
ನಂತರ, 2016ರ ಟಿ20 ವಿಶ್ವಕಪ್‌ನಲ್ಲಿ ನೆಹ್ರಾಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತು. ನಾಗ್ಪುರದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲೂ ಅವರು ಡಕೌಟ್ ಆದರು. ಆ ಪಂದ್ಯದಲ್ಲಿ ಭಾರತ ಕೇವಲ 79 ರನ್‌ಗಳಿಗೆ ಆಲೌಟ್ ಆಗಿತ್ತು. ವಿಶೇಷ ಅಂದ್ರೆ, ನೆಹ್ರಾ ಡಕೌಟ್ ಆದ ಈ ಮೂರೂ ಪಂದ್ಯಗಳಲ್ಲಿ ಭಾರತ ಸೋಲು ಕಂಡಿತ್ತು.
ಅಂದಹಾಗೆ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಆಶಿಶ್ ನೆಹ್ರಾ, ಕೋಚ್ ಆಗಿಯೂ ಸೈ ಎನಿಸಿಕೊಂಡಿದ್ದಾರೆ. ಕೋಚ್ ಆಗಿ ಗುಜರಾತ್ ಟೈಟಾನ್ಸ್‌ಗೆ ಮೊದಲ ಪ್ರಯತ್ನದಲ್ಲೇ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿಸಿದ್ದರು.