Headlines

Bigg Bossಗೆ ಎಂಟ್ರಿ ಆದಾಗ್ಲೇ ಎಲಿಮಿನೇಷನ್​ಗೂ ಸಹಿ! ಜನರ ವೋಟ್​ ಅನ್ನೋದೇ ಸುಳ್ಳು- ಕಹಿ ಅನುಭವ ತೆರೆದಿಟ್ಟ ನಟಿ ಚಿತ್ರಾಲ್​

Bigg Bossಗೆ ಎಂಟ್ರಿ ಆದಾಗ್ಲೇ ಎಲಿಮಿನೇಷನ್​ಗೂ ಸಹಿ! ಜನರ ವೋಟ್​ ಅನ್ನೋದೇ ಸುಳ್ಳು- ಕಹಿ ಅನುಭವ ತೆರೆದಿಟ್ಟ ನಟಿ ಚಿತ್ರಾಲ್​

Bigg Bossಗೆ ಎಂಟ್ರಿ ಆದಾಗ್ಲೇ ಎಲಿಮಿನೇಷನ್​ಗೂ ಸಹಿ! ಜನರ ವೋಟ್​ ಅನ್ನೋದೇ ಸುಳ್ಳು- ಕಹಿ ಅನುಭವ ತೆರೆದಿಟ್ಟ ನಟಿ ಚಿತ್ರಾಲ್​

ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿ ಚಿತ್ರಾಲ್​ ರಂಗಸ್ವಾಮಿ ಅವರು ಷೋ ಬಗ್ಗೆ ಕೆಲವು ಆಘಾತಕಾರಿ ಸತ್ಯಗಳನ್ನು ಬಹಿರಂಗಪಡಿಸಿದ್ದಾರೆ. ಎಲಿಮಿನೇಷನ್‌ಗಳನ್ನು ಮೊದಲೇ ಒಪ್ಪಂದದ ಮೂಲಕ ನಿರ್ಧರಿಸಲಾಗುತ್ತದೆ ಮತ್ತು ಸಾರ್ವಜನಿಕ ವೋಟಿಂಗ್ ಪ್ರಕ್ರಿಯೆಯು ಕೇವಲ ನಾಟಕ ಎಂದು ಅವರು ಆರೋಪಿಸಿದ್ದಾರೆ.

ಬಿಗ್​ಬಾಸ್ ಬಗ್ಗೆ ಇದಾಗಲೇ ಕೆಲವು ಸ್ಪರ್ಧಿಗಳು ಅಸಮಾಧಾನ ಹೊರಹಾಕುತ್ತಿದ್ದಾರೆ. ಬಹುತೇಕ ಎಲ್ಲಾ ಭಾಷೆಗಳ ಬಿಗ್​ಬಾಸ್​​ನಲ್ಲಿಯೂ ಕೆಲವೊಂದು ಅಪಸ್ವರಗಳು ಕೇಳಿಬರುವುದು ಉಂಟು. ಹೆಸರು ರಿಯಾಲಿಟಿ ಷೋ ​ಆದ್ರೂ ಅದರ ರಿಯಾಲಿಟಿ ದೇವರಿಗೇ ಪ್ರೀತಿ ಎನ್ನುವ ಮಾತು ಬಹುತೇಕ ಎಲ್ಲಾ ರಿಯಾಲಿಟಿ ಷೋಗಳಲ್ಲಿಯೂ ಕೇಳಿ ಬರುವುದು ಉಂಟು. ಆದರೆ ಇದೀಗ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಯಾಗಿದ್ದ ನಟಿ, ಬಾಡಿ ಬಿಲ್ಡರ್​ ಆಗಿರೋ ಚಿತ್ರಾಲ್​ ರಂಗಸ್ವಾಮಿ ಅವರು ಶಾಕಿಂಗ್​ ಘಟನೆಯೊಂದನ್ನು ರಿವೀಲ್​ ಮಾಡಿದ್ದಾರೆ.

