಾರತದ ಆಟಗಾರರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇದರ ನಡುವೆ ಅಭಿಮಾನಿಗಳ ಕಡೆಯಿಂದಲೂ ಟೀಮ್ ಇಂಡಿಯಾ ಆಟಗಾರರು ಒತ್ತಡ ಎದುರಿಸುತ್ತಿದ್ದಾರೆ.
ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಲಕ್ಷಾಂತರ ಅಭಿಮಾನಿಗಳ ಎದುರು ಆಡುವುದು ಭಾರತಕ್ಕೆ ಶಕ್ತಿಯೂ ಹೌದು, ದೊಡ್ಡ ಹೊರೆಯೂ ಹೌದು. ಹೀಗಾಗಿ ಈ ಪಂದ್ಯದ ಮೂಲಕ ನಾವು ಭಾರತ ತಂಡದ ಬಂಡವಾಳ “ಬಯಲು” ನಡೆಯಲಿದೆ ಶುಕ್ರಿ ಕಾನ್ರಾಡ್ ಹೇಳಿದ್ದಾರೆ.
ಸೌತ್ ಆಫ್ರಿಕಾ ತಂಡದ ಕೊಚ್ನ ಈ ಹೇಳಿಕೆಯು ಮೈಂಡ್ ಗೇಮ್ ಎಂಬುದು ಸ್ಪಷ್ಟ. ಏಕೆಂದರೆ ಈ ಹಿಂದೆ ಕೂಡ ಭಾರತದ ವಿರುದ್ಧ ಟೆಸ್ಟ್ ಪಂದ್ಯದ ವೇಳೆ ಶುಕ್ರಿರಾಡ್ ಇದೇ ಮಾದರಿಯ ಹೇಳಿಕೆ ನೀಡಿದ್ದರು.
2025 ರಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಟೆಸ್ಟ್ ಸರಣಿಯ 2ನೇ ಟೆಸ್ಟ್ ಪಂದ್ಯದ ವೇಳೆ ಮಾತನಾಡಿದ ಶುಕ್ರಿ ಕಾನ್ರಾಡ್, ಟೀಮ್ ಇಂಡಿಯಾ ಆಟಗಾರರನ್ನು ನಾವು ಮಕಾಡೆ ಮಲಗಿಸುತ್ತೇವೆ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಭಾರತೀಯ ಮಾಜಿ ಕ್ರಿಕೆಟಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಇದನ್ನೂ ಓದಿ: ಕೇವಲ 58 ಎಸೆತ… ಆಸ್ಟ್ರೇಲಿಯಾ ತಂಡದ ವಿಶ್ವ ದಾಖಲೆಯ ಚೇಸಿಂಗ್
ಇದೀಗ ಅಹಮದಾಬಾದ್‌ನಲ್ಲಿ ಟೀಮ್ ಇಂಡಿಯಾದ ಬಂಡವಾಳ ಬಯಲು ನಡೆಯಲಿದೆ ಎಂಬ ಮೂಲಕ ಶುಕ್ರಿ ಕಾನ್ರಾಡ್ ಮೈಂಡ್ ಆಟವಾಡಿದ್ದಾರೆ. ಈ ಮೂಲಕ ಭಾರತ ತಂಡವನ್ನು ಸೋಲಿಸಲು ತೆರೆಮರೆಯ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ರಂದು ಪ್ರಕಟಿಸಲಾಗಿದೆ – 10:57 am, ಶನಿ, 21 ಫೆಬ್ರವರಿ 26