Headlines

ಶಾಸಕ ಬೈರತಿ ಬಸವರಾಜ್‌ಗೆ ಡಬಲ್ ಶಾಕ್; ಒಂದ್ಕಡೆ ಜೈಲುಪಾಲು, ಮತ್ತೊಂದ್ಕಡೆ ಮನೆ ಊಟದ ಆಸೆಯೂ ಮಣ್ಣುಪಾಲು! | Byrathi Basavaraj Judicial Custody Biklu Shiva Case Parappana Agrahara Sat

ಶಾಸಕ ಬೈರತಿ ಬಸವರಾಜ್‌ಗೆ ಡಬಲ್ ಶಾಕ್; ಒಂದ್ಕಡೆ ಜೈಲುಪಾಲು, ಮತ್ತೊಂದ್ಕಡೆ ಮನೆ ಊಟದ ಆಸೆಯೂ ಮಣ್ಣುಪಾಲು! | Byrathi Basavaraj Judicial Custody Biklu Shiva Case Parappana Agrahara Sat



ಶಾಸಕ ಬೈರತಿ ಬಸವರಾಜ್‌ಗೆ ಡಬಲ್ ಶಾಕ್; ಒಂದ್ಕಡೆ ಜೈಲುಪಾಲು, ಮತ್ತೊಂದ್ಕಡೆ ಮನೆ ಊಟದ ಆಸೆಯೂ ಮಣ್ಣುಪಾಲು! | Byrathi Basavaraj Judicial Custody Biklu Shiva Case Parappana Agrahara Sat

ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಕೆ.ಆರ್.ಪುರ ಶಾಸಕ ಬೈರತಿ ಬಸವರಾಜು ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಫೆಬ್ರವರಿ 26ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಮನೆ ಊಟದ ಮನವಿ ತಿರಸ್ಕರಿಸಿದ ನ್ಯಾಯಾಲಯ, ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದೆ.

ಬೆಂಗಳೂರು (ಫೆ.21): ರಾಜಧಾನಿಯಲ್ಲಿ ಸಂಚಲನ ಮೂಡಿಸಿದ್ದ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಐದನೇ ಆರೋಪಿಯಾಗಿರುವ (A5) ಕೆ.ಆರ್.ಪುರ ಶಾಸಕ ಹಾಗೂ ಮಾಜಿ ಸಚಿವ ಬೈರತಿ ಬಸವರಾಜು ಅವರಿಗೆ ನ್ಯಾಯಾಲಯ ಬಿಗ್ ಶಾಕ್ ನೀಡಿದೆ. ಸಿಐಡಿ ಕಸ್ಟಡಿ ಮುಕ್ತಾಯದ ನಂತರ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಫೆಬ್ರವರಿ 26ರವರೆಗೆ ನ್ಯಾಯಾಂಗ ಬಂಧನಕ್ಕೆ (Judicial Custody) ಒಪ್ಪಿಸಿ ಆದೇಶಿಸಿದ್ದಾರೆ.

ಸಿಐಡಿ ಕಸ್ಟಡಿಗೆ ವಕೀಲರ ವಿರೋಧ:

ಬೈರತಿ ಬಸವರಾಜು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಿಐಡಿ ಅಧಿಕಾರಿಗಳು, ‘ಆರೋಪಿ ತನಿಖೆಗೆ ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡುತ್ತಿಲ್ಲ. ಪ್ರಕರಣದ ಆಳವಾದ ವಿಚಾರಣೆ ನಡೆಸಲು ಇನ್ನೂ ಕಾಲಾವಕಾಶದ ಅಗತ್ಯವಿದೆ, ಆದ್ದರಿಂದ ಹೆಚ್ಚಿನ ದಿನಗಳ ಕಾಲ ಕಸ್ಟಡಿಗೆ ನೀಡಬೇಕು’ ಎಂದು ಮನವಿ ಮಾಡಿದರು. ಆದರೆ, ಇದಕ್ಕೆ ಬೈರತಿ ಪರ ವಕೀಲರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈಗಾಗಲೇ 9 ದಿನಗಳ ಕಾಲ ಕಸ್ಟಡಿಯಲ್ಲಿ ಇರಿಸಿಕೊಳ್ಳಲಾಗಿದೆ, ಶಾಸಕರ ಆರೋಗ್ಯ ಹದಗೆಟ್ಟಿರುವುದರಿಂದ ಇನ್ನು ಮುಂದೆ ಕಸ್ಟಡಿಗೆ ನೀಡುವುದು ಸರಿಯಲ್ಲ ಎಂದು ವಾದಿಸಿದರು.