Rapid Rashmi ಯುಟ್ಯೂಬ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ನಟಿ ಚಿತ್ರಾಲಾ, ಹೇಗೆ ಗೊತ್ತಿಲ್ಲದೇ ಒಪ್ಪಂದಕ್ಕೆ ಸಹಿ ಹಾಕಿಸಿಕೊಳ್ಳಲಾಗುತ್ತದೆ, ವೋಟಿಂಗ್​ ನೆಪದಲ್ಲಿ ಮೊದಲೇ ಎಲಿಮಿನೇಟ್​ ಮಾಡೋದನ್ನು ಫಿಕ್ಸ್​ ಮಾಡಿಕೊಳ್ಳಲಾಗುತ್ತದೆ ಎಂದು ತನ್ನ ಅನುಭವಕ್ಕೆ ಬಂದಿರುವ ಮಾತುಗಳನ್ನಾಡಿದ್ದಾರೆ. ಅಂದು ನಡೆದ ಅವಮಾನದಿಂದ ಹೊರ ಬರಲು ಕಷ್ಟವಾಗಿದೆ ಎನ್ನುತ್ತಿದ್ದಾರೆ.

ಬಿಗ್​ಬಾಸ್​ಗೆ ಹೋಗುವ ಮೊದಲು ಒಂದು ಅಗ್ರೀಮೆಂಟ್​ಗೆ ಸಹಿ ಹಾಕಿಸಿಕೊಳ್ತಾರೆ. ಅದರಲ್ಲಿ ಮೊದಲೇ ನಾವು ರಿಜೆಕ್ಟ್​ ಆಗುವ ಬಗ್ಗೆ ಉಲ್ಲೇಖಿಸಿರಲಾಗುತ್ತದೆ. ಇರುವಷ್ಟು ದಿವಸ ದುಡ್ಡು ಕೊಡ್ತಾರೆ ಎಂದು ಆಸೆಯಿಂದ ಅಲ್ಲಿ ಹೋಗಬೇಕಷ್ಟೇ. ನಾನ್ಯಾಕೇ ಈ ಸುಳ್ಳು ಅಗ್ರೀಮೆಂಟ್​ಗೆ ಸಹಿ ಹಾಕಬೇಕು ಎಂದು ನನಗೆ ಎನ್ನಿಸಿತು. ವ್ಯಕ್ತಿತ್ವದ ಆಟ ಎನ್ನುವ ಟ್ಯಾಗ್​ಲೈನ್​ ಬೇರೆ. ಅಲ್ಲಿ ವ್ಯಕ್ತಿತ್ವ ಹಾಳು ಮಾಡಿಕೊಳ್ಳಲು ಹೋಗಬೇಕಷ್ಟೇ. ಮೊದಲೇ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡು, ಸ್ಟೇಜ್​ ಮೇಲೆ ನಮ್ಮ ವ್ಯಕ್ತಿತ್ವ ಹಾಳು ಮಾಡ್ತಾರೆ. ಇದಕ್ಕೆ ರೆಡಿ ಇದ್ರೆ ಹೋಗಬೇಕು ಅಷ್ಟೇ ಎಂದು ಖಾರವಾಗಿ ನುಡಿದಿದ್ದಾರೆ ನಟಿ.

