ಕೈಗೆಟುಕುವ ದರದಲ್ಲಿ ಅತ್ಯಂತ ಆಕರ್ಷಕ ಮಹೀಂದ್ರ ವಿಶನ್ ಎಸ್ ಕಾರು ರೆಡಿ, ಬೆಲೆ ಎಷ್ಟು?

ಕೈಗೆಟುಕುವ ದರದಲ್ಲಿ ಅತ್ಯಂತ ಆಕರ್ಷಕ ಮಹೀಂದ್ರ ವಿಶನ್ ಎಸ್ ಕಾರು ರೆಡಿ, ಬೆಲೆ ಎಷ್ಟು?

ಕೈಗೆಟುಕುವ ದರದಲ್ಲಿ ಅತ್ಯಂತ ಆಕರ್ಷಕ ಮಹೀಂದ್ರ ವಿಶನ್ ಎಸ್ ಕಾರು ರೆಡಿ, ಬೆಲೆ ಎಷ್ಟು?

ಕೈಗೆಟುಕುವ ದರದಲ್ಲಿ ಅತ್ಯಂತ ಆಕರ್ಷಕ ಮಹೀಂದ್ರ ವಿಶನ್ ಎಸ್ ಕಾರು ರೆಡಿ, ಮಹೀಂದ್ರ ಮತ್ತೊಂದು ಎಸ್‌ಯುವಿ ಕಾರು ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಟೆಸ್ಟಿಂಗ್ ಪೂರ್ಣಗೊಳಿಸಿ ಉತ್ಪಾದನೆ ಹಂತಕ್ಕೆ ತಲುಪಿದೆ. ಇದರ ಬೆಲೆ ಎಷ್ಟು?

ಭಾರತದಲ್ಲಿ ಎಸ್‌ಯುವಿ ಹಾಗೂ ಜೀಪ್ ವಾಹನಗಳಲ್ಲಿ ಮಹೀಂದ್ರ ಬ್ರ್ಯಾಂಡ್ ಮುಂಚೂಣಿಯಲ್ಲಿದೆ. ಮಹೀಂದ್ರ ಈಗಾಗಲೇ ಅತ್ಯುತ್ತಮ ಎಸ್‌ಯುವಿ ಕಾರುಗಳನ್ನು ಬಿಡುಗಡೆ ಮಾಡಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. NU_IQ ಯೂನಿಬಾಡಿ ಪ್ಲಾಟ್‌ಫಾರ್ಮ್ ಅಡಿ ಹೊಸ ವಿಶನ್ ಎಸ್ ಕಾರು ಉತ್ಪಾದನೆಯಾಗಲಿದೆ. ಇದು ಅತೀ ಕಡಿಮೆ ಬೆಲೆ ಹಾಗೂ ಅತ್ಯಂತ ಆಕರ್ಷಕ ಎಸ್‌ಯವಿಯಾಗಿ ಹೊರಹೊಮ್ಮಲಿದೆ.

ಮಹೀಂದ್ರ ವಿಶನ್ ಎಸ್ ಕಾರು ಟೆಸ್ಟಿಂಗ್ ಪೂರ್ಣಗೊಂಡಿದೆ. ಇದೀಗ ಉತ್ಪಾದನೆಗೆ ಸಜ್ಜಾಗಿದೆ. ದೇಶದ ವಿವಿದ ರಸ್ತೆ, ವಿವಿದ ಹವಾಮಾನಗಳಲ್ಲಿ ಕಾರು ಪರೀಕ್ಷೆ ಮಾಡಲಾಗಿದೆ. ಸುರಕ್ಷತೆ, ಭಾರತದ ರಸ್ತೆಗಳಲ್ಲಿ ಉತ್ತಮ ಪರ್ಫಾಮೆನ್ಸ್ ನೀಡುವ ಕಾರು ಇದಾಗಿದೆ. ವಿಶನ್ ಎಸ್ ಕಾರು ಹಲವು ಹೊಸ ಫೀಚರ್ ಹೊಂದಿದೆ.

ಮಹೀಂದ್ರ ವಿಶನ್ ಮಹೀಂದ್ರ 3ಎಕ್ಸ್‌ಒ ಕಾರಿಗಿಂತ ಗೊಡ್ಡ, ಮಹೀಂದ್ರ ಸ್ಕಾರ್ಪಿಯೋ ಎನ್ ಕಾರಿಗಿಂತ ಚಿಕ್ಕ ಗಾತ್ರದಲ್ಲಿ ಇರಲಿದೆ. ಮೇಲ್ನೋಟಕ್ಕೆ ಮಸ್ಕ್ಯೂಲರ್ ರೀತಿ ಕಾಣಲಿದೆ. ಆಫ್ ರೋಡ್ ರಗಡ್ ಲುಕ್ ಮೂಲಕ ಈ ಕಾನ್ಸೆಪ್ಟ್ ಕಾರು ಭಾರಿ ಗಮನಸೆಳೆದಿತ್ತು. ಟೆಸ್ಟಿಂಗ್ ವೇಳೆ ಕೊಂಚ ಎನ್ ಲೈನ್ ಸ್ಕಾರ್ಪಿಯೋ ರೀತಿ ಗೋಚರಿಸುತ್ತಿದೆ.

ಮಹೀಂದ್ರ ವಿಶನ್ ಎಸ್ ಕಾರಿನ ಬೆಲೆ ಇನ್ನೂ ಬಹಿರಂಗವಾಗಿಲ್ಲ. ಸದ್ಯ ಉತ್ಪಾದನಾ ಹಂತದಲ್ಲಿದೆ. ಆದರೆ ಈ ಕಾರಿನ ಬೆಲೆ 6 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಒಳಗಿರಲಿದೆ ಎಂದು ಅಂದಾಜಿಸಲಾಗಿದೆ. ಸ್ಪರ್ಧಾತ್ಮಕ ಬೆಲೆಯಲ್ಲಿ ಈ ಕಾರು ಬಿಡುಗಡೆಯಾಗಲಿದೆ ಅನ್ನೋದು ಬಹುತೇಕ ಖಚಿತವಾಗಿದೆ.

ವಿಶನ್ ಎಸ್ ಕಾರಿನಲ್ಲಿ 3ಎಕ್ಸ್ಒ ಎಂಜಿನ್ ಬಳಕೆ ಮಾಡುವ ಸಾಧ್ಯತೆ ಇದೆ. 1.2 ಲೀಟರ್ TGDi ಪೆಟ್ರೋಲ್ ಎಂಜಿನ್ ಇದಾಗಿದ್ದು, 131 hp ಪವರ್ ಹಾಗೂ 230 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 1.5 ಲೀಟರ್ ಡೀಸೆಲ್ ಎಂಜಿನ್ ವೇರಿಯೆಂಟ್ 117 hp ಪವರ್ ಹಾಗೂ 300 Nm ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ.

Source link

Leave a Reply

Your email address will not be published. Required fields are marked *