ಆರೋಗ್ಯದ ಬಗ್ಗೆ ಸುದೀರ್ಘ ಚರ್ಚೆ:

ವಿಚಾರಣೆ ವೇಳೆ ಶಾಸಕರ ಆರೋಗ್ಯದ ಬಗ್ಗೆ ನ್ಯಾಯಾಧೀಶರು ಮಾಹಿತಿ ಕೇಳಿದರು. ಬೈರತಿ ಬಸವರಾಜು ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಇರುವ ಕಾರಣ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಸಿಐಡಿ ಪರ ವಕೀಲರು ಕೋರ್ಟ್‌ಗೆ ತಿಳಿಸಿದರು. ಈ ವೇಳೆ ಬೈರತಿ ಪರ ವಕೀಲರು, ‘ಜೈಲಿನಲ್ಲಿ ಹೃದಯ ಸಂಬಂಧಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ತಜ್ಞ ವೈದ್ಯರಿಲ್ಲ. ಜನರಲ್ ಫಿಸಿಶಿಯನ್ ಹೃದಯದ ಸಮಸ್ಯೆಯನ್ನು ಹೇಗೆ ನಿಭಾಯಿಸಲು ಸಾಧ್ಯ?’ ಎಂದು ಪ್ರಶ್ನಿಸಿ, ಆಸ್ಪತ್ರೆಯಲ್ಲಿಯೇ ಮುಂದುವರಿಸುವಂತೆ ಕೇಳಿಕೊಂಡರು.

ಮನೆ ಊಟಕ್ಕೆ ಕೋರ್ಟ್ ‘ನೋ’:

ಇದೇ ವೇಳೆ ಬೈರತಿ ಬಸವರಾಜು ಅವರಿಗೆ ಜೈಲಿನಲ್ಲಿ ‘ಮನೆ ಊಟ’ (Home Food) ನೀಡುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಹೈಕೋರ್ಟ್‌ನ ಇತ್ತೀಚಿನ ಕಠಿಣ ಆದೇಶಗಳನ್ನು ಉಲ್ಲೇಖಿಸಿದ ನ್ಯಾಯಾಧೀಶರು, ಮನೆ ಊಟದ ಮನವಿಯನ್ನು ನೇರವಾಗಿ ತಿರಸ್ಕರಿಸಿದರು. ‘ಜಯದೇವ ಆಸ್ಪತ್ರೆಯ ವೈದ್ಯರು ಸೂಚಿಸಿರುವ ಆಹಾರದ ಪಟ್ಟಿಯನ್ನು ಜೈಲಿನ ಅಧಿಕಾರಿಗಳು ಅನುಸರಿಸಬೇಕು. ವೈದ್ಯರು ಸೂಚಿಸಿದ ರೀತಿಯ ಪಥ್ಯದ ಆಹಾರವನ್ನು ಜೈಲಿನಲ್ಲೇ ತಯಾರಿಸಿ ನೀಡಬೇಕು’ ಎಂದು ನ್ಯಾಯಾಲಯ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಫೆಬ್ರವರಿ 26ರವರೆಗೆ ಜೈಲುವಾಸ:

ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ಬೈರತಿ ಬಸವರಾಜು ಅವರನ್ನು ಫೆಬ್ರವರಿ 26ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ತೀರ್ಪು ಹೊರಬೀಳುತ್ತಿದ್ದಂತೆಯೇ ಶಾಸಕರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ. ಹತ್ಯೆ ಪ್ರಕರಣದಲ್ಲಿ ಪ್ರಭಾವಿ ಶಾಸಕರೊಬ್ಬರು ಜೈಲು ಸೇರಿರುವುದು ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.



Source link

Leave a Reply

Your email address will not be published. Required fields are marked *