ನನ್ನನ್ನು ಈ ಷೋಗೆ ಕರೆದವರ ಬಳಿಯೇ ಈ ಬಗ್ಗೆ ಪ್ರಶ್ನಿಸಿದ್ದೆ. ಆದರೆ ಅದಕ್ಕೆ ಸೂಕ್ತ ಉತ್ತರ ಬರಲಿಲ್ಲ ಎಂದಿದ್ದಾರೆ. ಇದು ಸ್ಕ್ರಿಪ್ಟೆಡ್​ ಅಂತಾರೆ. ಆದ್ರೆ ಸ್ಕ್ರಿಪ್ಟೆಡ್​ ಅಲ್ಲ. ಅಲ್ಲಿ ನಡೆಯೋದೇ ಬೇರೆ ರೀತಿ. ಹೀಗೆಲ್ಲಾ ಒಪ್ಪಂದ ಮಾಡಿಕೊಂಡೇ ಆಗೋದು. ವೋಟಿಂಗ್​ ಅಂತಾರೆ.. ಅಲ್ಲಿ ವೀಕ್ಷಕರೇ ಮತದಾರರು ಅಂತಾರೆ, ಎಲ್ಲವೂ ಸುಳ್ಳೇ ಎಂದು ಇನ್ನೊಂದು ಶಾಕಿಂಗ್​ ವಿಷ್ಯ ಹೇಳಿದ್ದಾರೆ.

ನಾಳೆ ವೋಟಿಂಗ್​ ನಡೆಯುತ್ತೆ, ನಿಮ್ಮ ಬಗ್ಗೆ ಗೊತ್ತಾಗತ್ತೆ ಎಂದು ಒಂದಿಷ್ಟು ಮಂದಿಯನ್ನು ಎಲಿಮಿನೇಟ್​ ಮಾಡಿರುತ್ತಾರೆ. ಆದರೆ ವೋಟಿಂಗ್​ ರಿಸಲ್ಟ್​ ಏನು ಬರುತ್ತೋ ಅದರ ಹಿಂದಿನ ದಿನವೇ ಯಾರು ಹೊರಗೆ ಹೋಗಬೇಕೆಂದು ಡಿಸೈಡ್​ ಆಗಿರುತ್ತೋ ಅವರು ಪ್ಯಾಕ್​ ಮಾಡಿಕೊಳ್ಳಬೇಕು. ನಾವು ಹೋಗುವ ವಿಡಿಯೋ ಎಲ್ಲಾ ಮೊದಲೇ ಶೂಟ್​ ಮಾಡಿಕೊಳ್ತಾರೆ ಎಂದು ನಟಿ ಹೇಳಿದ್ದಾರೆ.

ವೀಕ್ಷಕರ ಓಟು ಅಂತಾರೆ. ಅಲ್ಲಿ ಒಂದಿಷ್ಟು ಅವರದ್ದೇ ಜನರನ್ನು ಕರೆಸಿಕೊಂಡಿರ್ತಾರೆ. 15 ಜನ ಜ್ಯೂನಿಯರ್ ಆರ್ಟಿಸ್ಟ್‌ಗಳು ವೋಟ್ ಹಾಕಿದ್ರು. ಆ ವೋಟ್‌ಗಳನ್ನು ಇಡೀ ಕರ್ನಾಟಕದವ್ರು ಹಾಕಿದ್ದು ಅಂತ ತೋರಿಸಿದ್ರು. ಮಧ್ಯರಾತ್ರಿಯೇ ನಮ್ಮ ಪ್ಯಾಕಿಂಗ್​ ನಡೆದಿರುತ್ತದೆ. ಮಾರನೆಯ ದಿನ ವೋಟ್​ ಅಂತ ವೀಕ್ಷಕರಿಗೆ ತೋರಿಸ್ತಾರೆ. ಆಮೇಲೆ ನಾವು ಹೊರಗಡೆ ಹೋಗುವ ರೀತಿ ಎಲ್ಲಾ ನಡೆಸುತ್ತಾರೆ. ಆದರೆ ಎಲ್ಲವೂ ಹಿಂದಿನ ರಾತ್ರಿಯೇ ಶೂಟಿಂಗ್​ ಆಗಿ ಹೋಗಿರುತ್ತದೆ ಎಂದಿದ್ದಾರೆ ನಟಿ ಚಿತ್ರಾಲ್​.

Source link

Leave a Reply

Your email address will not be published. Required fields are marked *